• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಡಿಜಿಟಲ್ ಬ್ಯಾಂಕಿಂಗ್‌ನಲ್ಲಿ ದೊಡ್ಡ ಬದಲಾವಣೆ: ಡಾರ್ಕ್ ಪ್ಯಾಟರ್ನ್‌, ಮಿಸ್‌ಸೆಲ್ಲಿಂಗ್‌, ಏಜೆಂಟ್ ಕಿರುಕುಳಕ್ಕೆ RBI ಇಂದ ಕಠಿಣ ನಿಯಮ

Teju Srinivas by Teju Srinivas
in ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಡಿಜಿಟಲ್ ಬ್ಯಾಂಕಿಂಗ್‌ನಲ್ಲಿ ದೊಡ್ಡ ಬದಲಾವಣೆ: ಡಾರ್ಕ್ ಪ್ಯಾಟರ್ನ್‌, ಮಿಸ್‌ಸೆಲ್ಲಿಂಗ್‌, ಏಜೆಂಟ್ ಕಿರುಕುಳಕ್ಕೆ RBI ಇಂದ ಕಠಿಣ ನಿಯಮ
0
SHARES
7
VIEWS
Share on FacebookShare on Twitter

ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್: ಆರ್‌ಬಿಐ ಹೊಸ (RBI rules on dark patterns) ನಿಯಮಗಳಿಂದ ವಂಚನೆಗೆ ಕಡಿವಾಣ

ತಪ್ಪು ಮಾಹಿತಿ ನೀಡಿ ಉತ್ಪನ್ನ ಮಾರಾಟ ಮಾಡಿದರೆ ಬ್ಯಾಂಕುಗಳೇ ನೇರ ಹೊಣೆ, ಗ್ರಾಹಕರಿಗೆ ಮರುಪಾವತಿ

ಲೋನ್‌, ವಿಮೆ ಮತ್ತು ಡಿಜಿಟಲ್ ಸೇವೆಗಳಲ್ಲಿ ಪಾರದರ್ಶಕತೆಗೆ ಹೊಸ ನಿಯಮಗಳು, 2027ರಿಂದ ಜಾರಿ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಹಕರ ಹಿತಾಸಕ್ತಿಯನ್ನು (RBI rules on dark patterns) ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಹೊಸ ‘ಜವಾಬ್ದಾರಿಯುತ ವ್ಯಾಪಾರ ನಡವಳಿಕೆ’ (Responsible Business Conduct) ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಈ ನಿಯಮಗಳು 2027ರ ಜನವರಿ 1ರಿಂದ ಜಾರಿಗೆ ಬರಲಿದ್ದು, ಬ್ಯಾಂಕುಗಳು ಮತ್ತು ಅವುಗಳ ಪರವಾಗಿ ಕಾರ್ಯನಿರ್ವಹಿಸುವ ಏಜೆಂಟ್‌ಗಳ ಮೇಲೆ ಕಠಿಣ ನಿಯಂತ್ರಣ ಹೇರುವುದಾಗಿದೆ.

ವಿಶೇಷವಾಗಿ ಡಿಜಿಟಲ್ ಬ್ಯಾಂಕಿಂಗ್‌ನಲ್ಲಿ ಗ್ರಾಹಕರನ್ನು ಗೊಂದಲಕ್ಕೀಡು ಮಾಡುವ ಡಾರ್ಕ್ ಪ್ಯಾಟರ್ನ್‌ಗಳು, ಸಾಲದೊಂದಿಗೆ ಕಡ್ಡಾಯವಾಗಿ ವಿಮೆ ಅಥವಾ ಇತರ

ಹಣಕಾಸು ಉತ್ಪನ್ನಗಳನ್ನು ಮಾರಾಟ ಮಾಡುವ ಪದ್ಧತಿ ಹಾಗೂ ತಪ್ಪು ಮಾಹಿತಿ ನೀಡಿ ಉತ್ಪನ್ನಗಳನ್ನು ಮಾರಾಟ ಮಾಡುವ ಕ್ರಮಗಳಿಗೆ ಸಂಪೂರ್ಣ ಬ್ರೇಕ್ ಬೀಳಲಿದೆ.

