• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ಕಾಂತಾರ ನೋಡಿಲ್ಲ ಎಂದು ಟ್ರೋಲ್ ಮಾಡಿದವರಿಗೆ ನಾನು ನೋಡಿದ್ದೇನೆ ಎಂದ ನಟಿ ರಶ್ಮಿಕಾ ಮಂದಣ್ಣ!

Mohan Shetty by Mohan Shetty
in Vijaya Time, ಮನರಂಜನೆ, ಲೈಫ್ ಸ್ಟೈಲ್
ಕಾಂತಾರ ನೋಡಿಲ್ಲ ಎಂದು ಟ್ರೋಲ್ ಮಾಡಿದವರಿಗೆ ನಾನು ನೋಡಿದ್ದೇನೆ ಎಂದ ನಟಿ ರಶ್ಮಿಕಾ ಮಂದಣ್ಣ!
0
SHARES
4
VIEWS
Share on FacebookShare on Twitter

Sandalwood : ನಟ ನಿರ್ದೇಶಕ ರಿಷಬ್ ಶೆಟ್ಟಿ (rashmika mandanna kannada movie) ನಿರ್ದೇಶಿಸಿ, ಅಭಿನಯಿಸಿದ ಕಾಂತಾರ ಚಿತ್ರವನ್ನು ರಶ್ಮಿಕಾ ನೋಡಿಲ್ಲ ಎಂಬ ಕಾರಣಕ್ಕೆ ನೆಟ್ಟಿಗರು ರಶ್ಮಿಕಾ ವಿರುದ್ಧ ಹಿಗ್ಗಾಮುಗ್ಗಾ ಟ್ರೋಲ್ ಮಾಡಿ ಅಪಹಾಸ್ಯ ಮಾಡಿದ್ದರು. ಸದ್ಯ ಈ ಎಲ್ಲಾ ಟ್ರೋಲ್‌ಗಳಿಗೆ ಇದೀಗ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದಾರೆ.

rashmika

ಈ ಬಗ್ಗೆ ಮಾತನಾಡಿದ ನಟಿ ರಶ್ಮಿಕಾ ಮಂದಣ್ಣ(Rashmika Mandanna), ರಿಷಬ್ ಶೆಟ್ಟಿಯವರ ಕಾಂತಾರ ಚಿತ್ರವನ್ನು ವೀಕ್ಷಿಸಿದ್ದೇನೆ ಮತ್ತು ಚಿತ್ರದ ಬಗ್ಗೆ ಕಾಂತಾರ ಚಿತ್ರದ ನಿರ್ಮಾಪಕರಿಗೆ ಸಂದೇಶಗಳನ್ನು ಕೂಡ ಕಳುಹಿಸಿದ್ದೇನೆ ಎಂದು ಮಾಧ್ಯಮದಲ್ಲಿ ಹೇಳಿದ್ದಾರೆ.

ಇತ್ತೀಚೆಗೆ ವಿಕಾಸ್ ಬಹ್ಲ್ ಅವರ ಗುಡ್ ಬೈ ಚಿತ್ರದಲ್ಲಿ ಕಾಣಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ,

ಕಾಂತಾರ ಸಿನಿಮಾವನ್ನು ನೋಡದಿದ್ದಕ್ಕಾಗಿ ಭಾರಿ ಟೀಕೆಗೆ ಒಳಗಾಗಿದ್ದರು. ಈ ಕುರಿತು ಅಂದು ರಶ್ಮಿಕಾ ತಾನು ಕಾಂತಾರ ಚಿತ್ರವನ್ನು ನೋಡಿಲ್ಲ ಮತ್ತು ಶೀಘ್ರದಲ್ಲೇ ಅದನ್ನು ನೋಡಲಿದ್ದೇನೆ ಎಂದು ಹೇಳಿದ್ದರು.

