Karnataka : ಮಹಿಳೆಯರು ಅವರ ಕುಟುಂಬದ ಪಡಿತರ ಚೀಟಿಯಲ್ಲಿ (RationCard Owner Name Change) ಕುಟುಂಬದ ಮುಖ್ಯಸ್ಥರಾಗಿದ್ದರೆ ಮಾತ್ರ ಗೃಹಲಕ್ಷ್ಮಿ ಯೋಜನೆಯಡಿ (Gruha
Lakshmi Scheme) ಮಾಸಿಕ 2,000 ರೂ.ಗಳ ಪ್ರೋತ್ಸಾಹಧನ ಪಡೆಯುತ್ತಾರೆ. ಅಂದರೆ ಪಡಿತರ ಚೀಟಿಯಲ್ಲಿ ಮಹಿಳೆಯೇ ಮನೆಯ ಯಜಮಾನಿ ಎಂದು ದಾಖಲಾಗಬೇಕು. ಆದರೆ ಬಹಳಷ್ಟು
ಪಡಿತರ ಚೀಟಿಗಳಲ್ಲಿ ಹಾಗಿರುವುದಿಲ್ಲ. ಆಗ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಬೇಕೆಂದರೆ ಕುಟುಂಬದ ಯಜಮಾನಿ ಸ್ಥಾನವನ್ನು ಸರಿಪಡಿಸಲೇ ಬೇಕಾಗುತ್ತದೆ ಅದನ್ನು ಸರಿಪಡಿಸುವುದು
ಅನೇಕ ಮಹಿಳೆಯರಿಗೆ ತಲೆನೋವಾಗಿ (RationCard Owner Name Change) ಪರಿಣಮಿಸಿದೆ.

ಯಜಮಾನ ಸ್ಥಾನವನ್ನು ಏಕೆ ಬದಲಾಯಿಸಬೇಕು?
ಹೆಚ್ಚಿನ ಪಡಿತರ ಚೀಟಿಗಳಲ್ಲಿ ಪುರುಷನೇ ಮನೆಯ ಮುಖ್ಯಸ್ಥನಾಗಿರುತ್ತಾನೆ. ಆಗ ಈ ಬದಲಾವಣೆ ಅನಿವಾರ್ಯವಾಗಿದೆ ಏಕೆಂದರೆ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನಗಳು ಮನೆಯ ಮುಖ್ಯಸ್ಥ ಮಹಿಳೆಗೆ
ಮಾತ್ರ ಲಭ್ಯವಿರುತ್ತವೆ. ಇನ್ನು ಕೆಲವು ಪಡಿತರ ಚೀಟಿಗಳಲ್ಲಿ ಯಾವತ್ತೋ ತೀರಿ ಹೋಗಿರುವ ಮೃತ ಅತ್ತೆಯ ಹೆಸರೇ ಕುಟುಂಬದ ಯಜಮಾನಿಯ ಸ್ಥಾನದಲ್ಲಿ ಇರುತ್ತದೆ. ಇಂತಹ ಸಂದರ್ಭಗಳಲ್ಲಿ
ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸದ್ಯ ಈಗಿರುವ ಸೊಸೆಯ ಹೆಸರನ್ನು ನೋಂದಾಯಿಸಿಕೊಳ್ಳ ಬೇಕಾಗುತ್ತದೆ.
ಕೆಲವು ಸಂದರ್ಭಗಳಲ್ಲಿ, ಅತ್ತೆ ಅನಾರೋಗ್ಯದಿಂದ ಕೂಡಿದ್ದರೂ ಅಥವಾ ಇತರ ಕಾರಣಗಳಿಂದಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಬೇಡದಿದ್ದರೆ, ಸೊಸೆಗೇ ಸೇರಲಿ’ ಎಂದು ಬಯಸಿದ್ದರೆ, ಅಂತಹ
ಸಂದರ್ಭಗಳಲ್ಲಿ ಕೂಡ ಸೊಸೆಯನ್ನು ರೇಷನ್ ಕಾರ್ಡ್ ಲ್ಲಿ ಕುಟುಂಬದ ಯಜಮಾನಿ ಸ್ಥಾನದಲ್ಲಿ ದಾಖಲಿಸಬೇಕಾಗುತ್ತದೆ.

ಬದಲಾವಣೆಗೆ ಏನು ಮಾಡಬೇಕು?
ಇಂತಹ ಸಮಸ್ಯೆಯು ಈಗಾಗಲೇ ಕೂಡು ಕುಟುಂಬಗಳು ವಿಭಾಗವಾಗಿರುವ ಅಥವಾ ಈಗಾಗಲೇ ವಿಭಾಗಸಲ್ಪಟ್ಟ ಪ್ರತಿ ಕುಟುಂಬಕ್ಕೂ ಪ್ರತ್ಯೇಕ ರೇಷನ್ ಕಾರ್ಡ್ ಇದ್ದರೆ ಖಂಡಿತ ಎದುರಾಗುವುದಿಲ್ಲ.