RBI rules on dark patterns

ಈ ಹೊಸ ನಿಯಮಗಳಿಂದ ಗ್ರಾಹಕರಿಗೆ ಹೆಚ್ಚು (RBI rules on dark patterns) ಪಾರದರ್ಶಕ ಹಾಗೂ ಸುರಕ್ಷಿತ ಬ್ಯಾಂಕಿಂಗ್ ಸೇವೆ ದೊರೆಯುವ ನಿರೀಕ್ಷೆಯಿದೆ.

ಇದುವರೆಗೆ ಅನೇಕ ಗ್ರಾಹಕರು ಮನೆ ಸಾಲ, ವಾಹನ ಸಾಲ ಅಥವಾ ವೈಯಕ್ತಿಕ ಸಾಲ ಪಡೆಯುವ ವೇಳೆ ಬ್ಯಾಂಕ್ ಸೂಚಿಸಿದ ವಿಮೆ ಅಥವಾ ಇತರ ಹಣಕಾಸು ಉತ್ಪನ್ನಗಳನ್ನು ಕಡ್ಡಾಯವಾಗಿ ಖರೀದಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದರು.

ಹೊಸ ನಿಯಮದ ಪ್ರಕಾರ, ಬ್ಯಾಂಕ್ ಯಾವುದೇ ಹೆಚ್ಚುವರಿ ಉತ್ಪನ್ನವನ್ನು ಗ್ರಾಹಕರ ಮೇಲೆ ಬಲವಂತವಾಗಿ ಹೇರಲು ಸಾಧ್ಯವಾಗುವುದಿಲ್ಲ. ವಿಮೆ ಅಗತ್ಯವಿದ್ದರೂ, ಗ್ರಾಹಕರು ತಮ್ಮ ಇಚ್ಛೆಯ ಯಾವುದೇ ವಿಮಾ ಕಂಪನಿಯ ಪಾಲಿಸಿಯನ್ನು ಆಯ್ಕೆ ಮಾಡಿಕೊಂಡು ಬ್ಯಾಂಕ್‌ಗೆ ಸಲ್ಲಿಸಬಹುದು.

ಜೊತೆಗೆ ಮೊಬೈಲ್ ಬ್ಯಾಂಕಿಂಗ್ ಆ್ಯಪ್ (Banking App) ಅಥವಾ ವೆಬ್‌ಸೈಟ್‌ಗಳಲ್ಲಿ ಗ್ರಾಹಕರ ಗಮನ ತಪ್ಪಿಸಿ ಹೆಚ್ಚುವರಿ ಶುಲ್ಕ ಸೇರಿಸುವುದು, ಪೂರ್ವನಿಗದಿತ ಆಯ್ಕೆಗಳ

ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುವುದು ಅಥವಾ ಗೊಂದಲ ಉಂಟುಮಾಡುವ ಸಂದೇಶಗಳನ್ನು ಪ್ರದರ್ಶಿಸುವುದಕ್ಕೂ ನಿಷೇಧ ಹೇರಲಾಗಿದೆ.

ಆರ್‌ಬಿಐ ಮಾರ್ಗಸೂಚಿಗಳ ಮತ್ತೊಂದು ಪ್ರಮುಖ ಅಂಶವೆಂದರೆ, ಬ್ಯಾಂಕುಗಳ ಪರವಾಗಿ ಕಾರ್ಯನಿರ್ವಹಿಸುವ ಡೈರೆಕ್ಟ್ ಸೆಲ್ಲಿಂಗ್ ಏಜೆಂಟ್‌ಗಳ (DSA) ವರ್ತನೆಗೆ ಬ್ಯಾಂಕುಗಳೇ ನೇರ ಹೊಣೆಗಾರರಾಗುವುದು.

