Karnataka : ನ್ಯಾಷನಲ್ ಕ್ರಶ್, ಮೋಹಕ ಬೆಡಗಿ ನಟಿ ರಶ್ಮಿಕಾ ಮಂದಣ್ಣ (rashmika new controversy) ಅವರು ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್ ಆಗಿದ್ದಾರೆ. ಹೌದು,
ಈ ಬಾರಿ ಅವರು ಧರಿಸಿದ್ದ ವಿಭಿನ್ನ ಉಡುಗೆಯನ್ನು ಗುರಿಯಾಗಿಸಿ, ಅವರನ್ನು (rashmika new controversy) ಟೀಕಿಸಲಾಗಿದೆ.

ಇತ್ತೀಚಿಗೆ ನಡೆದ ಕಾರ್ಯಕ್ರಮಕ್ಕೆ ವಿಭಿನ್ನ ಉಡುಗೆಯಲ್ಲಿ ಕಾಣಿಸಿಕೊಂಡ ನಟಿ ರಶ್ಮಿಕಾ (Rashmika), ಮಿರ ಮಿರ ಎಂದು ಮಿಂಚುವ ಕಪ್ಪು ಬಣ್ಣದ ಶಾರ್ಟ್ ಡ್ರೆಸ್‌ನಲ್ಲಿ ಎಲ್ಲರ ಮುಂದೆ ಹಾಜರಾಗಿದ್ದಾರೆ.
ವಿಶೇಷವಾಗಿ ಹೈ ಹೀಲ್ಸ್ ಚಪ್ಪಲಿ ಧರಿಸಿ ಹೈಲೈಟಿಂಗ್ ಆಗಿ ರೆಡ್ ಕಾರ್ಪೆಟ್ ಮೇಲೆ ನಡೆದು ಬಂದು ನೆರೆದಿದ್ದ ಅಭಿಮಾನಿಗಳು, ಫೋಟೋಗ್ರಾಫರ್ಸ್ (Photographs) ಅತ್ತ ಕೈ ಬೀಸಿ ಮಾತನಾಡಿಸಿದ್ದಾರೆ.
ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಸದಾ ಹಸನ್ಮುಖಿಯಾಗಿ ಎಲ್ಲರನ್ನು ಮಾತನಾಡಿಸುವ ರಶ್ಮಿಕಾ ಅವರ ಗುಣವನ್ನು ದೃಶ್ಯಗಳಲ್ಲಿ ಕಾಣಬಹುದು. ಸದ್ಯ ಈ ಫೋಟೊಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಆಗುತ್ತಿದೆ.
ಪ್ರತಿಬಾರಿ ಒಂದಲ್ಲ ಒಂದು ರೀತಿ ನಟಿ ರಶ್ಮಿಕಾ ಮಂದಣ್ಣ ಅವರು ಎಲ್ಲರ ಕೆಂಗಣ್ಣಿಗೆ ಗುರಿಯಾಗುವುದು ಸರ್ವೇ ಸಾಮಾನ್ಯ! ಅದೇ ರೀತಿ ಈ ಬಾರಿಯೂ ಕೂಡ ಗುರಿಯಾಗಿದ್ದು, ತಮ್ಮ ಮಾತಿನ ದಾಟಿಯಿಂದ ಅಲ್ಲದೇ ಹೋದರು,
ತಾವು ಧರಿಸಿದ್ದ ಉಡುಪಿನಿಂದ ಎಂಬುದು ಇದೀಗ ಗಮನಾರ್ಹ! ರಶ್ಮಿಕಾ ಅವರು ಧರಿಸಿದ್ದ ಕಪ್ಪು ಶಾರ್ಟ್ ಡ್ರೆಸ್ ಇದೀಗ ತೀವ್ರ ಟೀಕೆಗೆ ಗುರಿಯಾಗಿದೆ.
