download app

FOLLOW US ON >

Tuesday, January 25, 2022
English English Kannada Kannada

ಖಡಕ್‌ ಪೊಲೀಸ್‌ ಆಫೀಸರ್‌ ವಿರುದ್ದ ಲಂಚ ಪಡೆದ ಆರೋಪ ! ಆ ಖಡಕ್‌ ಆಫೀಸರ್‌ ಯಾರು ಗೊತ್ತಾ ?  

ಒಳಾಡಳಿತ ಕಾರ್ಯದರ್ಶಿಗೆ ದೂರಿನ ಬಗ್ಗೆ ಗಂಭೀರ ತನಿಖೆ ಕೈಗೊಳ್ಳುವಂತೆಯೂ ಸೂಚಿಸಿದ್ದರು . ಏಕೆಂದರೆ ರವಿ ಚನ್ನಣ್ಣನವರ್ ಅವರ ಡೀಲ್ ಹಾಗೂ ಹಣ ವರ್ಗಾವಣೆಯ ಕುರಿತಾದ ಸಮಗ್ರ ಮಾಹಿತಿ ಇನ್ಸ್ ಪೆಕ್ಟರ್ ಶ್ರೀನಿವಾಸ್ ಹಾಗೂ  ಈ ಬಗ್ಗೆ ದೂರು ನೀಡಿದ್ದ ಮಂಜುನಾಥ್ ಅವರ ಆಡಿಯೋದಲ್ಲಿಯೇ ಬಹಿರಂಗವಾಗಿದೆ ಎನ್ನಲಾಗಿದೆ.
Ravi D Channannavar

ಬೆಂಗಳೂರು ಜ 13 : ರಾಜ್ಯ ಕಂಡ ಖಡಕ್‌ ಪೊಲೀಸ್‌ ಆಫೀಸರ್‌ಗಳಲ್ಲಿ ರವಿ ಡಿ ಚನ್ನಣ್ಣನವರ್‌ ಕೂಡ ಒಬ್ಬರು ಆದರೆ ಇದೀಗ ಅವರ ಮೇಲೆ ಲಂಚ ಪಡೆದ ಆರೋಪ ಕೇಳಿ ಬಂದಿದ್ದು ಈ ಬಗ್ಗೆ ವಿಚಾರಣೆಕೂಡ ನಡೆಯುತ್ತಿದೆ.

ಈ ಬಗ್ಗೆ ದಿ ಫೈಲ್ ವರದಿಮಾಡಿದ್ದು, 2021 ರ ಸೆಪ್ಟಂಬರ್ 28ರಂದು ರವಿ ಚನ್ನಣ್ಣನವರ್ ಹಾಗೂ ಅವರ ಟೀಂ  ವಿರುದ್ದ 55 ಲಕ್ಷ ಲಂಚ ರೂ ಲಂಚ ಪಡೆದ ಬಗ್ಗೆ ಆರೋಪ ಸಲ್ಲಿಕೆಯಾಗಿತ್ತು.ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಒಳಾಡಳಿತ ಕಾರ್ಯದರ್ಶಿಗೆ ದೂರಿನ ಬಗ್ಗೆ ಗಂಭೀರ ತನಿಖೆ ಕೈಗೊಳ್ಳುವಂತೆಯೂ ಸೂಚಿಸಿದ್ದರು . ಏಕೆಂದರೆ ರವಿ ಚನ್ನಣ್ಣನವರ್ ಅವರ ಡೀಲ್ ಹಾಗೂ ಹಣ ವರ್ಗಾವಣೆಯ ಕುರಿತಾದ ಸಮಗ್ರ ಮಾಹಿತಿ ಇನ್ಸ್ ಪೆಕ್ಟರ್ ಶ್ರೀನಿವಾಸ್ ಹಾಗೂ  ಈ ಬಗ್ಗೆ ದೂರು ನೀಡಿದ್ದ ಮಂಜುನಾಥ್ ಅವರ ಆಡಿಯೋದಲ್ಲಿಯೇ ಬಹಿರಂಗವಾಗಿದೆ ಎನ್ನಲಾಗಿದೆ.
ರವಿ ಚನ್ನಣ್ಣನವರ್ ಗೆ 25 ಲಕ್ಷ, ಡಿವೈಎಸ್ಪಿಗೆ 15 ಲಕ್ಷ ಹಾಗು ಡಿವೈಎಸ್ಪಿ ಕಚೇರಿಯಲ್ಲಿನ ಮತ್ತೋರ್ವ  ಅಧಿಕಾರಿಗೆ 10 ಲಕ್ಷ ಹಣ ನೀಡಿರುವುದಾಗಿ ಅಶೋಕ್ ಎಂಬಾತ  ಕಂದಪ್ಪ ಮತ್ತು ಸಂಪತ್ ಎಂಬುವವರ ಮುಂದೆ ಬಾಯ್ಬಿಟ್ಟಿರುವುದಾಗಿ ದೂರುದಾರ ಮಂಜುನಾಥ್  ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.  