ಏಜೆಂಟ್‌ಗಳು ತಪ್ಪು ಮಾಹಿತಿ ನೀಡಿ ಗ್ರಾಹಕರಿಂದ ಉತ್ಪನ್ನ ಖರೀದಿಸಿದರೆ, ಗುಪ್ತ ಶುಲ್ಕ ವಿಧಿಸಿದರೆ ಅಥವಾ ಸುಳ್ಳು ಭರವಸೆ ನೀಡಿದರೆ, ಅದರ ಹೊಣೆಗಾರಿಕೆಯಿಂದ ಬ್ಯಾಂಕುಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಇಂತಹ ಪ್ರಕರಣಗಳಲ್ಲಿ ಬ್ಯಾಂಕುಗಳು ಗ್ರಾಹಕರಿಗೆ ಸಂಪೂರ್ಣ ಮರುಪಾವತಿ ನೀಡುವ ಜೊತೆಗೆ ಸೂಕ್ತ ಪರಿಹಾರವನ್ನೂ ಒದಗಿಸಬೇಕಾಗುತ್ತದೆ. ಇದರಿಂದ ಸಾಲದ ಏಜೆಂಟ್‌ಗಳ ಕಿರುಕುಳ ಹಾಗೂ ವಂಚನೆ ಪ್ರಕರಣಗಳಿಗೆ ದೊಡ್ಡ ಮಟ್ಟದಲ್ಲಿ ಕಡಿವಾಣ ಬೀಳುವ ಸಾಧ್ಯತೆ ಇದೆ.

ಡಿಜಿಟಲ್ ಬ್ಯಾಂಕಿಂಗ್ ಬಳಕೆದಾರರಿಗೂ ಈ ನಿಯಮಗಳು ಸಾಕಷ್ಟು ಅನುಕೂಲವಾಗಲಿವೆ. ಯಾವುದೇ ಹಣಕಾಸು ಉತ್ಪನ್ನವನ್ನು ಖರೀದಿಸುವ ಮೊದಲು ಅದರ ಎಲ್ಲಾ ಷರತ್ತುಗಳು, ಶುಲ್ಕಗಳು ಮತ್ತು ರದ್ದತಿ ನಿಯಮಗಳನ್ನು ಸ್ಪಷ್ಟವಾಗಿ ತೋರಿಸುವುದು ಬ್ಯಾಂಕುಗಳಿಗೆ ಕಡ್ಡಾಯವಾಗಲಿದೆ.

ಒಂದು ಕ್ಲಿಕ್‌ನಲ್ಲಿ ಉತ್ಪನ್ನ ಖರೀದಿಸಲು ಅವಕಾಶ ನೀಡಿದರೆ, ಅದೇ ರೀತಿ ಸುಲಭವಾಗಿ ಅದನ್ನು ರದ್ದುಪಡಿಸುವ ಅಥವಾ ಸೇವೆಯಿಂದ ಹೊರಬರುವ ವ್ಯವಸ್ಥೆಯನ್ನೂ ಕಲ್ಪಿಸಬೇಕು ಎಂದು ಆರ್‌ಬಿಐ ಸೂಚಿಸಿದೆ.

ಇದರಿಂದ ಗ್ರಾಹಕರು ತಿಳಿಯದೇ ಯಾವುದೇ ಸೇವೆಗೆ ಸಿಲುಕುವ ಸಾಧ್ಯತೆ ಕಡಿಮೆಯಾಗಲಿದ್ದು, ಡಿಜಿಟಲ್ ವಂಚನೆಗೂ ತಡೆ ಬೀಳಲಿದೆ.

ಹೊಸ ನಿಯಮಗಳು ಜಾರಿಗೆ ಬರಲು ಇನ್ನೂ ಕೆಲವು ತಿಂಗಳುಗಳಿದ್ದರೂ, ಗ್ರಾಹಕರು ಈಗಿನಿಂದಲೇ ತಮ್ಮ ಬ್ಯಾಂಕ್ ಖಾತೆಗಳು, ಸಾಲದ ದಾಖಲೆಗಳು, ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್‌ಗಳು ಹಾಗೂ ಮಾಸಿಕ ಕಡಿತಗಳನ್ನು ಪರಿಶೀಲಿಸುವುದು ಉತ್ತಮ.

