ನವದೆಹಲಿ ಅ 22 : ಫೋರ್ಬ್ಸ್ ಇಂಡಿಯಾದ ಅತ್ಯಂತ ಪ್ರಭಾವಶಾಲಿ ನಟ ನಟಿಯರ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಮೊದಲ ಸ್ಥಾನ ಪಡೆದಿದ್ದಾರೆ. ರಶ್ಮಿಕಾ ಮಂದಣ್ಣ ಅವರ ವೃತ್ತಿಜೀವನಕ್ಕೆ ಕೇವಲ ಐದು ವರ್ಷಗಳಾಗಿದ್ದು, ಬಾಲಿವುಡ್ ಚಿತ್ರ ಕೂಡಾ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಆದರೆ ಈಗಾಗಲೇ ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಗಣನೀಯ ಜನಪ್ರಿಯತೆ ಗಳಿಸಿರುವ ರಶ್ಮಿಕಾ (Rashmika Mandanna) ಅವರನ್ನು ಅಭಿಮಾನಿಗಳು ನ್ಯಾಷನಲ್ ಕ್ರಶ್ ಎಂದೆ ಕರೆದಿದ್ದಾರೆ. ಈಗ ಅವರು ಫೋರ್ಬ್ಸ್ ಇಂಡಿಯಾದ ಅತ್ಯಂತ ಪ್ರಭಾವಶಾಲಿ ನಟ ನಟಿಯರ ಪಟ್ಟಿಯಲ್ಲಿ ಯಶ್ (Yash) , ಸಮಂತಾ ರುತ್ ಪ್ರಭು , ವಿಜಯ್ ದೇವರಕೊಂಡ ಮತ್ತು ಅವರನ್ನು ಹಿಂದಿಕ್ಕುವ ಮೂಲಕ ಅಗ್ರಸ್ಥಾನ ಪಡೆದಿದ್ದಾರೆ .
ತನ್ನ ಸಾಮಾಜಿಕ ಮಾಧ್ಯಮ (Social Media) ಪುಟಗಳಲ್ಲಿ ಫಾಲ್ಲೋವರ್ಸ್ ಸಂಖ್ಯೆಯಲ್ಲಿ ಗಣನೀಯ ಏರಿಕೆಯನ್ನು ದಾಖಲಿಸಿಕೊಳ್ಳುವ ಮೂಲಕ ರಶ್ಮಿಕಾ ಮಂದಣ್ಣ (Rashmika Mandanna) ‘ಅತ್ಯಂತ ಪ್ರಭಾವಶಾಲಿ ನಟರ’ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದಿದ್ದಾರೆ.
‘ಪೆಲ್ಲಿ ಚೂಪುಲು’ ಮತ್ತು ‘ಅರ್ಜುನ್ ರೆಡ್ಡಿ’ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದ ವಿಜಯ್ ದೇವರಕೊಂಡ (Vajaya Devarakonda), ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಕನ್ನಡದ ರಾಕಿ ಭಾಯಿ ಯಶ್ (Yash) ಮೂರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಸಮಂತಾ ರುತ್ ಪ್ರಭು ನಾಲ್ಕನೇ ಸ್ಥಾನದಲ್ಲಿದ್ದರೆ, ಅಲ್ಲು ಅರ್ಜುನ್ ನಂತರದ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಪರಿಗಣಿಸಲಾದ ಅಂಶಗಳೆಂದರೆ ಅವರೇಜ್ ಲೈಕ್ ಗಳು, ಅವರೇಜ್ ಕಾಮೆಂಟ್‌ಗಳು, ಎಂಗೇಜ್ಮೆಂಟ್ ರೇಟ್ , ಸರಾಸರಿ ವೀಡಿಯೋ ವೀಕ್ಷಣೆಗಳು ಮತ್ತು ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ (Social media) ಪ್ರೊಫೈಲ್‌ಗಳ ಫಾಲ್ಲೋವೆರ್ಸ್ ಸಂಖ್ಯೆಯನ್ನು ಪರಿಗಣಿಸಲಾಗಿದೆ. ಇದನ್ನು Qoruz Score’ ಮೂಲಕ ಲೆಕ್ಕ ಹಾಕಲಾಗುತ್ತದೆ. ಇದರಲ್ಲಿ ರಶ್ಮಿಕಾ ಹತ್ತರಲ್ಲಿ ಅಂಕಗಳು 9.88 ಅಂಕ ಪಡೆದಿದ್ದರೆ , ವಿಜಯ್ ದೇವರಕೊಂಡ 9.67 ಗಳಿಸಿದ್ದಾರೆ. ಯಶ್ ಸ್ಕೋರ್ 9.54, ಸಮಂತಾ ಸ್ಕೋರ್ 9.49, ಅಲ್ಲು ಅರ್ಜುನ್ 9.46 ಸ್ಕೋರ್ ಮಾಡಿದ್ದಾರೆ