ಸಾಮಾಜಿಕ ಜಾಲತಾಣದಲ್ಲಿ ಸದಾ ಒಂದಲ್ಲ ಒಂದು ಸುದ್ದಿಯಲ್ಲಿ ಟ್ರೋಲ್ ಆಗುವ ರಶ್ಮಿಕಾ ಮಂದಣ್ಣ, ಇತ್ತೀಚಿಗೆ ಯಾವುದೇ ಟ್ರೋಲ್ ಗಳಿಗೂ ಅಷ್ಟಾಗಿ ಸಿಲುಕಿಕೊಂಡಿಲ್ಲ. ಮದುವೆ ವಿಚಾರವಾಗಿ ಹರಿದಾಡಿದ ಕೆಲ ಪೋಸ್ಟ್ ಗಳ ವಿರುದ್ಧ ರಶ್ಮಿಕಾ ತಿರುಗೇಟು ನೀಡಿದರು. ಇತ್ತೀಚೆಗೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮುಂಬೈನ ಸ್ಟುಡಿಯೊದಿಂದ ಹೊರಬಂದ ವೇಳೆ ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರ ನೀಡಿದ್ದಾರೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಚಿತ್ರದ ಟ್ರೈಲರ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಫೋಟೋಗ್ರಾಫರ್ ಒಬ್ಬರು ಕೇಳಿದಾಗ, ಚಿತ್ರದ ಬಿಡುಗಡೆಗೂ ಮುನ್ನ ರಾಧೆ ಶ್ಯಾಮ್ ತಂಡವನ್ನು ಅಭಿನಂದಿಸಿದ್ದೇನೆ ಎಂದು ಹೇಳಿದರು.

ರಾಧೆ ಶ್ಯಾಮ್ ಸಿನಿಮಾ ಸಾಕಷ್ಟು ತಿರುವುಗಳನ್ನು ಹೊಂದಿರುವ ಒಂದೊಳ್ಳೆ ರೋಮ್ಯಾಂಟಿಕ್ ಸಿನಿಮಾವಾಗಿದೆ. ಈ ಸಿನಿಮಾ ಇದೇ ಮಾರ್ಚ್ 11 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ರಾಧೆ ಶ್ಯಾಮ್ ಸಿನಿಮಾ ಬಿಡುಗಡೆಗೆ ಮುಂಚಿತವಾಗಿ ತಂಡದವರು ಮಾರ್ಚ್ 02 ರಂದು ಟ್ರೇಲರ್ ಅನ್ನು ಬಿಡುಗಡೆ ಮಾಡಿದರು. ಟ್ರೈಲರ್ ಲಾಂಚ್‌ನಲ್ಲಿ, ಪ್ರಭಾಸ್ ಮತ್ತು ಪೂಜಾ ಹೆಗ್ಡೆ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿರುವುದು ಟ್ರೇಲರ್ ನಲ್ಲಿ ಕಂಗೊಳಿಸುತ್ತಿದೆ. ಈ ಬಗ್ಗೆ ಮುಂಬೈನಲ್ಲಿರುವ ರಶ್ಮಿಕಾ ಮಂದಣ್ಣ, ರಾಧೆ ಶ್ಯಾಮ್ ಟ್ರೈಲರ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಈ ರೀತಿ ಹಂಚಿಕೊಂಡಿದ್ದಾರೆ.

ಮಾರ್ಚ್ 02 ರಂದು, ರಶ್ಮಿಕಾ ಮಂದಣ್ಣ ಸ್ಟುಡಿಯೋ ಇಂದ ತಮ್ಮ ಕಾರಿನತ್ತ ಹೊರನಡೆಯುವಾಗ ಛಾಯಾಗ್ರಾಹಕರೊಬ್ಬರು ರಾಧೆ ಶ್ಯಾಮ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಹೇಳಿ ಎಂದು ಕೇಳಿದಾಗ, ಆಲ್ ದಿ ಬೆಸ್ಟ್ ಎಂದು ಎರಡು ಬಾರಿ ಹೇಳಿ ಹೊರಡಲು ಮುಂದಾದರು. ನಂತರ ರಾಧೆ ಶ್ಯಾಮ್ ಮತ್ತು ಪ್ರಭಾಸ್ ಅವರ ಕೆಲಸದ ಟ್ರೈಲರ್ ಬಗ್ಗೆ ಮತ್ತೆ ಕೇಳಿದಾಗ. ಕೈಯಲ್ಲಿ ಹೃದಯದ ಸಿಂಬಲ್ ತೋರಿಸಿ ಚೆನ್ನಾಗಿದೆ ಎಂದು ಹೇಳಿ ಹೊರಟರು. ಇದನ್ನು ಕಂಡ ಕೆಲವರು ರಶ್ಮಿಕಾ ಮಂದಣ್ಣ ಟ್ರೇಲರ್ ಬಗ್ಗೆ ಪ್ರಶ್ನೆ ಕೇಳಿದರು ಕೂಡ ವಿವರವಾಗಿ ಹೇಳದೆ ಹೊರಟರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಶ್ಮಿಕಾ ಕಳೆದ ಬಾರಿಗೆ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದಲ್ಲಿ ಮಿಂಚಿದರು. ಇದು ಡಿಸೆಂಬರ್ 2021 ರಲ್ಲಿ ಬಿಡುಗಡೆಯಾಯಿತು. ಸದ್ಯ ರಶ್ಮಿಕಾ ಅವರು ತಮ್ಮ ಮುಂಬರುವ ಚಿತ್ರವಾದ ಆದಾವಲು ಮೀಕು ಜೋಹಾರ್ಲು ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇನ್ನು ಕೆಲವೇ ವಾರಗಳಲ್ಲಿ ಪುಷ್ಪಾ ದಿ ರೂಲ್ ಚಿತ್ರೀಕರಣವನ್ನು ಕಿಕ್‌ಸ್ಟಾರ್ಟ್ ಮಾಡಲು ಸಜ್ಜಾಗಿದ್ದಾರೆ. ರಶ್ಮಿಕಾ ಅವರ ಮುಂಬರುವ ಸಿದ್ಧಾರ್ಥ್ ಮಲ್ಹೋತ್ರಾ ಅವರ ಮಿಷನ್ ಮಜ್ನು ಮತ್ತು ಅಮಿತಾಬ್ ಬಚ್ಚನ್ ಅವರೊಟ್ಟಿಗೆ ನಟಿಸಿರುವ ಸಿನಿಮಾಗಳು ಕೂಡ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಹಾಕಿದೆ.