Job News 2025 : ಕರ್ನಾಟಕ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (Karnataka National Institute of Technology) ಖಾಲಿ ಇರುವ ಬೋಧಕೇತರ ಹುದ್ದೆಗಳ (Non-teaching posts) ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಸೈಂಟಿಫಿಕ್ ಆಫೀಸರ್ (Scientific Officer), ಸೂಪರಿಂಟೆಂಡಂಟ್ ಇಂಜಿನಿಯರ್ (Superintendent Engineer), ಡೆಪ್ಯೂಟಿ ಲೈಬ್ರರಿಯನ್ (Deputy Librarian), ಡೆಪ್ಯೂಟಿ ರಿಜಿಸ್ಟ್ರಾರ್ (Deputy Registrar), ಮೆಡಿಕಲ್ ಆಫೀಸರ್ (Medical Officer), ಸೇರಿದಂತೆ ವಿವಿಧ ಬೋಧಕೇತರ ಹುದ್ದೆಗಳ ಭರ್ತಿಗೆ ನೇಮಕಾತಿಗೆ ಪ್ರಕಟಣೆ ಹೊರಡಿಸಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಹುದ್ದೆ ಹೆಸರು : ಹುದ್ದೆಗಳ ಸಂಖ್ಯೆ
ಪ್ರಿನ್ಸಿಪಲ್ ಸೈಂಟಿಫಿಕ್ ಆಫೀಸರ್ / ಟೆಕ್ನಿಕಲ್ ಆಫೀಸರ್ : 2
ಅಸಿಸ್ಟಂಟ್ ಲೈಬ್ರಿರಿಯನ್ 1
ಮೆಡಿಕಲ್ ಆಫೀಸರ್ 3
ಎಸ್ಎಎಸ್ ಆಫೀಸರ್ 1
ಡೆಪ್ಯೂಟಿ ರಿಜಿಸ್ಟ್ರಾರ್ 2
ಎಕ್ಸಿಕ್ಯೂಟಿವ್ ಇಂಜಿನಿಯರ್ (ಸಿವಿಲ್) 1
ಪ್ರಿನ್ಸಿಪಲ್ ಎಸ್ಎಎಸ್ ಆಫೀಸರ್ 1
ಸೂಪರಿಂಟೆಂಡಂಟ್ ಇಂಜಿನಿಯರ್ 1
ಡೆಪ್ಯೂಟಿ ಲೈಬ್ರರಿಯನ್ 1
ಅಸಿಸ್ಟಂಟ್ ರಿಜಿಸ್ಟ್ರಾರ್ 5
ಅರ್ಹತೆಗಳು (Qualifications) :
ಹುದ್ದೆಗಳಿಗೆ ಅನುಗುಣವಾಗಿ ಅಂಗೀಕೃತ ವಿವಿಯಿಂದ ಪದವಿ ಪಡೆದಿರಬೇಕು.
ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ 56 ವರ್ಷ ವಯೋಮಿತಿ ಮೀರಿರಬಾರದು.
ಡೆಪ್ಯೂಟಿ ರಿಜಿಸ್ಟ್ರಾರ್ ಮತ್ತು ಲೈಬ್ರರಿಯನ್ ಹುದ್ದೆಗಳಿಗೆ ಗರಿಷ್ಠ 50 ವರ್ಷ ವಯೋಮಿತಿ ಮೀರಿರಬಾರದು.
ಇತರೆ ಹುದ್ದೆಗಳಿಗೆ ಗರಿಷ್ಟ 35 ವರ್ಷ ವಯೋಮಿತಿ ಮೀರಿರಬಾರದು.
ಆಯ್ಕೆ ವಿಧಾನ : ಕಾರ್ಯಾನುಭವ ಮತ್ತು ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಿ, ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ: 08-01-2025
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 17-02-2025
ಅರ್ಜಿಗೆ ಭೇಟಿ ನೀಡಬೇಕಾದ ವೆಬ್ ವಿಳಾಸ : https://recruitment.nitk.ac.in/users/sign_in
ಅರ್ಜಿ ಸಲ್ಲಿಸಬೇಕಾದ ವಿಳಾಸ : The Registrar, National Institute of Technology Karnataka, Surathkal, Mangaluru – 575 025, Karnataka, India.
ಹೆಚ್ಚಿನ ಮಾಹಿತಿಗಾಗಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ವೆಬ್ಸೈಟ್ www.nitk.ac.in ಗೆ ಭೇಟಿ ನೀಡಿ