Recruitment of 42 AEE Posts of PWD Department: Online Application Link Released.
ಕರ್ನಾಟಕ ಲೋಕಸೇವಾ ಆಯೋಗವು ಲೋಕೋಪಯೋಗಿ ಇಲಾಖೆಯಲ್ಲಿನ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಲಿಂಕ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಇದೀಗ ಸದರಿ ಹುದ್ದೆಗಳಿಗೆ ಅರ್ಜಿ ಲಿಂಕ್ ಅನ್ನು ಆಕ್ಟಿವೇಟ್ ಮಾಡಿದೆ. ಉಳಿಕೆ ಮೂಲ ವೃಂದದ 30 ಎಇಇ (AEE)ಹುದ್ದೆಗೆ ಹಾಗೂ ಹೈದೆರಾಬಾದ್ ಕರ್ನಾಟಕ ವೃಂದದ 12 ಎಇಇ (AEE)ಹುದ್ದೆಗೆ ಈ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದು, ಸದರಿ ಹುದ್ದೆಗೆ ಅರ್ಹ ಮತ್ತು ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ವಿವರಗಳು:
ಉದ್ಯೋಗ ಇಲಾಖೆ-ಲೋಕೋಪಯೋಗಿ ಇಲಾಖೆ
ಹುದ್ದೆ ಹೆಸರು-ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಗ್ರೇಡ್ 1)
ಹುದ್ದೆಗಳ ಸಂಖ್ಯೆ-30 RPC +12HK
ವೇತನ ಶ್ರೇಣಿ –Rs.83,700 ರಿಂದ 1,55,200. ರೂಪಾಯಿ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ
: 03-10-2024
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ
: 04-11-2024
ಕೆಪಿಎಸ್‌ಸಿ ಯ ಹುದ್ದೆಗೆ ಅರ್ಜಿ ಸಲ್ಲಿಸುವ 3 ಹಂತಗಳು
ಮೊದಲನೇ ಹಂತ : ಪ್ರೊಫೈಲ್ ಕ್ರಿಯೇಟ್ / ಅಪ್‌ಡೇಟ್
ಎರಡನೇ ಹಂತ : ಅಪ್ಲಿಕೇಶನ್ ಸಬ್‌ಮಿಷನ್
ಮೂರನೇ ಹಂತ : ಅಪ್ಲಿಕೇಶನ್ ಶುಲ್ಕ ಪಾವತಿ

ಕೆಪಿಎಸ್‌ಸಿ ಪಿಡಬ್ಲ್ಯೂಡಿ ಎಇಇ ಹುದ್ದೆಗೆ ಅರ್ಜಿ ಸಲ್ಲಿಕೆ ಹೇಗೆ?
- ಕೆಪಿಎಸ್‌ಸಿಯ ವೆಬ್‌ಸೈಟ್ ‘http://www.kpsc.kar.nic.in/’ ಗೆ ಭೇಟಿ ನೀಡಿ.
- ತೆರೆದ ಮುಖಪುಟದಲ್ಲಿ ‘Apply Online for Various Notifications’ ಎಂದಿರುವಲ್ಲಿ ಕ್ಲಿಕ್ ಮಾಡಿ.
- ನಂತರ ಮತ್ತೊಂದು ವೆಬ್‌ಪುಟ ತೆರೆಯುತ್ತದೆ.
- ಇಲ್ಲಿ ಮೊದಲು ಯಾವ್ಯಾವ ಹುದ್ದೆಗೆ ಅರ್ಜಿ ಲಿಂಕ್ ಬಿಡುಗಡೆ ಆಗಿದೆ ಎಂದು ಗಮನಿಸಿಕೊಳ್ಳಬಹುದು.
- ಮೊದಲು ಕೆಪಿಎಸ್‌ಸಿ ಪೋರ್ಟಲ್‌ನಲ್ಲಿ ಒನ್ ಟೈಮ್ ರಿಜಿಸ್ಟ್ರೇಷನ್‌ಗಾಗಿ ‘New Registration‘ ಎಂದಿರುವಲ್ಲಿ ಕ್ಲಿಕ್ ಮಾಡಿ.
- ರಿಜಿಸ್ಟ್ರೇಷನ್ ವೆಬ್ ಸೈಟ್ ವಿಳಾಸ – https://kpsconline.karnataka.gov.in/HomePage/Index.html
- ಅಗತ್ಯ ವಿವರಗಳನ್ನು ನೀಡಿ ರಿಜಿಸ್ಟ್ರೇಷನ್ ಪೂರ್ಣಗೊಳಿಸಿ. ನಿಮ್ಮ ಪ್ರೊಫೈಲ್ ಕ್ರಿಯೇಟ್ ಆಗುತ್ತದೆ.
- ಈಗಾಗಲೇ ಕೆಪಿಎಸ್‌ಸಿ ವೆಬ್‌ನಲ್ಲಿ ರಿಜಿಸ್ಟ್ರೇಷನ್ ಮಾಡಿದ್ದಲ್ಲಿ, ‘Login‘ ಎಂದಿರುವಲ್ಲಿ ಕ್ಲಿಕ್ ಮಾಡಿ.
- ಯೂಸರ್ ನೇಮ್, ಪಾಸ್‌ವರ್ಡ್ ನೀಡಿ ಲಾಗಿನ್ ಆಗಿ.
- ನಂತರ ಎಇಇ ಹುದ್ದೆ ಅರ್ಜಿಗೆ ಕೇಳಲಾಗಿರುವ ವಿವರಗಳನ್ನು ನೀಡಿ ಅಪ್ಲಿಕೇಶನ್ ಸಲ್ಲಿಸಬಹುದು.
- ಶುