17 ಸಾವಿರ ಕೋಟಿಗೆ ಆರ್‌ಸಿಬಿ ಮಾರಾಟ – ಹೊಸ ಮಾಲೀಕರ (rcb sold new record in ipl) ಕೈಗೆ ಬೆಂಗಳೂರು ತಂಡ
ಐಪಿಎಲ್ ಇತಿಹಾಸದಲ್ಲಿ ದೊಡ್ಡ ಡೀಲ್ – ಆರ್‌ಸಿಬಿ ಫ್ರಾಂಚೈಸಿ ಸೇಲ್
ಡಿಯಾಜಿಯೊದಿಂದ ಹೂಡಿಕೆದಾರರ ಗುಂಪಿಗೆ ತಂಡ ವರ್ಗಾವಣೆ
ಆದಿತ್ಯ ಬಿರ್ಲಾ ಸೇರಿದಂತೆ ದೊಡ್ಡ ಹೂಡಿಕೆದಾರರ ಒಕ್ಕೂಟದಿಂದ ಆರ್‌ಸಿಬಿ ಖರೀದಿ
Bengaluru: ಐಪಿಎಲ್ ಕ್ರಿಕೆಟ್ ಲೋಕದಲ್ಲಿ ದೊಡ್ಡ ಸುದ್ದಿಯೊಂದು (rcb sold new record in ipl) ಹೊರಬಿದ್ದಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಭಾರೀ ಮೊತ್ತಕ್ಕೆ ಮಾರಾಟವಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಐಪಿಎಲ್ 2025ರ ಚಾಂಪಿಯನ್ ಆಗಿದ್ದ ಆರ್‌ಸಿಬಿ ತಂಡವನ್ನು ಸುಮಾರು 1.78 ಬಿಲಿಯನ್ ಡಾಲರ್ (ಸುಮಾರು 16,700 ಕೋಟಿ ರೂ.) ಮೊತ್ತಕ್ಕೆ ಹೂಡಿಕೆದಾರರ ಒಕ್ಕೂಟ ಖರೀದಿಸುತ್ತಿದೆ ಎಂದು ವರದಿಯಾಗಿದೆ.

ಈ ಮೊತ್ತ ಐಪಿಎಲ್ ಇತಿಹಾಸದಲ್ಲೇ ದೊಡ್ಡ ವ್ಯವಹಾರಗಳಲ್ಲಿ ಒಂದಾಗಿದೆ (rcb sold new record in ipl) ಎಂದು ಹೇಳಲಾಗುತ್ತಿದೆ.
ಅಧಿಕೃತ ಘೋಷಣೆ ಮಾತ್ರ ಬಾಕಿಯಿದ್ದು, ಶೀಘ್ರದಲ್ಲೇ ಹೊಸ ಮಾಲೀಕತ್ವದ ಬಗ್ಗೆ ಸ್ಪಷ್ಟನೆ ಸಿಗುವ ನಿರೀಕ್ಷೆಯಿದೆ.
ಪ್ರಸ್ತುತ ಆರ್‌ಸಿಬಿ ಫ್ರಾಂಚೈಸಿಯ ಮಾಲೀಕತ್ವ ಡಿಯಾಜಿಯೊ ಸಂಸ್ಥೆಯ ಬಳಿ ಇದ್ದು, ಯುನೈಟೆಡ್ ಸ್ಪಿರಿಟ್ಸ್ ಮೂಲಕ ಈ ತಂಡವನ್ನು ನಿರ್ವಹಿಸಲಾಗುತ್ತಿತ್ತು.
ಈಗ ಪ್ರಮುಖ ಹೂಡಿಕೆದಾರರ ಗುಂಪಾದ ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್ (Times of India Group) , ಬೋಲ್ಟ್ ವೆಂಚರ್ಸ್ ಮತ್ತು
ಅಮೆರಿಕದ ಖಾಸಗಿ ಇಕ್ವಿಟಿ ಕಂಪನಿ ಬ್ಲ್ಯಾಕ್‌ಸ್ಟೋನ್ ಸೇರಿ ಈ ತಂಡವನ್ನು ಜಂಟಿಯಾಗಿ ಖರೀದಿಸುತ್ತಿವೆ ಎಂದು ತಿಳಿದುಬಂದಿದೆ.
ಈ ಹೊಸ ಒಕ್ಕೂಟದಲ್ಲಿ ಆದಿತ್ಯ ಬಿರ್ಲಾ ಗ್ರೂಪ್‌ನ ಆರ್ಯಮನ್ ವಿಕ್ರಮ್ ಬಿರ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದು, ಟೈಮ್ಸ್ ಗ್ರೂಪ್‌ನ ಸತ್ಯನ್ ಗಜ್ವಾನಿ ಉಪಾಧ್ಯಕ್ಷರಾಗಲಿದ್ದಾರೆ ಎಂದು ಹೇಳಲಾಗಿದೆ.
