ರತನ್ ಟಾಟಾ (RatanTata name not in list) ರವರು 1937 ಡಿಸೆಂಬರ್ 28ರಂದು ಮುಂಬೈಯಲ್ಲಿ ಜನಿಸಿ 85 ನೇ ವರ್ಷದಕ್ಕೆ ಕಾಲಿಟ್ಟಿದ್ದಾರೆ. ಇಂದು ಅವರ 85 ನೇ ವರ್ಷದ ಹುಟ್ಟುಹಬ್ಬ.
ರತನ್ ಟಾಟಾ ರವರು ಭಾರತದಲ್ಲಿ ಮಾತ್ರವಲ್ಲದೆ, ಜಾಗತಿಕವಾಗಿ ಅತ್ಯಂತ ಗೌರವಾನ್ವಿತ ಉದ್ಯಮಿಗಳಲ್ಲಿ ಒಬ್ಬರು.

ಅವರ ಹೆಸರನ್ನು ಇಡಿ ಜಗತ್ತೆ ಗುರುತಿಸುವಂತಾಗಿದೆ. ರತನ್ ಟಾಟಾ ಕೇವಲ ಉದ್ಯಮಿಯಷ್ಟೇ ಅಲ್ಲ, ತತ್ವಜ್ಞಾನಿಯೂ ಹೌದು.
ಕೋವಿಡ್ (Covid) ಸಂಕಷ್ಟದಲ್ಲಿ ಜನಸಾಮಾನ್ಯರು ಸಿಲುಕಿದ್ದಾಗ ಅವರ ಕಷ್ಟಕ್ಕೆ ಸ್ಪಂದಿಸಿ ಕೋಟಿ ರೂಪಾಯಿಗಳಷ್ಟು ದೇಣಿಗೆ ನೀಡಿರುವ ಮಹಾನ್ ವ್ಯಕ್ತಿ.
ಭಾರತದ (India) ಬಿಕ್ಕಟ್ಟಿನ ಸಮಯದಲ್ಲಿ ದೇಶಕ್ಕೆ ಅಪಾರವಾದ ನೆರವು ನೀಡಿರುವ ಟಾಟಾ ರವರಿಗೆ 2000ನೇ ಇಸವಿಯಲ್ಲಿ ಪದ್ಮಭೂಷಣ ಮತ್ತು 2008ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಲಭಿಸಿದೆ.
IIFL ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರ ಪ್ರಕಾರ, ರತನ್ ಟಾಟಾ ಅವರು ಉದ್ಯಮದಲ್ಲಿ ಅತೀ ಹೆಚ್ಚು ಸಂಪಾದಿಸುವ ಭಾರತೀಯ (RatanTata name not in list) ಉದ್ಯಮಿಯಾಗಿದ್ದಾರೆ.
ಇದನ್ನೂ ಓದಿ : https://vijayatimes.com/church-destroyed-in-piriyapatna/
ಅವರು ಉದ್ಯಮ ಸಾಮ್ರಾಜ್ಯದಲ್ಲಿ ಹೆಸರುವಾಸಿಯಾಗಿರುವ ಜೊತೆಗೆ ಅವರ ಕೆಲಸದ ಬದ್ಧತೆಗೆ ಹೆಚ್ಚು ಮೆಚ್ಚುಗೆ ಪಡೆದಿದ್ದರೂ ಸಹ ಟಾಟಾ ಅವರ ಹೆಸರು ಮಾತ್ರ ದೇಶದ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಇಲ್ಲ. ಕಾರಣ ಏನು ?
ಟಾಪ್ ಶ್ರೀಮಂತರ ಪಟ್ಟಿಯಲ್ಲಿ ಟಾಟಾ ರವರ ಹೆಸರು ಯಾಕಿಲ್ಲ ಕಾರಣ ಇಲ್ಲಿದೆ ನೋಡಿ :
ಹಿಡುವಳಿ ಕಂಪನಿ ಟಾಟಾ ಸನ್ಸ್ ಅಡಿಯಲ್ಲಿ, ಟಾಟಾ ಕಂಪನಿಗಳ ಲಾಭದ 66 ಪ್ರತಿಶತವನ್ನು ಟಾಟಾ ಟ್ರಸ್ಟ್ (Tata Trust) ದತ್ತಿ ಚಟುವಟಿಕೆಗಳಿಗಾಗಿ ದಾನ ಮಾಡುತ್ತಿರುವುದೇ ದೊಡ್ಡ ಕಾರಣವಾಗಿದೆ.
ಟಾಟಾ ರವರು ತಮ್ಮ ಸಂಸ್ಥೆಯಲ್ಲಿ ಬರುವ ಲಾಭದಲ್ಲಿ ಶೇ.40 ರಷ್ಟು ದೇಶದ ಹಿತಕ್ಕಾಗಿಯೇ ಮೀಸಲಿಡುತ್ತಾರೆ. ಆದುದರಿಂದಲೇ ಟಾಪ್ ಶ್ರೀಮಂತರ ಪಟ್ಟಿಯಲ್ಲಿ ರತನ್ ಟಾಟಾ ರವರ ಹೆಸರಿಲ್ಲ ಎಂದು .
ಇದನ್ನೂ ಓದಿ : https://vijayatimes.com/youthful-movie-vasanti-nalidaga/
ರತನ್ ಟಾಟಾ ಅವರ ನಿವ್ವಳ ಮೌಲ್ಯವು 3800 ಕೋಟಿ ರೂಪಾಯಿಗಳಾಗಿದ್ದು, ಇದನ್ನು ಹೆಚ್ಚಾಗಿ ಟಾಟಾ ಸನ್ಸ್‌ನಿಂದ ಸ್ವಾಧೀನ ಪಡಿಸಲಾಗಿದೆ.
IIFL ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ (Wealth Hurun India Rich List) 2022 ರ ಪ್ರಕಾರ, ಅವರು ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ 421 ನೇ ಸ್ಥಾನದಲ್ಲಿದ್ದಾರೆ.
ಶ್ರೇಯಾಂಕದ ಪ್ರಕಾರ, ಅವರು 2021 ರಲ್ಲಿ 3,500 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದೊಂದಿಗೆ 433 ನೇ ಸ್ಥಾನದಲ್ಲಿದ್ದರು.
- ಕುಮಾರ್ ಹಾಲೇರಿ