ತಮ್ಮ ಅನುಮತಿಯಿಲ್ಲದೆ ಯಾವುದೇ ವಿಮೆ, ಸೇವಾ ಶುಲ್ಕ ಅಥವಾ ಇತರ ಹಣಕಾಸು ಉತ್ಪನ್ನಗಳ ಹಣ ಕಡಿತವಾಗುತ್ತಿದ್ದರೆ ತಕ್ಷಣ ಬ್ಯಾಂಕ್‌ಗೆ ದೂರು ಸಲ್ಲಿಸಬೇಕು.

ಸಮಸ್ಯೆ ಬಗೆಹರಿಯದಿದ್ದರೆ ಆರ್‌ಬಿಐ ಒಂಬುಡ್ಸ್‌ಮನ್‌ಗೆ ದೂರು ನೀಡುವ ಅವಕಾಶವೂ ಲಭ್ಯವಿದೆ. ಒಟ್ಟಾರೆ, ಆರ್‌ಬಿಐ ಹೊಸ ಮಾರ್ಗಸೂಚಿಗಳು ಬ್ಯಾಂಕಿಂಗ್

ಕ್ಷೇತ್ರದಲ್ಲಿ ಪಾರದರ್ಶಕತೆ ಹೆಚ್ಚಿಸುವುದರ ಜೊತೆಗೆ ಗ್ರಾಹಕರ ಹಕ್ಕುಗಳನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ ಪರಿಣಮಿಸಲಿವೆ.

ಇದನ್ನು ಓದಿ : https://vijayatimes.com/brazil-wons-fifa-world-cup/

Tags: BankingDigital Bankingrbi

Related News

ತಾಲೂಕು ಆಸ್ಪತ್ರೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಸೂಚನೆ: ಆರೋಗ್ಯ ಸೇವೆ ಬಲಪಡಿಸಲು ಸಚಿವ ಯು.ಟಿ. ಖಾದರ್ ಮಹತ್ವದ ಘೋಷಣೆ
ಪ್ರಮುಖ ಸುದ್ದಿ

ತಾಲೂಕು ಆಸ್ಪತ್ರೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಸೂಚನೆ: ಆರೋಗ್ಯ ಸೇವೆ ಬಲಪಡಿಸಲು ಸಚಿವ ಯು.ಟಿ. ಖಾದರ್ ಮಹತ್ವದ ಘೋಷಣೆ

July 22, 2026
ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ: ಹೈಕಮಾಂಡ್ ತೀರ್ಮಾನಕ್ಕಾಗಿ ಕಾಯುತ್ತಿರುವ ರಾಜ್ಯ ಕಾಂಗ್ರೆಸ್
ಪ್ರಮುಖ ಸುದ್ದಿ

ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ: ಹೈಕಮಾಂಡ್ ತೀರ್ಮಾನಕ್ಕಾಗಿ ಕಾಯುತ್ತಿರುವ ರಾಜ್ಯ ಕಾಂಗ್ರೆಸ್

July 22, 2026
ಒಮ್ಮೆ ನಿರ್ಧಾರ ಮಾಡಿದರೆ ಜಾರಿ ಖಚಿತ : ಶರಾವತಿ ಯೋಜನೆ ಕುರಿತು ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ
ಪ್ರಮುಖ ಸುದ್ದಿ

ಒಮ್ಮೆ ನಿರ್ಧಾರ ಮಾಡಿದರೆ ಜಾರಿ ಖಚಿತ : ಶರಾವತಿ ಯೋಜನೆ ಕುರಿತು ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ

July 21, 2026
ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲದು: ಇಂದು ಕೂಡ ‘ಚಲೋ ಸಂಸದ್’ ಮುಂದುವರಿಕೆ ಎಂದ ಅಭಿಜಿತ್ ದೀಪ್ಕೆ
ದೇಶ-ವಿದೇಶ

ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲದು: ಇಂದು ಕೂಡ ‘ಚಲೋ ಸಂಸದ್’ ಮುಂದುವರಿಕೆ ಎಂದ ಅಭಿಜಿತ್ ದೀಪ್ಕೆ

July 21, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.