Viral News: ನ್ಯಾಷನಲ್ ಕ್ರಷ್, ನಟಿ ರಶ್ಮಿಕಾ ಮಂದಣ್ಣ(Rashmika Mandanna) ಅವರು ಚರ್ಮದ ಸಮಸ್ಯೆಯಿಂದ ಬಳುತ್ತಿದ್ದಾರಾ? ಇತ್ತೀಚಿನ ಅವರ ಇನ್‌ಸ್ಟಾಗ್ರಾಮ್(Instagram) ಪೋಸ್ಟ್ ನೋಡಿ ಅವರು ಚರ್ಮಕ್ಕೆ (Rashmika suffering skin problems) ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿರಬಹುದು ಎಂದು ಅವರ ಅಭಿಮಾನಿಗಳ ಚರ್ಚೆಗೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ(Social Media) ನಟಿ ರಶ್ಮಿಕಾ ಮಂದಣ್ಣ ಅವರು ಚರ್ಮದ ಸಮಸ್ಯೆಯಿಂದ ಬಳುತ್ತಿದ್ದಾರಾ? ಎಂದು ಭಾರೀ ಚರ್ಚೆ ನಡೆಯುತ್ತಿದೆ.

ನಟಿ ಸಮಂತಾ(Samantha) ಮಯೋಸಿಟಿಸ್ ನಿಂದ ಬಳಲುತ್ತಿರುವುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಷಯ. ಈ ಪಟ್ಟಿಗೆ ಈಗ ರಶ್ಮಿಕಾ ಕೂಡ ಸೇರಿಕೊಂಡಿರಬಹುದೇ ಎಂಬ ಅನುಮಾನ ಹುಟ್ಟಿಕೊಂಡಿದೆ.

ರಶ್ಮಿಕಾ ಮಂದಣ್ಣ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅವರ ದೈನಂದಿನ ದಿನಚರಿಯನ್ನು ಪೋಸ್ಟ್(Post) ಮಾಡಿದ್ದರು.

ಬ್ರೇಕ್‌ಫಾಸ್ಟ್ ,ಕಾರ್ಡಿಯೋ ವರ್ಕ್, ಮತ್ತು ಡಿನ್ನರ್ ನಂತರ, ರಶ್ಮಿಕಾ ಅವರು ಮಾಡಬೇಕಾಗುವ ಕೆಲಸಗಳ ಪಟ್ಟಿಯನ್ನು ಬರೆದಿದ್ದರು. ಡರ್ಮೋಟ್ ಅಪಾಯಿಂಟ್‌ಮೆಂಟ್ ತೆಗೆದುಕೊಂಡಿದ್ದೆ. ಆದರೆ ಅದು ಕ್ಯಾನ್ಸಲ್ ಆಗಿದೆ ಎಂದು ಬರೆದುಕೊಂಡಿದ್ದಾರೆ.

ಇದರಿಮದ ನೆಟ್ಟಿಗರು ಡರ್ಮೋಟ್ ಎಂದರೆ ಡರ್ಮಟಾಲಜಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ನಟಿಗೆ ಚರ್ಮದ ಸಮಸ್ಯೆಗಳು ಇರಬಹುದು, ಅದಕ್ಕಾಗಿ ಅವರು ಚರ್ಮರೋಗ (Rashmika suffering skin problems) ತಜ್ಞರನ್ನು ನೋಡುತ್ತಿದ್ದಾರೆ ಎಂದು ಚರ್ಚೆ ಮಾಡುತ್ತಿದ್ದಾರೆ.

ರಶ್ಮಿಕಾ ಮಂದಣ್ಣನವರಿಗೆ ಏನಾಗಿದೆ? ಅವರಿಗೆ ಏನಾದರೂ ಚರ್ಮ ರೋಗ ಬಂದಿದೆಯಾ ಎಂದು ಅವರ ಅಭಿಮಾನಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಸುದ್ದಿಯಲ್ಲಿ ಎಷ್ಟು ಸತ್ಯಾಂಶವಿದೆಯೋ ಗೊತ್ತಿಲ್ಲ.
- ರಶ್ಮಿತಾ ಅನೀಶ್