ಆದರೆ ಕುಟುಂಬದ ಯಜಮಾನಿ ಸ್ಥಾನ ಮೇಲ್ಕಾಣಿಸಿದ ವಿವಿಧ ಕಾರಣಕ್ಕೆ ಗೊಂದಲಮಯವಾಗಿದೆ.
ಇದನ್ನೂ ಓದಿ : ದ್ವಿತೀಯ ಪಿಯುಸಿಯಲ್ಲಿ ಅನುತೀರ್ಣರಾದ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್, 2ನೇ ಬಾರಿ ಪೂರಕ ಪರೀಕ್ಷೆ: ವೇಳಾಪಟ್ಟಿ ಬಿಡುಗಡೆ
ಇದೀಗ ಆಹಾರ ಇಲಾಖೆ (Department Of Food) ಈ ಗೊಂದಲ ಪರಿಹಾರಕ್ಕೆ ಅವಕಾಶ ಕಲ್ಪಿಸಿದ್ದು, ಸರಳವಾಗಿ ಅತ್ತೆ ಬದಲು ಸೊಸೆಯನ್ನು ರೇಷನ್ ಕಾರ್ಡ್ ನಲ್ಲಿ ಕುಟುಂಬದ ಯಜಮಾನಿಯನ್ನಾಗಿ ಬದಲಿಸಬಹುದಾಗಿದೆ.
ಇದಕ್ಕಾಗಿ ಸೂಕ್ತ ದಾಖಲೆಯೊಂದಿಗೆ ಸಮೀಪದ ಪಡಿತರ ಸೇವಾ ಕೇಂದ್ರಗಳಿಗೆ (Ration Service Centre) ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.
ಏನೆಲ್ಲ ದಾಖಲೆಗಳು ಬೇಕಾಗುತ್ತದೆ??
ಅರ್ಜಿಯ ಜೊತೆಗೆ ಅರ್ಜಿದಾರರ ಆಧಾರ್ ಕಾರ್ಡ್ (Adhar Card) ಅಥವಾ ವೋಟರ್ ಐಡಿ (Voter ID), ಪಡಿತರ ಚೀಟಿ, ಪಾನ್ ಕಾರ್ಡ್ (Pan Card), ಹೊಸ ಕುಟುಂಬ ಸದಸ್ಯರ ಪಾಸ್‌ಪೋರ್ಟ್ ಅಳತೆಯ ಫೋಟೋ,
ಇತ್ತೀಚಿನ ವಿದ್ಯುತ್ ಬಿಲ್, ಕುಟುಂಬದಲ್ಲಿ ಯಾರಾದರೂ ಮರಣ ಹೊಂದಿದ್ದರೆ ಅವರನ್ನು ಪಡಿತರ ಚೀಟಿಯಿಂದ ತೆಗೆಯಲು ಮರಣ ಪ್ರಮಾಣ ಪತ್ರ ಮುಂತಾದ ಸೂಕ್ತ ದಾಖಲೆ ನೀಡಬೇಕು.
ಬಳಿಕ ಬಯೋಮೆಟ್ರಿಕ್ (Bio Metric) ಮೂಲಕ ದಾಖಲಿಸಿ ದೃಢೀಕರಿಸಬೇಕಾಗುತ್ತದೆ. ನಂತರ ಕೊನೆಗೆ ತಿದ್ದುಪಡಿಗೆ ಸಂಬ೦ಧಿಸಿದ೦ತೆ ಪಡಿತರ ಸೇವಾ ಕೇಂದ್ರದಿ೦ದ ಸ್ವೀಕೃತಿಯ ಪ್ರತಿ ಪಡೆಯಬೇಕು. ಹೀಗೆ ಮಾಡಿದಾಗ
ಆನ್‌ಲೈನ್‌ನಲ್ಲಿ (Online) ನಿಮ್ಮ ಪಡಿತರ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರು ಯಜಮಾನಿ ಎಂಬುದಾಗಿ ಬದಲಾಯಿಸಲು ಅಪ್‌ಡೇಟ್ (Update) ಆಗಲಿದೆ.
ಹೀಗೆ ಬದಲಾವಣೆಗೆ ನೀವು ಅರ್ಜಿ ಕೊಟ್ಟು ಬಂದ ಬಳಿಕ ಆಹಾರ ಇಲಾಖೆಯಿಂದ ನಿಮ್ಮ ಮೊಬೈಲ್ ಸಂಖ್ಯೆಗೆ (Mobile Number) ಒಂದು ವಾರದ ನಂತರ ಎಸ್ಎಂಎಸ್ (SMS) ಮೂಲಕ ಹೆಸರು ಬದಲಾವಣೆಯ ಸಂದೇಶ
ಬರಲಿದೆ. ನಿಮ್ಮ ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರು ಮಹಿಳೆ ಎಂಬುದಾಗಿ ತಿದ್ದುಪಡಿಯಾದ ಸಂದೇಶ ಬಂದ ನಂತರ ಬದಲಾಗಲಿದೆ. ಆ ಬಳಿಕ ಅದನ್ನು ಪ್ರಿಂಟ್ (Print) ತೆಗೆದುಕೊಳ್ಳಬಹುದು.
ರಶ್ಮಿತಾ ಅನೀಶ್