ಶರಣ್-ಚಿಕ್ಕಣ್ಣ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದ ಜನಪ್ರಿಯ ಚಿತ್ರ ‘ಅಧ್ಯಕ್ಷ’. ಅಧ್ಯಕ್ಷ ಚಿತ್ರದಲ್ಲಿ ಚಿ.ತು.ಸಂಘ ಎಂಬ ಸಂಘಟನೆ ಯ ಬಗ್ಗೆ ಪ್ರಸ್ತಾಪವಿತ್ತು. ಚಿ ತು ಎನ್ನುವುದರ ಪೂರ್ಣ ರೂಪ ‘ಚಿಂತೆ ಇಲ್ಲದ ತುಂಡ್ ಹೈಕ್ಳ ಸಂಘ’. ಅದರ ಸಂಕ್ಷಿಪ್ತ ರೂಪವೇ ಈ ಸಿನಿಮಾದ ಹೆಸರು.
ನಾಯಕನಾಗಿ ನಟಿಸಿರುವ ಚೇತನ್ ಕುಮಾರ್ ಈ ಚಿತ್ರ ನಿರ್ದೇಶನ ಕೂಡ ಮಾಡಿದ್ದಾರೆ. ಹೊಸ ಹುಡುಗಿ ರೂಪ ‘ಚಿ.ತು.ಸಂಘ’ದ ನಾಯಕಿ.ಈ ಚಿತ್ರ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿಯು/ಎ ಪ್ರಮಾಣ ಪತ್ರ ನೀಡಿದೆ. ಶಿವಣ್ಣ ನಂದಿಹಳ್ಳಿ, ಲಕ್ಷ್ಮೀಕಾಂತಯ್ಯ ಮತ್ತು ಪಾರ್ವತಿ ಹೊಳೆನರಸೀಪುರ ನಿರ್ಮಿಸಿರುವ ಈ ಚಿತ್ರದ ಹಾಡುಗಳು ಇತ್ತೀಚೆಗೆ ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿ ಜನಪ್ರಿಯವಾಗಿದೆ. ಜೈ ತುಳುನಾಡ್ ಸಿನಿಮಾ ವನ್ನು ನಿರ್ಮಿಸಿದ್ದ ನಿರ್ಮಾಪಕ ಎನ್.ಜಿ.ಶಿವಣ್ಣ ಇದೀಗ ಚಿಕ್ಕನಾಯಕನಹಳ್ಳಿಯ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಸಿನಿಮಾಕ್ಕೆ ರವೀಶ್ ಸಂಗೀತ ನಿರ್ದೇಶಕ ರಾಗಿದ್ದು, ಸಾಹಿತ್ಯ ಅಪ್ಪು ವರ್ಧನ್ ಬರೆದಿದ್ದಾರೆ. ಒಟ್ಟಿಗೆ ಈ ಸಿನಿಮಾದಲ್ಲಿ 4 ಹಾಡುಗಳಿವೆ. ಹಳ್ಳಿ ಹುಡುಗರ ರೀತಿ ತರಲೆ ಮಾಡುವ ಪಾತ್ರದಲ್ಲಿ ಸ್ನೇಹಿತನಾಗಿ ಯುವನಟ ಪೃಥ್ವಿ ನಟಿಸಿದ್ದಾರಂತೆ. ನಾಯಕಿಯ ಮಾವನಾಗಿ, ಕುಂಟನಾಗಿ ಹೀರೋಗೆ ವಿರೋಧಿಯಾಗಿ ಯುವ ನಟ ಗೌತಮ ನಟಿಸಿರುವುದಾಗಿ ತಿಳಿದು ಬಂದಿದೆ. ನಾಯಕಿಯ ಪಾತ್ರ ರಫ್ ಆಂಡ್ ಟಫ್ ಆಗಿದ್ದು ನಾಯಕನಿಗೆ ಬೈಯೋದೆ ತಮ್ಮ ಕ್ಯಾರೆಕ್ಟರ್ ಎಂದು ರೂಪಾ ಈ ಹಿಂದೆಯೇ ಹೇಳಿಕೊಂಡಿದ್ದಾರೆ. ಪೋಷಕ ಕಲಾವಿದರಾಗಿ ರತ್ನ ಚಂದನಾ, ಬಬಿತಾ, ಚಿತ್ರದ ಸಹ ನಿರ್ಮಾಪಕಿ ಪಾರ್ವತಿ, ಸತೀಶ್ ಗೌಡ ಅಭಿನಯಿಸಿದ್ದಾರೆ.