ಈ ಹೇಳಿಕೆ ಕೊಟ್ಟು ಕೇವಲ ಎರಡು ವಾರಗಳ ಬೆನ್ನಲ್ಲೇ ವೀಕ್ಷಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ನೋಡಿ : https://fb.watch/hiU-kdJEjD/ COVER STORY PROMO | ಕೊಂದು ಬಿಡಿ !! ಇದು ಕರುನಾಡಿನ ಕಾಡಮಕ್ಕಳ ಕೂಗು.

ಗುರುವಾರ ಹೈದರಾಬಾದ್‌ನಲ್ಲಿ(Hyderabad) ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ರಶ್ಮಿಕಾ, ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕಾಂತಾರವನ್ನು ವೀಕ್ಷಿಸಿದೆ ಹಾಗೂ ಚಿತ್ರದ ಬಗ್ಗೆ ನಿರ್ಮಾಪಕರಿಗೂ ಕೂಡ ಅಭಿನಂದನೆಗಳ ಸಂದೇಶ ಕಳಿಸಿದ್ದೇನೆ.

ಇದೆಲ್ಲಾ ಟ್ರೋಲ್ ಮಾಡುವವರಿಗೆ ಹೇಗೆ ಗೊತ್ತಿರುತ್ತೆ? ಟ್ರೋಲ್ ಮಾಡುವವರ ಮೇಲೆ ನನಗೆ ವಿಶೇಷ ಪ್ರೀತಿ ಇದೆ.

ನಾನು ಅದರ ಬಗ್ಗೆ ಬೇರೆ ಏನು ಹೇಳಲು ಬಯಸುವುದಿಲ್ಲ. ಅದು ಅವರಿಗೆ ಬಿಟ್ಟದ್ದು, ನಾನು ಕಾಂತಾರ ಬಿಡುಗಡೆಯಾದ 2-3 ದಿನಗಳಲ್ಲಿ ನೋಡಲು ಸಾಧ್ಯವಾಗಲಿಲ್ಲ.

ಆದರೆ ಕೆಲ ದಿನಗಳ ಹಿಂದೆ ನಾನು ಕಾಂತಾರ ಸಿನಿಮಾವನ್ನು ವೀಕ್ಷಿಸಿದ್ದೇನೆ ಮತ್ತು ತಂಡಕ್ಕೆ ಸಂದೇಶವನ್ನೂ ಕೂಡ ಕಳುಹಿಸಿದ್ದೇನೆ. ನಾನು ಕಳುಹಿಸಿದ ಸಂದೇಶಕ್ಕೆ ಅವರು ನನಗೆ ಧನ್ಯವಾದವನ್ನು ತಿಳಿಸಿದ್ದಾರೆ.

ನಮ್ಮೊಳಗೆ ಏನಾಗುತ್ತಿದೆ ಎಂದು ಜಗತ್ತಿಗೆ ತಿಳಿದಿಲ್ಲ. ನಾವು ನಮ್ಮ ವೈಯಕ್ತಿಕ ಜೀವನದೊಳಗೆ ಕ್ಯಾಮೆರಾ ಬಳಸಿ, ಪ್ರತಿಯೊಂದು ಘಟನೆಯನ್ನು ವಿವರಿಸಲು ಸಾಧ್ಯವಿಲ್ಲ.

ಜನರು ನಮ್ಮ ವೈಯಕ್ತಿಕ ಜೀವನದ ಬಗ್ಗೆ ಏನು ಮಾತನಾಡುತ್ತಾರೆ ಎನ್ನುವುದಕ್ಕಿಂತ ಹೆಚ್ಚಾಗಿ, ನಮ್ಮ ವೃತ್ತಿಪರ ಜೀವನದ ಬಗ್ಗೆ ಏನು ಮಾತನಾಡುತ್ತಾರೆ ಎಂಬುದು ಹೆಚ್ಚು ಮುಖ್ಯವಾಗಿದೆ ಎಂದು ಹೇಳಿದ್ದಾರೆ.

