ಇನ್ಮುಂದೆ ಕಾಗದದ ಚೆಕ್ ಮಾತ್ರವಲ್ಲ: ‘ಇ-ಚೆಕ್’ ಪರಿಚಯಿಸಲು (RBI introducing e-cheques) ಆರ್‌ಬಿಐ ಯೋಜನೆ
ಚೆಕ್ ಪಾವತಿಯಲ್ಲಿ ವಿಳಂಬ ತಪ್ಪಿಸಲು ಆರ್‌ಬಿಐ ಹೊಸ ಯೋಜನೆ
ಸುರಕ್ಷತೆ, ವೇಗ ಮತ್ತು ನಿಯಂತ್ರಣ ಹೆಚ್ಚಿಸಲು ‘ಪೇಮೆಂಟ್ಸ್ ವಿಷನ್ 2028’ಯೋಜನೆ
ಭಾರತೀಯ ರಿಸರ್ವ್ ಬ್ಯಾಂಕ್ (RBI) ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಇನ್ನಷ್ಟು (RBI introducing e-cheques) ಸುಧಾರಿಸಲು ಹೊಸ ಯೋಜನೆಗಳನ್ನು ಪ್ರಕಟಿಸಿದ್ದು, ಅದರ ಭಾಗವಾಗಿ ಇನ್ಮುಂದೆ ಸಾಂಪ್ರದಾಯಿಕ ಕಾಗದದ ಚೆಕ್ ಜೊತೆಗೆ ಎಲೆಕ್ಟ್ರಾನಿಕ್ ಚೆಕ್ (E-Cheque) ಪರಿಚಯಿಸುವ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ.
RBI ಬಿಡುಗಡೆ ಮಾಡಿದ ‘Payments Vision 2028’ ವರದಿಯಲ್ಲಿ ಈ ಮಹತ್ವದ ಪ್ರಸ್ತಾವನೆ ಮಾಡಲಾಗಿದೆ. ಡಿಜಿಟಲ್ ಪಾವತಿಗಳನ್ನು ವೇಗವಾಗಿ, ಸುರಕ್ಷಿತವಾಗಿ ಮತ್ತು ಸುಲಭವಾಗಿ ಮಾಡಲು ಈ ಯೋಜನೆ ರೂಪಿಸಲಾಗಿದೆ. ಕಾಗದದ ಚೆಕ್‌ನ ಸೌಲಭ್ಯ ಹಾಗೂ ಡಿಜಿಟಲ್ ಪಾವತಿಯ ವೇಗವನ್ನು ಒಟ್ಟಿಗೆ ಸೇರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

RBI ಹೇಳುವಂತೆ, ಇ-ಚೆಕ್ ವ್ಯವಸ್ಥೆ ಜಾರಿಗೆ ಬಂದರೆ ಚೆಕ್ ಪಾವತಿಗಳಲ್ಲಿ (RBI introducing e-cheques) ಆಗುವ ವಿಳಂಬವನ್ನು ಕಡಿಮೆ ಮಾಡಬಹುದು.
ಈಗಿನಂತೆ ಚೆಕ್ ಕ್ಲಿಯರೆನ್ಸ್‌ಗೆ ಹಲವು ದಿನಗಳು ಬೇಕಾಗುವುದಿಲ್ಲ. ಡಿಜಿಟಲ್ ತಂತ್ರಜ್ಞಾನದ ಸಹಾಯದಿಂದ ಹಣ ವರ್ಗಾವಣೆ ವೇಗವಾಗಿ ನಡೆಯಲಿದೆ.
ಇದರಿಂದ ಬ್ಯಾಂಕಿಂಗ್ ವ್ಯವಹಾರಗಳು ಇನ್ನಷ್ಟು ಸುಲಭವಾಗಲಿವೆ. ವಿಶೇಷವಾಗಿ ದೊಡ್ಡ ಮೊತ್ತದ ವ್ಯವಹಾರಗಳು ಮತ್ತು ಮರುಕಳಿಸುವ ಪಾವತಿಗಳಿಗೆ ಇದು ಉಪಯುಕ್ತವಾಗಲಿದೆ ಎಂದು ಹೇಳಲಾಗಿದೆ.
ಡಿಜಿಟಲ್ ವಂಚನೆಗಳನ್ನು ತಡೆಯುವ ಉದ್ದೇಶದಿಂದ RBI ಇನ್ನೂ ಕೆಲವು ಪ್ರಮುಖ ಯೋಜನೆಗಳನ್ನು ಪ್ರಕಟಿಸಿದೆ.
ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ (Credit Card) ಅನ್ನು ಮೊಬೈಲ್ ಆಪ್ ಮೂಲಕ ಆನ್/ಆಫ್ ಮಾಡುವಂತೆ, ಯುಪಿಐ ಹಾಗೂ ನೆಟ್ ಬ್ಯಾಂಕಿಂಗ್ (Net Banking) ವ್ಯವಹಾರಗಳಿಗೂ ಇದೇ ರೀತಿಯ ನಿಯಂತ್ರಣ ವ್ಯವಸ್ಥೆ ತರಲು ಯೋಜಿಸಲಾಗಿದೆ.
ಇದರಿಂದ ಗ್ರಾಹಕರು ತಮ್ಮ ಖಾತೆ ವ್ಯವಹಾರಗಳ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಲು ಸಾಧ್ಯವಾಗುತ್ತದೆ.
ವಂಚನೆ ಸಂಭವಿಸಿದರೆ ತಕ್ಷಣ ವ್ಯವಹಾರಗಳನ್ನು ನಿಲ್ಲಿಸಲು ಸಹ ಸಾಧ್ಯವಾಗುತ್ತದೆ.
ಇದೇ ವೇಳೆ ಡಿಜಿಟಲ್ ವಂಚನೆ ಪ್ರಕರಣಗಳಲ್ಲಿ ಜವಾಬ್ದಾರಿ ಹಂಚಿಕೊಳ್ಳುವ ಹೊಸ ಚೌಕಟ್ಟು ರೂಪಿಸಲು RBI ಮುಂದಾಗಿದೆ. ಈಗಿನಂತೆ ಕೇವಲ ಗ್ರಾಹಕರ ಬ್ಯಾಂಕ್ ಮಾತ್ರವಲ್ಲದೆ, ಹಣ ಸ್ವೀಕರಿಸಿದ ಬ್ಯಾಂಕ್ ಕೂಡ ಜವಾಬ್ದಾರಿ ಹೊರುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ವಂಚನೆ ಪ್ರಕರಣಗಳ ತನಿಖೆ ಮತ್ತು ಪರಿಹಾರ ಪ್ರಕ್ರಿಯೆ ವೇಗವಾಗಲಿದೆ.
ಜೊತೆಗೆ AePS ವ್ಯವಸ್ಥೆ, TReDS ಪಾವತಿ ವ್ಯವಸ್ಥೆ ಮತ್ತು ಪೇಮೆಂಟ್ ಸ್ವಿಚಿಂಗ್ ಸೇವೆಗಳಲ್ಲೂ ಸುಧಾರಣೆ ಮಾಡಲು RBI ಯೋಜಿಸಿದೆ.
ಎಲೆಕ್ಟ್ರಾನಿಕ್ ಚೆಕ್ ಎಂದರೆ ಕಾಗದದ ಚೆಕ್‌ನ ಡಿಜಿಟಲ್ ರೂಪವಾಗಿದ್ದು, ಬ್ಯಾಂಕ್ ಖಾತೆಗಳ ನಡುವೆ ನೇರವಾಗಿ ಹಣ ವರ್ಗಾಯಿಸಲು ಬಳಸಲಾಗುತ್ತದೆ.
ಡಿಜಿಟಲ್ ಸಹಿ, ಎನ್‌ಕ್ರಿಪ್ಶನ್ (Encryption) ಮತ್ತು ದೃಢೀಕರಣ ವ್ಯವಸ್ಥೆಗಳಿರುವುದರಿಂದ ಇದು ಹೆಚ್ಚು ಸುರಕ್ಷಿತವಾಗಿದೆ.
ಕಾಗದದ ಚೆಕ್‌ಗಳಿಗಿಂತ ಕಡಿಮೆ ವೆಚ್ಚದಲ್ಲಿ ಮತ್ತು ಕಡಿಮೆ ಸಮಯದಲ್ಲಿ ಹಣ ವರ್ಗಾವಣೆ ಸಾಧ್ಯವಾಗುತ್ತದೆ.
RBI ಈ ಯೋಜನೆಗಳನ್ನು ಜಾರಿಗೆ ತಂದರೆ ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಇನ್ನಷ್ಟು ಬಲವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.