ಹೊಸ ಮಾಲೀಕತ್ವವು ತಕ್ಷಣದಿಂದ ಜಾರಿಗೆ ಬರುವುದಿಲ್ಲ. 2026ರ ಐಪಿಎಲ್‌ನ 19ನೇ ಆವೃತ್ತಿ ಮುಗಿದ ನಂತರ ಹೊಸ ಮಾಲೀಕತ್ವ ಅಧಿಕೃತವಾಗಿ ಜಾರಿಗೆ ಬರಲಿದೆ.
ಅದುವರೆಗೆ ಡಿಯಾಜಿಯೊ ಸಂಸ್ಥೆಯೇ ತಂಡದ ನಿರ್ವಹಣೆಯನ್ನು ಮುಂದುವರಿಸಲಿದೆ. ಈ ನಡುವೆ ತಂಡದ ಆಡಳಿತ, ಆಟಗಾರರ ಆಯ್ಕೆ ಮತ್ತು ಇತರ ನಿರ್ವಹಣಾ ಕೆಲಸಗಳು
ಹಿಂದಿನಂತೆಯೇ ನಡೆಯಲಿವೆ ಎಂದು ಮೂಲಗಳು ತಿಳಿಸಿವೆ. ಹೊಸ ಮಾಲೀಕರು ತಂಡದ ಬ್ರ್ಯಾಂಡ್ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಆರ್‌ಸಿಬಿ ಮಾರಾಟಕ್ಕೆ ಕಾರಣಗಳ ಬಗ್ಗೆ ಹಲವು ಊಹಾಪೋಹಗಳು ಕೇಳಿಬರುತ್ತಿವೆ. ಐಪಿಎಲ್ 2025ರಲ್ಲಿ ಆರ್‌ಸಿಬಿ ಚಾಂಪಿಯನ್ ಆದ ನಂತರ ನಡೆದ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣ ಹೂಡಿಕೆದಾರರಲ್ಲಿ ಆತಂಕ ಮೂಡಿಸಿತ್ತು ಎಂದು ಹೇಳಲಾಗುತ್ತಿದೆ.
ಜೊತೆಗೆ ತಂಡದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಭವಿಷ್ಯದಲ್ಲಿ ಐಪಿಎಲ್‌ಗೆ ನಿವೃತ್ತಿ ಘೋಷಿಸುವ ಸಾಧ್ಯತೆ ಇರುವುದರಿಂದ ತಂಡದ ಬ್ರ್ಯಾಂಡ್ ಮೌಲ್ಯ ಕುಸಿಯುವ
ಭಯವೂ ಇದ್ದುದಾಗಿ ವರದಿಯಾಗಿದೆ. ಈ ಎಲ್ಲ ಕಾರಣಗಳಿಂದ ಯುನೈಟೆಡ್ ಸ್ಪಿರಿಟ್ಸ್ ಸಂಸ್ಥೆ ತಂಡವನ್ನು ಮಾರಾಟ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಆರ್‌ಸಿಬಿ ತಂಡದ ಮಾಲೀಕತ್ವದ ಇತಿಹಾಸ ನೋಡಿದರೆ, 2008ರಲ್ಲಿ ವಿಜಯ್ ಮಲ್ಯ ಅವರ ಯುನೈಟೆಡ್ ಸ್ಪಿರಿಟ್ಸ್ (United Spirits) ಕಂಪನಿ ಸುಮಾರು 111.6 ಮಿಲಿಯನ್ ಡಾಲರ್ ನೀಡಿ ತಂಡವನ್ನು ಖರೀದಿಸಿತ್ತು.
ನಂತರ ಕಿಂಗ್‌ಫಿಶರ್ ಏರ್‌ಲೈನ್ಸ್ (Kingfisher Airline) ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಹಿನ್ನೆಲೆ ಯುನೈಟೆಡ್ ಸ್ಪಿರಿಟ್ಸ್ ಕಂಪನಿಯನ್ನು ಡಿಯಾಜಿಯೊ ಸ್ವಾಧೀನಪಡಿಸಿಕೊಂಡಿತು.
ಆ ಸಮಯದಿಂದ ಆರ್‌ಸಿಬಿ ಮಾಲೀಕತ್ವ ಡಿಯಾಜಿಯೊ ಸಂಸ್ಥೆಗೆ ಹೋಗಿತ್ತು. ಇದೀಗ ಹಲವು ವರ್ಷಗಳ ಬಳಿಕ ಮತ್ತೆ ತಂಡದ ಮಾಲೀಕತ್ವ ಬದಲಾಗುತ್ತಿದ್ದು, ಇದು ಐಪಿಎಲ್ ಇತಿಹಾಸದಲ್ಲೇ ದೊಡ್ಡ ವ್ಯವಹಾರಗಳಲ್ಲಿ ಒಂದಾಗಿ ಗಮನ ಸೆಳೆಯುತ್ತಿದೆ.
ಇದನ್ನು ಓದಿ : https://vijayatimes.com/maruti-new-micro-suv/