ಮುಂದಿನ 3 ರಿಂದ 5 ವರ್ಷಗಳಲ್ಲಿ ಔಷಧ ತಯಾರಿಕೆಗೆ (RBI Governor Warns Pharma Sector) ಅಗತ್ಯವಾದ ಕಚ್ಚಾ ವಸ್ತುಗಳ ಕೊರತೆ ಭಾರತಕ್ಕೆ ಗಂಭೀರ ಸವಾಲಾಗಬಹುದು
ಔಷಧ ತಯಾರಿಕೆಗೆ ಅಗತ್ಯವಾದ API ಪೂರೈಕೆ ಅಸ್ತವ್ಯಸ್ತವಾದರೆ ದೇಶದ ಫಾರ್ಮಾ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ
ಜಿಡಿಪಿ ಬೆಳವಣಿಗೆ ಸಾಕಾಗದು; ಭಾರತದ ಆರ್ಥಿಕತೆಗೆ ಹೊಸ ಎಚ್ಚರಿಕೆ ನೀಡಿದ ರಘುರಾಮ್ ರಾಜನ್
ಭಾರತದ ಆರ್ಥಿಕತೆಯ ಮುಂದಿನ ದೊಡ್ಡ ಸವಾಲು ಕಚ್ಚಾ ತೈಲದ (RBI Governor Warns Pharma Sector) ಕೊರತೆಯಲ್ಲ, ಬದಲಾಗಿ ಔಷಧ ತಯಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳ ಲಭ್ಯತೆಯ ಕೊರತೆಯಾಗಿರಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಹಾಗೂ ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್ (Raghuram Rajan) ಎಚ್ಚರಿಕೆ ನೀಡಿದ್ದಾರೆ.
ಜಾಗತಿಕ ಭೌಗೋಳಿಕ ರಾಜಕೀಯ ಉದ್ವಿಗ್ನತೆ, ವ್ಯಾಪಾರ ಯುದ್ಧಗಳು ಹಾಗೂ ಪೂರೈಕೆ ಸರಪಳಿಯ ಅಡಚಣೆಗಳು ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕತೆಗೆ ಹೊಸ ರೀತಿಯ ಸವಾಲುಗಳನ್ನು ಸೃಷ್ಟಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತವು ವಿಶ್ವದ ಅತಿ ದೊಡ್ಡ ಜೆನೆರಿಕ್ ಔಷಧ ಉತ್ಪಾದಕರಲ್ಲಿ ಒಂದಾಗಿದ್ದರೂ, (RBI Governor Warns Pharma Sector) ಅದರ ತಯಾರಿಕೆಗೆ ಅಗತ್ಯವಾಗಿರುವ ‘ಆಕ್ಟಿವ್
ಫಾರ್ಮಾಸ್ಯೂಟಿಕಲ್ ಇಂಗ್ರಿಡಿಯೆಂಟ್ಸ್’ (API) ಗಳಲ್ಲಿ ಶೇಕಡಾ 70ಕ್ಕೂ ಹೆಚ್ಚು ಪ್ರಮಾಣವನ್ನು ವಿದೇಶಗಳಿಂದ, ವಿಶೇಷವಾಗಿ ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ.
ಜಾಗತಿಕ ಸಂಘರ್ಷ ಅಥವಾ ವ್ಯಾಪಾರ ಮಾರ್ಗಗಳಲ್ಲಿ ಅಡಚಣೆ ಉಂಟಾದರೆ ದೇಶದ ಔಷಧ ವಲಯವೇ ತೀವ್ರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ರಾಜನ್ ಆತಂಕ
ವ್ಯಕ್ತಪಡಿಸಿದ್ದಾರೆ. ಆದ್ದರಿಂದ ದೇಶೀಯ ಉತ್ಪಾದನೆ ಹೆಚ್ಚಿಸುವ ಜೊತೆಗೆ ಕಾರ್ಯತಂತ್ರದ ಸಂಗ್ರಹ ವ್ಯವಸ್ಥೆ ನಿರ್ಮಿಸುವುದು ಅಗತ್ಯವಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.
ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವಿನ ತಾತ್ಕಾಲಿಕ ಶಾಂತಿ ಒಪ್ಪಂದವನ್ನು ಉಲ್ಲೇಖಿಸಿದ ಅವರು, ಇದು ದೀರ್ಘಕಾಲೀನ ಪರಿಹಾರವಲ್ಲ ಎಂದು ಹೇಳಿದ್ದಾರೆ.
