- ಪಂಜಾಬ್ ಕಿಂಗ್ಸ್ ವಿರುದ್ಧ ಸೋತ ಆರ್ಸಿಬಿ
- ಪಂಜಾಬ್ಗೆ ಐದು ವಿಕೆಟ್‌ಗಳ ಭರ್ಜರಿ ಗೆಲುವು (RCB hat trick defeat at home)
- ಆರ್ಸಿಬಿ ಪರ ಟಿಮ್ ಡೇವಿಡ್ ಅಮೋಘ ಆಟ
ಬೆಂಗಳೂರಿನ ಎಂ.ಚಿನ್ನಸ್ವಾಮಿ (M. Chinnaswamy of Bangalore) ಮೈದಾನದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಆರ್ಸಿಬಿ ಮತ್ತೊಂದು ಮುಖಭಂಗ ಎದುರಿಸಿದೆ. ತವರು ಮೈದಾನದಲ್ಲಿ ಸತತ ಮೂರನೇ ಬಾರಿಗೆ ಸೋಲುವ (Time to lose) ಮೂಲಕ ಭಾರೀ ನಿರಾಸೆ ಮೂಡಿಸಿದೆ.ಎದುರಾಳಿ ಪಂಜಾಬ್ ಕಿಂಗ್ಸ್, ಆರ್ಸಿಬಿ ವಿರುದ್ಧ (RCB) ಐದು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಸಂಜೆ ವೇಳೆ ಮಳೆ ಸುರಿದ ಪರಿಣಾಮ, 14 ಓವರ್ಗಳಿಗೆ (14 overs) ಪಂದ್ಯವನ್ನು ಸೀಮಿತ ಮಾಡಲಾಗಿತ್ತು.
ಟಾಸ್ ಸೋತು ಬ್ಯಾಟ್ ಮಾಡಿದ ರಜತ್ ಪಡೆ, 9 ವಿಕೆಟ್ ಕಳೆದುಕೊಂಡು 95 ರನ್ಗಳಿಸಿತ್ತು. ಟಿಮ್ ಡೆವೀಡ್ ಆರ್ಸಿಬಿ ಸ್ಕೋರ್ (RCB score) ಹೆಚ್ಚಿಸುವಲ್ಲಿ ಅಮೋಘ ಕೊಡುಗೆ ನೀಡಿದರು. 26 ಬಾಲ್ನಲ್ಲಿ (26 balls) ಮೂರು ಸಿಕ್ಸರ್, ಐದು ಬೌಂಡರಿ ಜೊತೆ 50 ರನ್ ಗಳಿಸಿದರು.
96 ರನ್ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಇನ್ನೂ 11 ಎಸೆತ ಬಾಕಿ ಇರುವಂತೆಯೇ 5 ವಿಕೆಟ್‌ಗಳ ಭರ್ಜರಿ ಸಾಧಿಸಿದೆ. ಪಂಜಾಬ್ ಕಿಂಗ್ಸ್ (Punjab Kings) ಪರ ವಧೇರಾ 19 ಬಾಲ್ನಲ್ಲಿ 33 ರನ್ಗಳಿಸಿದರು. ಆರ್ಸಿಬಿ ಪರ ಹೇಜಲ್ವುಡ್ ಅದ್ಭುತ ಬೌಲಿಂಗ್ ದಾಳಿ (Bowling attack) ನಡೆಸಿದರು.

ಮೂರು ಓವರ್ನಲ್ಲಿ ಕೇವಲ 13 ರನ್ ನೀಡಿ ಮೂರು ವಿಕೆಟ್ (Three wickets) ಪಡೆದರು. ಭುವಿ 26 ರನ್ ನೀಡಿ ಎರಡು ವಿಕೆಟ್ ಪಡೆದರೂ, ಗೆಲುವು ಆರ್ಸಿಬಿಗೆ ಸಿಗಲಿಲ್ಲ. ಆ ಮೂಲಕ 18ನೇ ಆವೃತ್ತಿಯಲ್ಲಿ ಆಡಿದ ಮೂರು ಪಂದ್ಯಗಳನ್ನೂ ಆರ್ಸಿಬಿ ಸೋತಿದೆ (RCB lost) . ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟನ್ಸ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ ಆರ್ಸಿಬಿ ಸೋಲನ್ನು ಕಂಡಿದೆ.
ಮುಖ್ಯವಾಗಿ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ (Virat Kohli) ಅವರ ಆರಂಭಿಕ ವೈಫಲ್ಯ ತಂಡವನ್ನು ಸೋಲಿನ ಸುಳಿಗೆ ಸಿಲುಕಿತ್ತು. ಕೊಹ್ಲಿ ಈ ಹಿಂದಿನಂತೆ ನಿಧಾನಗತಿಯ ಬ್ಯಾಟಿಂಗ್ (Batting) ನಡೆಸಿದ್ದರೆ ಪಂದ್ಯದ ಫಲಿಯಾಂಶ ಬೇರೆಯಾಗುವ ಸಾಧ್ಯತೆ ಇತ್ತು. ಸತತವಾಗಿ ವಿಕೆಟ್ ಗಳನ್ನು ಕಳೆದುಕೊಳ್ಳಿತ್ತಾ ಸಾಗಿದ್ದ ಆರ್ಸಿಬಿ, ಕನಿಷ್ಠ ಮೊತ್ತಕ್ಕೆ ಆಲೌಟ್ (Allout) ಆಗುವ ಆತಂಕ ಎದುರಾಗಿತ್ತು. ಆದರೆ ಕೊನೆಯಲ್ಲಿ ಟೀಮ್ ಡೇವಿಡ್ ಸ್ಫೋಟಕ ಬ್ಯಾಟಿಂಗ್ ಕಾರಣದಿಂದ ತಂಡ ಸವಾಲಿನ ಗುರಿ ನೀಡಿತ್ತು.
ಇದನ್ನೂ ಓದಿ: http://ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ED ಚಾರ್ಜ್ಶೀಟ್ ಸಲ್ಲಿಕೆ
ಆರ್ಸಿಬಿ ಇನ್ನು 20 ರನ್ ಹೆಚ್ಚುವರಿಯಾಗಿ ಗಳಿಸಿದ್ದರೆ, ಗೆಲುವಿಗೆ ಅನುಕೂಲವಾಗುತ್ತಿತ್ತು. ಇನ್ನು ಆರ್ಸಿಬಿ ತವರಿನಲ್ಲಿ ಸೋಲು ಕಂಡಿದ್ದರು, ನಾಳೆ (RCB hat trick defeat at home) ಭಾನುವಾರ ಇದೇ ತಂಡದ ವಿರುದ್ಧ ಪಂಜಾಬ್ ತವರಾದ ಚಂಡೀಗಢದಲ್ಲಿ ಚೆನ್ನಾಗಿ ಆಡಿ ಸೇಡು ತೀರಿಸಿಕೊಳ್ಳುವ ಅವಕಾಶವಿದೆ.