ಘಟನೆ ವಿವರ :  ಆನೇಕಲ್‌ ತಾಲೂಕಿನ ಮಾರನಾಯಕನಹಳ್ಳಿಯ ಅಶೋಕ್‌ ಅವರು  ತಿಮ್ಮರಾಯಸ್ವಾಮಿ ಬ್ಲೂ ಮೆಟಲ್ಸ್‌ ಕ್ರಷರ್‌ ನಡೆಸುತ್ತಿದ್ದರು. ಕ್ರಷರ್‌ ಮುಚ್ಚುವ ಹಂತದಲ್ಲಿದೆ. ಹೊಸದಾಗಿ ಉದ್ಯಮ ನಡೆಸಲು  ಮಂಜುನಾಥ್‌ ಅವರಿಂದ 40.00 ಲಕ್ಷ ಹಣ ಪಡೆದಿದ್ದರು. ಆದರೆ ಫ್ಯಾಕ್ಟರಿ ಮಾರಿದ್ರೆ ಅದರಲ್ಲಿ ಬರುವ ಹಣದಿಂದ ಹೊಸದಾಗಿ   ಆದಿ ಬೈರವ ಬ್ಲೂ ಮೆಟಲ್‌ ಕ್ರಷರ್‌ ಉದ್ಯಮ ನಡೆಸಬಹುದು ಎಂದು  ಮಂಜುನಾಥ್‌ ಅವರನ್ನು ನಂಬಿಸಿದ್ದರಂತೆ ಅಶೋಕ್‌. 
ಇವರ ಮಾತನ್ನು  ನಂಬಿದ ಮಂಜುನಾಥ್‌ ತಮ್ಮ ಕಾರ್ಖಾನೆಯನ್ನು 2019ರ ಮೇ 14ರಂದು  ಎಸ್ಸೆ ಕಾರ್ಪೋರೇಟ್‌ ಕಂಪನಿಗೆ 3.96 ಕೋಟಿ ರು.ಗಳಿಗೆ  ಮಾರಾಟ ಮಾಡಿ ವೆಂಕಟೇಶನ್‌ ಎಂಬುವರಿಗೆ ನೋಂದಣಿ ಮಾಡಿಕೊಟ್ಟಿದ್ದರು.
ಈ ಹಣವನ್ನು ಫಿನ್‌ ಕೇರ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನಲ್ಲಿ ಹೊಸದಾಗಿ ಮಾಡಿಸಿದ್ದ ಖಾತೆಗೆ (ಖಾತೆ ಸಂಖ್ಯೆ; 19200000003520) ಜಮಾ ಮಾಡಲಾಗಿತ್ತು. ಇದಾದ 2-3 ದಿನಗಳ ನಂತರ ಅಶೋಕ್‌ ಎಂಬಾತ ‘ ಅಷ್ಟು ಹಣ ನಿನ್ನ ಖಾತೆಯಲ್ಲಿದ್ದರೆ ನಿನಗೆ ಐ ಟಿ ಯಿಂದ ತೊಂದರೆಯಾಗುತ್ತದೆ. ಆದ್ದರಿಂದ ನಾನು ಹೇಳಿದವರ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಸು ಎಂದು ನಂಬಿಸಿದ್ದನಂತೆ.
