ಮದ್ಯಪಾನ ಮಾಡುವುದರಿಂದ ಮಾತ್ರ ಲಿವರ್ (reasons for fatty liver) ಕಾಯಿಲೆ ಬರುತ್ತದೆ ಎಂಬುದು ತಪ್ಪು ಕಲ್ಪನೆ.
ಮದ್ಯ ಪಾನದ ಹವ್ಯಾಸ ಇಲ್ಲದವರಲ್ಲೂ ಫ್ಯಾಟಿ ಲಿವರ್ (Fatty Liver) ಸೇರಿದಂತೆ ಗಂಭೀರ ಯಕೃತ್ತಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅನಾರೋಗ್ಯಕರ ಆಹಾರ ಪದ್ಧತಿ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಮಧುಮೇಹದಂತಹ ಆರೋಗ್ಯ ಸಮಸ್ಯೆಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ.

ಫ್ಯಾಟಿ ಲಿವರ್‌ಗೆ ಕಾರಣಗಳೇನು?
ದೇಹದಲ್ಲಿ ವಿಶೇಷವಾಗಿ ಯಕೃತ್‌ನಲ್ಲಿ, ಹೆಚ್ಚುವರಿ ಕೊಬ್ಬು ಸಂಗ್ರಹವಾಗುವುದನ್ನು ಫ್ಯಾಟಿ ಲಿವರ್ ಎಂದು ಕರೆಯಲಾಗುತ್ತದೆ. ಅತಿಯಾದ ತೂಕ, ಹೊಟ್ಟೆಯ ಸುತ್ತ ಕೊಬ್ಬು
ಶೇಖರಣೆಯಾಗುವುದು, ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವುದು ಮತ್ತು ಕೊಲೆಸ್ಟ್ರಾಲ್ (Cholesterol) ಸಮಸ್ಯೆಗಳು ಈ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.

ಆಹಾರ ಪದ್ಧತಿಯೂ ಕಾರಣ
ಅತಿಯಾದ ಸಕ್ಕರೆ, ಸಿಹಿ ಪಾನೀಯಗಳು, ಸಂಸ್ಕರಿಸಿದ ಆಹಾರ ಮತ್ತು ಹೆಚ್ಚಿನ ಕ್ಯಾಲೊರಿ ಹೊಂದಿರುವ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಲಿವರ್‌ನಲ್ಲಿ
ಕೊಬ್ಬು ಸಂಗ್ರಹವಾಗಬಹುದು. ದೀರ್ಘಕಾಲ ಒಂದೇ ಕಡೆ ಕುಳಿತು ಕೆಲಸ ಮಾಡುವುದು ಹಾಗೂ ವ್ಯಾಯಾಮದ ಕೊರತೆಯೂ ಈ ಸಮಸ್ಯೆಗೆ ಕಾರಣವಾಗಬಹುದು.
ಕೆಲ ರೋಗಗಳೂ ಕಾರಣ ಆಗ್ತವೆ
ಹೆಪಟೈಟಿಸ್ (Hepatitis) ಬಿ ಮತ್ತು ಸಿ ವೈರಸ್ ಸೋಂಕುಗಳು, ಕೆಲವು ಔಷಧಿಗಳ (reasons for fatty liver) ಅಡ್ಡಪರಿಣಾಮಗಳು, ಅನುವಂಶಿಕ ಸಮಸ್ಯೆಗಳು ಹಾಗೂ ಇತರ ಆರೋಗ್ಯ ಪರಿಸ್ಥಿತಿಗಳಿಂದಲೂ ಲಿವರ್ ಹಾನಿಯಾಗಬಹುದು.
ಸಮಸ್ಯೆ ಮುಂದುವರಿದರೆ ಉರಿಯೂತ, ಲಿವರ್‌ನಲ್ಲಿ ಗೆಡ್ಡೆಗಳು ಬೆಳೆಯೋದು ಮತ್ತು ಸಿರಿಯೋಸಿಸ್‌ನಂತಹ ಗಂಭೀರ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಲಿವರ್ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ಸಮತೋಲಿತ ಆಹಾರ ಸೇವಿಸಿ, ಸಕ್ಕರೆ ಮತ್ತು ಸಂಸ್ಕರಿತ ಆಹಾರಗಳ ಪ್ರಮಾಣ ಕಡಿಮೆ ಮಾಡಿ.
ಪ್ರತಿದಿನ ದೈಹಿಕ ಚಟುವಟಿಕೆ ಹಾಗೂ ನಿಯಮಿತ ವ್ಯಾಯಾಮಕ್ಕೆ ಸಮಯ ಮೀಸಲಿಡಿ.
ದೇಹದ ತೂಕ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡಿ.
ವೈದ್ಯರ ಸಲಹೆಯಿಲ್ಲದೆ ಔಷಧಿ ಅಥವಾ ಗಿಡಮೂಲಿಕೆ ಆಧಾರಿತ ಪೂರಕಗಳನ್ನು ಬಳಸಬೇಡಿ.
ಅಗತ್ಯವಿದ್ದರೆ ವೈದ್ಯರ ಸಲಹೆಯಂತೆ ಲಿವರ್ ಪರೀಕ್ಷೆ ಮಾಡಿಸಿಕೊಳ್ಳಿ.
ಆರಂಭದಲ್ಲಿ ಲಿವರ್ ಕಾಯಿಲೆಯ ಯಾವುದೇ ಸ್ಪಷ್ಟ ಲಕ್ಷಣಗಳು ಕಾಣಿಸಿಕೊಳ್ಳದೇ ಇರಬಹುದು. ಆದ್ದರಿಂದ ಮದ್ಯಪಾನ ಮಾಡುವುದಿಲ್ಲ ಎಂಬ ಕಾರಣಕ್ಕೆ ಲಿವರ್ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
ಸೂಕ್ತ ಜೀವನಶೈಲಿ ಮತ್ತು ಸಮಯೋಚಿತ ವೈದ್ಯಕೀಯ ತಪಾಸಣೆ ಲಿವರ್ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.
ಇದನ್ನು ಓದಿ : https://vijayatimes.com/brown-eggs-vs-white-eggs/