ಬ್ಯಾಂಕಿಂಗ್(Banking) ವಲಯದಲ್ಲಿ ಕೆಲಸ ಮಾಡಲು ಬಯಸುವವರಿಗೆ ಇದು ಒಳ್ಳೆಯ ಸುದ್ದಿ.(Recruitment in Bank of Maharashtra)
ಬ್ಯಾಂಕ್ ಆಫ್ ಮಹಾರಾಷ್ಟ್ರವು(Bank of Maharashtra) 500 ಜನರಲಿಸ್ಟ್ ಆಫೀಸರ್ (ಸ್ಕೇಲ್ II) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, 2025ರ ಆಗಸ್ಟ್ 30ರವರೆಗೆ ಆನ್‌ಲೈನ್(Online) ಮೂಲಕ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಉದ್ಯೋಗದಲ್ಲಿ(Bank Job) ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ಜಾಲತಾಣ bankofmaharashtra.in ಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ತುಂಬಿ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ
ಒಟ್ಟು 500 ಜನರಲಿಸ್ಟ್ ಆಫೀಸರ್ (ಸ್ಕೇಲ್ II) ಹುದ್ದೆಗಳಿವೆ. ಅಭ್ಯರ್ಥಿಗಳು ಕನಿಷ್ಠ ಪದವಿ ಹೊಂದಿರಬೇಕು ಮತ್ತು ಮೂರು ವರ್ಷಗಳ ಅನುಭವ ಇರಬೇಕು. ವಯೋಮಿತಿ 22ರಿಂದ 35 ವರ್ಷಗಳೊಳಗೆ ಇರಬೇಕು. ಮೀಸಲಾತಿ ವರ್ಗಗಳಿಗೆ ಸರ್ಕಾರಿ ನಿಯಮಾವಳಿಯ ಪ್ರಕಾರ ವಯಸ್ಸಿನಲ್ಲಿ ಸಡಿಲಿಕೆ ನೀಡಲಾಗುತ್ತದೆ.

ಅರ್ಹತಾ ಮಾನದಂಡಗಳು
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ. 60 ಅಂಕಗಳೊಂದಿಗೆ ಪದವಿ ಪಡೆದಿರಬೇಕು. SC/ST/OBC/PwBD ಅಭ್ಯರ್ಥಿಗಳಿಗೆ ಶೇ. 55 ಅಂಕಗಳ ಪಡೆದರೂ ಸಹ ಅರ್ಜಿ ಸಲ್ಲಿಸಬಹುದಾಗಿದೆ.
ವಿಶೇಷ ಅರ್ಹತೆಗಳು: ಚಾರ್ಟರ್ಡ್ ಅಕೌಂಟೆಂಟ್ (CA), CMA, CFA, ICWA, JAIIB ಅಥವಾ CAIIB ಅರ್ಹತೆ ಹೊಂದಿದವರಿಗೆ ಮೊದಲ ಆದ್ಯತೆ.
ಅನುಭವ: ಯಾವುದೇ ಸರ್ಕಾರಿ ಅಥವಾ ಖಾಸಗಿ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಕನಿಷ್ಠ 3 ವರ್ಷಗಳ ಅನುಭವ ಅಗತ್ಯ. ವಿಶೇಷವಾಗಿ ಕ್ರೆಡಿಟ್, ಶಾಖಾ ನಿರ್ವಹಣೆ ಅಥವಾ ನಾಯಕತ್ವದ ಹುದ್ದೆಯ ಅನುಭವ ಹೊಂದಿದವರಿಗೆ ಪ್ರಾಧಾನ್ಯ.
ಅರ್ಜಿಯನ್ನು ಸಲ್ಲಿಸುವ ವಿಧಾನ
- ಮೊದಲನೆಯದಾಗಿ ಬ್ಯಾಂಕ್ ಆಫ್ ಮಹಾರಾಷ್ಟ್ರದ ಅಧಿಕೃತ ವೆಬ್‌ಸೈಟ್ bankofmaharashtra.in ಗೆ ಹೋಗಿ.
- ಅಲ್ಲಿ Recruitment ಎಂಬ ವಿಭಾಗದಲ್ಲಿ Generalist Officer ಎಂದು ಬರೆದಿರುವ Scale II – Project 2025-26 ಎಂಬ ಲಿಂಕ್ ಕ್ಲಿಕ್ ಮಾಡಬೇಕು
- ನಂತರದಲ್ಲಿ “New Registration” ಆಯ್ಕೆ ಮಾಡಿ ಮೂಲ ಮಾಹಿತಿಯನ್ನು ನಮೂದಿಸಬೇಕು.
- ಅಗತ್ಯ ದಾಖಲೆಗಳು, ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ.
- ಫಾರ್ಮ್ ಅನ್ನು ಸಲ್ಲಿಸಿ, ಪ್ರತಿಯನ್ನು ಭದ್ರಪಡಿಸಿ.
ಅರ್ಜಿ ಶುಲ್ಕ
ಸಾಮಾನ್ಯ, EWS ಮತ್ತು OBC ಅಭ್ಯರ್ಥಿಗಳಿಗೆ ₹1,180
SC/ST/PwBD ಅಭ್ಯರ್ಥಿಗಳಿಗೆ ₹118 ರೂಪಾಯಿ
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಗುಂಪು ಚರ್ಚೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯು ಪ್ರಾಥಮಿಕ ಹಂತವಾಗಿದ್ದು, ನಂತರ ಯಶಸ್ವಿಯಾದವರಿಗೆ ಚರ್ಚೆ ಮತ್ತು ಸಂದರ್ಶನ ಹಂತಗಳು ಇರುತ್ತವೆ.
ವೇತನ ಮತ್ತು ಸೌಲಭ್ಯಗಳು
ಆಯ್ಕೆಯಾದ ಅಭ್ಯರ್ಥಿಗಳಿಗೆ ₹64,820 ರಿಂದ ₹93,960 ಮೂಲ ವೇತನ ನೀಡಲಾಗುತ್ತದೆ. ಜೊತೆಗೆ ಮಹಂಗಾಯಿ ಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA), ನಗರ ಪರಿಹಾರ ಭತ್ಯೆ (CCA) ಮತ್ತು ವೈದ್ಯಕೀಯ ಸೌಲಭ್ಯಗಳು ದೊರೆಯುತ್ತವೆ.
ಇದನ್ನು ಓದಿ : ಉದ್ಯೋಗ ಹುಡುಕುತ್ತಿರುವ ಪದವೀಧರರಿಗೆ ಸಿಹಿ ಸುದ್ದಿ: ರಾಜ್ಯದ 11 ಬ್ಯಾಂಕ್‌ಗಳಲ್ಲಿ 1,170 ಹುದ್ದೆಗಳಿಗೆ ನೇಮಕಾತಿ, ಕೂಡಲೆ ಅರ್ಜಿ ಸಲ್ಲಿಸಿ
ಮುಖ್ಯ ದಿನಾಂಕಗಳು
ಅರ್ಜಿ ಪ್ರಾರಂಭ: ಆಗಸ್ಟ್ 13, 2025
ಅರ್ಜಿ ಕೊನೆಯ ದಿನ: ಆಗಸ್ಟ್ 30, 2025 (Recruitment in Bank of Maharashtra)