ಇದನ್ನು ಓದಿ: ಇನ್ನೆಷ್ಟು ಶಿಕ್ಷಕರ ಬಲಿ ಬೇಕು? ಕೋಮು ಬಲಿಗೆ ಮಾತ್ರ ನೀವು ಬೆಲೆ ಕೊಡೋದಾ? ಸಿದ್ದರಾಮಯ್ಯ ಪ್ರಶ್ನೆ
ಕೆಲವು ನೆಟ್ಟಿಗರು ರಶ್ಮಿಕಾ ಅವರು ಧರಿಸಿದ್ದ ಉಡುಪನ್ನು ಮೆಚ್ಚಿ ಮಾತನಾಡಿದರೇ, ಹಲವರು ವ್ಯಂಗ್ಯವಾಗಿ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಬಾಕ್ಸ್ ಸಂಪೂರ್ಣವಾಗಿ ನೆಗೆಟಿವ್ ಕಮೆಂಟ್‌ಗಳಿಂದಲೇ ತುಂಬಿದೆ.
ರಶ್ಮಿಕಾ ಉಡುಪನ್ನು ಉರ್ಫಿ ಜಾವೇದ್‌ಗೆ ಹೋಲಿಸಿ ಮಾತನಾಡಿದ್ದು, ನೀವು ಉರ್ಫಿ ಅವರನ್ನು ಫಾಲೋ ಮಾಡ್ತಿದ್ದೀರಾ ರಶ್ಮಿಕಾ? ಈ ರೀತಿ ಕಾಣಿಸಿಕೊಳ್ಳುವುದು ಅಗತ್ಯವೇ? ಎಂದು ಟೀಕಿಸಿದ್ದಾರೆ.

ಇನ್ನು ಕೆಲವರು ರಶ್ಮಿಕಾ ಅವರು ಈ ರೀತಿ ಮಾಡುತ್ತಾರೆ ಎಂದು ಊಹಿಸಿರಲಿಲ್ಲ. ಇವರನ್ನು ಬಾಯ್ಕಾಟ್ ಮಾಡಬೇಕು ಎಂದು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ನೆಗೆಟಿವ್ ಕಮೆಂಟ್‌ಗಳ ಸುರಿಮಳೆ ನಡುವೆ ಒಂದಿಷ್ಟು
ಮೆಚ್ಚುಗೆಯ ಅನಿಸಿಕೆಗಳು ಕೂಡ ವ್ಯಕ್ತವಾಗಿವೆ. ರಶ್ಮಿಕಾ ಅವರು ಈ ಬಣ್ಣದ ಉಡುಗೆಯಲ್ಲಿ ಅದ್ಬುತವಾಗಿ ಕಾಣುತ್ತಿದ್ದಾರೆ. ನಿಮ್ಮ ಮುಂದಿನ ಯೋಜನೆಗಳಿಗೆ ಆಲ್ ದಿ ಬೆಸ್ಟ್ ಎಂದು ಶುಭಹಾರೈಸಿದ್ದಾರೆ.
ಸದ್ಯ ನಟಿ ರಶ್ಮಿಕಾ ಮಂದಣ್ಣ ಎಂದಿನAತೆ ಈ ಬಾರಿಯೂ ಕೂಡ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ಟ್ರೋಲ್ಗಳಿಗೆ ಸ್ಪಂದಿಸದೆ, ತಮ್ಮ ಮುಂದಿನ ಚಿತ್ರಗಳತ್ತ ಹೆಚ್ಚು ಗಮನಹರಿಸುವಲ್ಲಿ ಬ್ಯುಸಿಯಾಗಿದ್ದಾರೆ.
ಪುಷ್ಪಾ ಚಿತ್ರ ಹೊರೆತುಪಡಿಸಿದರೆ ಈ ವರ್ಷದಲ್ಲಿ ವಾರಿಸು ಮೂಲಕ ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪುಷ್ಪ 1 ರ ಚಿತ್ರ ನಂತರ ಇದೀಗ ಪುಷ್ಪ 2 ಚಿತ್ರದ ನಾಯಕಿ ಕೂಡ ರಶ್ಮಿಕಾ ಅವರೇ ಆದ ಕಾರಣ,
ಚಿತ್ರೀಕರಣದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.