ಅಮರಾವತಿ, ಮೇ. 15: ದೇಶದ್ರೋಹ ಪ್ರಕರಣದಡಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸದ ಕನಮುರಿ ರಘುರಾಂ ಕೃಷ್ಣಂ ರಾಜು ಅವರನ್ನು ಆಂಧ್ರದ ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರ ವಿರುದ್ಧ ಬಂಡಾಯ ಎದ್ದಿರುವ ಕೃಷ್ಣಂ ರಾಜು ಅವರು, ಜಗನ್‌ಮೋಹನ್ ರೆಡ್ಡಿ ಅವರ ಜಾಮೀನು ರದ್ದುಪಡಿಸಬೇಕು ಎಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಆಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಗನ್‌ಮೋಹನ್ ರೆಡ್ಡಿ ಜಾಮೀನು ಪಡೆದಿದ್ದು, ಅವರ ಜಾಮೀನನ್ನು ರದ್ದುಪಡಿಸಬೇಕು. ಮುಖ್ಯಮಂತ್ರಿಗಳು ಜಾಮೀನಿನ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಸಿಬಿಐ ನ್ಯಾಯಾಲಯವನ್ನು ಕೋರಿದ್ದರು. ಈ ಬೆಳವಣಿಗೆಯ ಬೆನ್ನಲೇ ಆಂಧ್ರದ ಸಿಐಡಿ ಪೊಲೀಸರು ರಘುರಾಂ ಕೃಷ್ಣಂ ರಾಜು ವಿರುದ್ಧ ದೇಶದ್ರೋಹ ಪ್ರಕರಣದ ಅಡಿಯಲ್ಲಿ ಬಂಧಿಸಿದ್ದಾರೆ.
Andhra Pradesh CID says "In preliminary enquiry, it was found that through his speeches, he was indulging in systematic, schematic effort to cause tensions among communities & by attacking various govt dignitaries in a way that'll cause loss of faith in govt which they represent"
— ANI (@ANI) May 15, 2021