State Government has Launched a war against Unauthorized BPL card Holders: Survey by a Private Organization to find the Ineligible.
Bengaluru: ಕಳೆದ ಕೆಲ ದಿನಗಳಿಂದ ಕರ್ನಾಟಕದಾದ್ಯಂತ ಅನಧಿಕೃವಾಗಿ ಬಿಪಿಎಲ್ ಕಾರ್ಡ್ (BPL Card) ಹೊಂದಿರುವವರ ವಿರುದ್ಧ ಸರ್ಕಾರ ಬಹಿರಂಗವಾಗಿ ಸಮರ ಸರಿದ್ದು ಎಲ್ಲ ವಿಧಗಳಿದ ಅನಧಿಕೃತ ಬಿಪಿಎಲ್ ಕಾರ್ಡ್ ಹೊಂದಿರುವವರ ಪತ್ತೆಗೆ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಖಾಸಗಿ ಸಂಸ್ಥೆ ಕಡೆಯಿಂದ ಸರ್ವೆ ನಡೆಸಲು ಮುಂದಾಗಿದೆ. ಪ್ರಸ್ತುತ ರಾಜ್ಯದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಪ್ರಕಾರ, ರಾಜ್ಯದಲ್ಲಿ 1.03 ಕೋಟಿ ಬಿಪಿಎಲ್ ಕಾರ್ಡ್ಗಳು ಇರಬೇಕು. ಆದರೆ. ಸದ್ಯ ಕರ್ನಾಟಕದಲ್ಲಿ 1.16 ಕೋಟಿಗೂ ಹೆಚ್ಚು ಬಿಪಿಎಲ್ ಕಾರ್ಡ್ಗಳ ವಿತರಣೆಯಾಗಿದೆ. ಅಂದರೆ ನಿಯಮಕ್ಕಿಂತ 14 ಲಕ್ಷ ಹೆಚ್ಚುವರಿ ಕಾರ್ಡ್ಗಳಿವೆ .
ದಿನದಿಂದ ದಿನಕ್ಕೆ ಅನಧಿಕೃತ ಕಾರ್ಡ್ದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕುರಿತು ಸರ್ವೆ ನಡೆಸಲು ಖಾಸಗಿ ಕಂಪನಿಯೊಂದಕ್ಕೆ ಆಹಾರ ಇಲಾಖೆಯು ಜವಾಬ್ದಾರಿವಹಿಸಿದೆ ಎನ್ನಲಾಗಿದೆ.ಸದ್ಯದ ಮಟ್ಟಿಗೆ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳ ಹೊರೆ ಹೆಚ್ಚಾಗುತ್ತಿದೆ. ಗ್ಯಾರಂಟಿ ಯೋಜನೆಗಳ (Guarantee Scheme) ಫಲಾನುಭವಿಯಾಗಲು ಬಿಪಿಎಲ್ ಕಾರ್ಡ್ ಮಾನದಂಡ.
ಅನಧಿಕೃತ ಕಾರ್ಡ್ ಹೊಂದಿರುವವರನ್ನು ಗುರುತಿಸಿದರೆ ಪ್ರಮುಖವಾಗಿ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ವೆಚ್ಚವನ್ನು ಕಡಿಮೆ ಮಾಡಬಹುದು ಎಂಬುದು ಸರ್ಕಾರದ ಯೋಜನೆಯಾಗಿದೆ. ಇನ್ನು ಆಹಾರ ಇಲಾಖೆಯು ಅನ್ನಭಾಗ್ಯ ಯೋಜನೆಯಡಿ ಅನಗತ್ಯವಾಗಿ ಖರ್ಚಾಗುತ್ತಿರುವ ಹಣ ಉಳಿಸಲು ಈ ಮೂಲಕ ಮುಂದಾಗಿದೆ.ಬಿಪಿಎಲ್ ಕಾರ್ಡ್ ಹೊಂದಿರುವವರು ಆಗಸ್ಟ್ (August) 31 ರೊಳಗೆ ಇ-ಕೆವೈಸಿ ಮಾಡಿಸಲು ಆಹಾರ ಇಲಾಖೆ ಸೂಚನೆ ನೀಡಿತ್ತು.
ಬಿಪಿಎಲ್ ರೇಷನ್ ಕಾರ್ಡ್ (Ration Card) ಹೊಂದಿರುವ ಪಡಿತರ ಚೀಟಿದಾರರು ಒಂದು ಬಾರಿ ತಮ್ಮ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿ (ಆಧಾರ್ ಆಧರಿತ ಹೆಬ್ಬೆಟ್ಟಿನ ದೃಢೀಕರಣ) ಮಾಡಿಸುವುದು ಕೇಂದ್ರ ಸರಕಾರದ ಮಾರ್ಗಸೂಚಿಯನ್ವಯ ಕಡ್ಡಾಯವಾಗಿರುತ್ತದೆ.
ಯಾರು ಕಳೆದ ಹಲವು ವರ್ಷಗಳಿಂದ ತಮ್ಮ ಬಿಪಿಎಲ್ ಪಡಿತರ ಚೀಟಿಗೆ ಈವರೆಗೆ ಕೆ-ವೈಸಿ (KYC) ಮಾಡಿಸಿರುವುದಿಲ್ಲವೋ ಅಂತಹ ಕುಟುಂಬಗಳ ಪಟ್ಟಿಯನ್ನು ಶೀಘ್ರದಲ್ಲಿಯೇ ಅಂತಹವರ ಹೆಸರನ್ನು ಬಿಪಿಎಲ್ ಪಡಿತರ ಚೀಟಿಯಿಂದ ತೆಗೆದು ಹಾಕಲು ಕ್ರಮವಹಿಸಲಾಗುವುದು ಎಂದು ಆಹಾರ ಇಲಾಖೆ ತಿಳಿಸಿದೆ.
Ration Card Big Update Karnataka Kannada News
Bengaluru: For the past few days, the government has openly launched a war against unauthorized BPL card holders across Karnataka and is thinking of finding all types of unauthorized BPL card holders. A private organization has proposed to conduct a survey in this regard. Currently, as per the National Food Security Act (NFSA), there should be 1.03 crore BPL cards in the state. But. At present more than 1.16 crore BPL cards have been distributed in Karnataka. That means there are 14 lakh extra cards than the norm.
The number of unauthorized card holders is increasing day by day. It is said that the food department has given the responsibility to a private company to conduct a survey in this regard. Currently, the burden of guarantee schemes is increasing for the government. BPL Card Criteria to be a beneficiary of Guarantee Scheme.
The government’s plan is to identify the unauthorized card holders and reduce the cost of Annabhagya, Gruhalakshmi Scheme. The food department has taken steps to save the money being spent unnecessarily under the Annabhagya Yojana. The food department has instructed the BPL card holders to do e-KYC by August 31.
Ration card holders with BPL ration card are required to do e-KYC (Aadhaar based verification) of all the members in their ration card once as per the guidelines of the central government.
The Food Department said that a list of families who have not done KYC for their BPL ration cards for the past several years will be taken soon to remove their names from the BPL ration cards.