New Delhi : ರೈಲ್ವೇ ಇಲಾಖೆಯಲ್ಲಿ ಉದ್ಯೋಗ ಪಡೆಯಲು (Recruitment in Railway department) ಬಯಸುವ ಅಭ್ಯರ್ಥಿಗಳಿಗೆ ಸಿಹಿಸುದ್ದಿ.
ರೈಲ್ವೆ ನೇಮಕಾತಿ ಮಂಡಳಿ (RRB) ನಾನ್-ಟೆಕ್ನಿಕಲ್ ಪಾಪ್ಯುಲರ್ ಕೆಟಗರೀಸ್ (NTPC – ಅಂಡರ್ ಗ್ರಾಜುಯೇಟ್) ವಿಭಾಗದಡಿ ಒಟ್ಟು 1,688 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಯಾವೆಲ್ಲ ಹುದ್ದೆಗಳು ಲಭ್ಯ?
ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ (Commercial-cum-Ticket Clerk) – 700 ಹುದ್ದೆಗಳು
ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ (Accounts Clerk-cum-Typist) – 200 ಹುದ್ದೆಗಳು
ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ (Junior Clerk-cum-Typist) – 600 ಹುದ್ದೆಗಳು
ಟ್ರೈನ್ಸ್ ಕ್ಲರ್ಕ್ (Trains Clerk) – 188 ಹುದ್ದೆಗಳು
ವಿದ್ಯಾರ್ಹತೆ ಮತ್ತು ವಯೋಮಿತಿ
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿ (Recruitment in Railway department) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಸಾಮಾನ್ಯವಾಗಿ ಕನಿಷ್ಠ ಶೇ. 50 ಅಂಕಗಳ ಅಗತ್ಯವಿದ್ದು, ಅಧಿಸೂಚನೆಯಲ್ಲಿ ತಿಳಿಸಿರುವ ಕೆಲವು ವರ್ಗಗಳಿಗೆ ವಿನಾಯಿತಿ ಅನ್ವಯಿಸುತ್ತದೆ. 2027ರ ಜನವರಿ 1ರ ವೇಳೆಗೆ
ಅಭ್ಯರ್ಥಿಗಳ ವಯಸ್ಸು 18ರಿಂದ 30 ವರ್ಷಗಳ ನಡುವೆ ಇರಬೇಕು. ಮೀಸಲಾತಿ ವರ್ಗಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ದೊರೆಯಲಿದೆ.
ವೇತನ ಎಷ್ಟು?
ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ ಹುದ್ದೆಗೆ ಆರಂಭಿಕ ಮೂಲ ವೇತನ ₹21,700.
ಉಳಿದ ಮೂರು ಹುದ್ದೆಗಳಿಗೆ ಆರಂಭಿಕ ಮೂಲ ವೇತನ ₹19,900.
ಇದರೊಂದಿಗೆ ನಿಯಮಾನುಸಾರ ಇತರ ಭತ್ಯೆಗಳು ದೊರೆಯಲಿವೆ.
ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವಾಗ?
ಅರ್ಜಿ ಸಲ್ಲಿಕೆ ಪ್ರಕ್ರಿಯೆ 2026ರ ಅಕ್ಟೋಬರ್ 15ರಿಂದ ಆರಂಭವಾಗಿದ್ದು, ನವೆಂಬರ್ 13, 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಅಧಿಕೃತ ರೈಲ್ವೆ ನೇಮಕಾತಿ ಮಂಡಳಿಯ ವೆಬ್‌ಸೈಟ್ (Website) rrb.indianrailways.gov.in ಮೂಲಕ ಅರ್ಜಿ ಸಲ್ಲಿಸಬಹುದು.
ಇದನ್ನು ಓದಿ : https://vijayatimes.com/triple-omr-sheet-for-kea-examination/