ಅದರಂತೆ ಸುಬ್ರಮಣಿ ಅವರ ಇಂಡಿಯನ್‌ ಬ್ಯಾಂಕ್‌ ಖಾತೆಗೆ 35 ಲಕ್ಷ, ಅತ್ತಿಬೆಲೆ ಕರೂರು ವೈಶ್ಯ ಬ್ಯಾಂಕ್‌ನ  ಎಬಿಆರ್‌ ಬಾರ್‌ ಅಂಡ್‌ ರೆಸ್ಟೋರೆಂಟ್‌ ಖಾತೆಗೆ 25 ಲಕ್ಷ, ಮಾಯಸಂದ್ರ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ  ಮಂಗಳ ಅವರಿಗೆ 25 ಲಕ್ಷ, ಹೊಸೂರಿನ ಕೆನರಾ ಬ್ಯಾಂಕ್‌ನಲ್ಲಿ ಶಿವಶಂಕರ್‌ ಎಂಬುವರಿಗೆ 60 ಲಕ್ಷ ರು., ಹೊಸೂರಿನಲ್ಲಿದ್ದ ಫೆಡರಲ್‌ ಬ್ಯಾಂಕ್‌ನಲ್ಲಿ ಬೆಸ್ಟ್‌ ಎಲೆಕ್ಟ್ರಿಕಲ್‌ ಹೊಂದಿದ್ದ ಖಾತೆಗೆ 35 ಲಕ್ಷ ರು ಜಮಾ ಮಾಡಿದ್ದರಂತೆ.
ಅಷ್ಟೇ ಅಲ್ಲ, ಉಮಾ ಎಂಬುವರ ಖಾತೆಗೆ 5 ಲಕ್ಷ, ಕೆ ರೇಣುಕ ಎಂಬುವರು ಹೊಂದಿದ್ದ ಲಕ್ಷ್ಮಿ ವಿಲಾಸ್‌ ಬ್ಯಾಂಕ್‌ ಖಾತೆಗೆ 1.30 ಕೋಟಿ, ಮಂಜುನಾಥ್‌ ಎಂಟರ್‌ ಪ್ರೈಸೆಸ್‌ಗೆ 8 ಲಕ್ಷ, ಗೀತಾ ಶೈಲೇಶ್‌ ಪಾಟೀಲ್‌ ಅವರ ಖಾತೆಗೆ 4 ಲಕ್ಷ, ಚೇತನ್‌ ಶೈಲೇಶ್‌ ಪಾಟೀಲ್‌ ಖಾತೆಗೆ 4 ಲಕ್ಷ.ಹೀಗೆ  ಒಟ್ಟು 3.96 ಕೋಟಿ ರು.ಗಳನ್ನು ಆರ್‌ಟಿಜಿಎಸ್‌ ಮುಖಾಂತರ ಮಂಜುನಾಥ್ ಟ್ರಾನ್ಸ್ ಫರ್ ಮಾಡಿದ್ದರಂತೆ.

ಆದರೆ ನಂತರದಲ್ಲಿ ಅಶೋಕ್ ಮಾಡಿದ ವಂಚನೆ ವಿರುದ್ಧ ಮೋಸಕ್ಕೊಳಗಾದ ಮಂಜುನಾಥ್  ತಮಗೆ ನ್ಯಾಯ ದೊರಕಿಸಿಕೊಡುವಂತೆ ಹಿಂದೆ ಗ್ರಾಮಾಂತರ ಎಸ್ಪಿಯಾಗಿದ್ದ ಈಗಿನ ಸಿಐಡಿ ಎಸ್ಪಿ ರವಿ.ಡಿ.ಚನ್ನಣ್ಣನವರ್ ಗೆ ಮನವಿ ಮಾಡಿದ್ದರಂತೆ. ನ್ಯಾಯ ದೊರಕಿಸಿಕೊಡುವುದಾಗಿ ಹೇಳಿ ಆಪಾದಿತರ ಮೇಲೆ ಎಫ್ ಐ ಆರ್ ದಾಖಲಿಸಲು ಚನ್ನಣ್ಣನವರ್ ಲಂಚ ಪಡೆದಿದ್ದಾರೆಂದು ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp

Submit Your Article