ಭಾರತದ ಬಹುಪಾಲು ಕಚ್ಚಾ ತೈಲ, ಎಲ್‌ಎನ್‌ಜಿ (LNG) ಮತ್ತು ಎಲ್‌ಪಿಜಿ ಆಮದು ಹೋರ್ಮುಜ್ ಜಲಸಂಧಿ ಮಾರ್ಗದ ಮೂಲಕವೇ ನಡೆಯುತ್ತಿರುವುದರಿಂದ, ಈ ಪ್ರದೇಶದಲ್ಲಿ ಯಾವುದೇ ಅಸ್ಥಿರತೆ ಉಂಟಾದರೂ ದೇಶದ ಇಂಧನ ಭದ್ರತೆ ಮೇಲೆ ಪರಿಣಾಮ ಬೀಳಬಹುದು ಎಂದು ಎಚ್ಚರಿಸಿದ್ದಾರೆ.
ಇದೇ ಕಾರಣಕ್ಕೆ ಭಾರತವು ತನ್ನ ವ್ಯೂಹಾತ್ಮಕ ತೈಲ ಸಂಗ್ರಹಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಇದರ ಜೊತೆಗೆ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿಯೂ ಭಾರತ ಇನ್ನೂ ಆಮದುಗಳ ಮೇಲೆ ಹೆಚ್ಚಿನ ಅವಲಂಬನೆ ಹೊಂದಿದೆ ಎಂದು ರಾಜನ್ ಸೂಚಿಸಿದ್ದಾರೆ.
ಸೋಲಾರ್ ಸೆಲ್‌ಗಳು (Solar Cell) ಮತ್ತು ಗಾಳಿ ವಿದ್ಯುತ್ ಘಟಕಗಳಂತಹ ಪ್ರಮುಖ ಸಾಧನಗಳ ಪೂರೈಕೆ ವ್ಯತ್ಯಯಗೊಂಡರೆ, ಹಸಿರು ಇಂಧನ ಯೋಜನೆಗಳ ಮೇಲೂ ಪರಿಣಾಮ
ಬೀಳುವ ಸಾಧ್ಯತೆಯಿದೆ. ಭವಿಷ್ಯದ ಆರ್ಥಿಕ ಸ್ಥಿರತೆಗೆ ದೇಶೀಯ ಉತ್ಪಾದನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ರೂಪಾಯಿ ಮೌಲ್ಯ ಕುಸಿತ, ವಿದೇಶಿ ನೇರ ಹೂಡಿಕೆಯ ನಿಧಾನಗತಿ ಹಾಗೂ ದೇಶೀಯ ಹೂಡಿಕೆಗಳ ಕೊರತೆಯೂ ಆತಂಕಕಾರಿ ಬೆಳವಣಿಗೆಗಳಾಗಿವೆ ಎಂದು ರಾಜನ್ ಅಭಿಪ್ರಾಯಪಟ್ಟಿದ್ದಾರೆ.
ಜಿಡಿಪಿ ಬೆಳವಣಿಗೆಯ ಅಂಕಿಅಂಶಗಳು ಉತ್ತಮವಾಗಿ ಕಾಣುತ್ತಿದ್ದರೂ, ಅದರ ಅನುಪಾತದಲ್ಲಿ ಕೈಗಾರಿಕಾ ಮತ್ತು ಕಾರ್ಪೊರೇಟ್ (Corporate) ಹೂಡಿಕೆಗಳು ಹೆಚ್ಚಾಗುತ್ತಿಲ್ಲ ಎಂಬುದನ್ನು ಅವರು ಪ್ರಶ್ನಿಸಿದ್ದಾರೆ.
ಭವಿಷ್ಯದ ಆರ್ಥಿಕ ಆಘಾತಗಳನ್ನು ಎದುರಿಸಲು ಭಾರತ ತನ್ನ ಆಮದು ಮೂಲಗಳನ್ನು ವೈವಿಧ್ಯೀಕರಿಸುವುದು, ದೇಶೀಯ ಉತ್ಪಾದನೆಯನ್ನು ಬಲಪಡಿಸುವುದು ಮತ್ತು ದೀರ್ಘಕಾಲೀನ ಆರ್ಥಿಕ ಕಾರ್ಯತಂತ್ರಗಳನ್ನು ರೂಪಿಸುವುದು ಅತ್ಯಗತ್ಯ ಎಂದು ಅವರು ಕರೆ ನೀಡಿದ್ದಾರೆ.
ಇದನ್ನು ಓದಿ : https://vijayatimes.com/legislative-council-elections-battle/