ಇನ್ನು ಸಂದರ್ಶನದಲ್ಲಿ ನಿಮ್ಮನ್ನು ಯಾವ ನಿರ್ಮಾಪಕರು ಬ್ಯಾನ್ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ, ಇಲ್ಲಿಯವರೆಗೆ ಯಾವುದೇ ನಿರ್ಮಾಪಕರು ನನ್ನನ್ನು ಬ್ಯಾನ್ ಮಾಡಿಲ್ಲ ಎಂದು ಹೇಳಿದ್ದಾರೆ.

ಸದ್ಯ ರಶ್ಮಿಕಾ ಮಂದಣ್ಣ ಪುಷ್ಪಾ 2(Pushpa 2) ಚಿತ್ರೀಕರಣದಲ್ಲಿ ನಿರತರಾಗಿದ್ದು, ಮುಂದಿನ ಕೆಲಸಗಳತ್ತ ಯೋಜನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : https://vijayatimes.com/job-vacancies-in-central-government/

ಪುಷ್ಪಾ ಚಿತ್ರದಲ್ಲಿ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್(Allu Arjun) ಜೊತೆ ನಟಿಸುತ್ತಿದ್ದಾರೆ. ಮುಂದಿನ ವರ್ಷ 2023ಕ್ಕೆ ಪುಷ್ಪಾ 2 ಚಿತ್ರ ತೆರೆಗೆ ಅಪ್ಪಳಿಸಲಿದೆ ಎಂಬ ಲೆಕ್ಕಾಚಾರವಿದೆ.

Tags: entertainmentKantaraSandalwood

Related News

ಇನ್ನೂ ನೂರು ಕೋಟಿ ಕ್ಲಬ್ ಸೇರಿಲ್ಲವೆ ಕಬ್ಜ ಸಿನಿಮಾ ? ಕಲೆಕ್ಷನ್ ಬಗ್ಗೆ ನಿರ್ಮಾಪಕರು ಏನಂತಾರೆ
Vijaya Time

ಇನ್ನೂ ನೂರು ಕೋಟಿ ಕ್ಲಬ್ ಸೇರಿಲ್ಲವೆ ಕಬ್ಜ ಸಿನಿಮಾ ? ಕಲೆಕ್ಷನ್ ಬಗ್ಗೆ ನಿರ್ಮಾಪಕರು ಏನಂತಾರೆ

March 28, 2023
ಮೋದಿ ಎಂಬ ಹೆಸರಿನ ಅರ್ಥ ಭ್ರಷ್ಟಾಚಾರ ತನ್ನ ಹೇಳಿಕೆ ಸಮರ್ಥಿಸಿಕೊಂಡ ನಟಿ ಖುಷ್ಬು
Vijaya Time

ಮೋದಿ ಎಂಬ ಹೆಸರಿನ ಅರ್ಥ ಭ್ರಷ್ಟಾಚಾರ ತನ್ನ ಹೇಳಿಕೆ ಸಮರ್ಥಿಸಿಕೊಂಡ ನಟಿ ಖುಷ್ಬು

March 28, 2023
ಬಿರು ಬೇಸಿಗೆ ಬರುತ್ತಿದೆ ಹುಷಾರ್‌ ! ಕಂಡಿದ್ದನ್ನೆಲ್ಲಾ ತಿಂದು ಆಸ್ಪತ್ರೆ ಸೇರಬೇಡಿ
Vijaya Time

ಬಿರು ಬೇಸಿಗೆ ಬರುತ್ತಿದೆ ಹುಷಾರ್‌ ! ಕಂಡಿದ್ದನ್ನೆಲ್ಲಾ ತಿಂದು ಆಸ್ಪತ್ರೆ ಸೇರಬೇಡಿ

March 25, 2023
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ
Vijaya Time

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ

March 24, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.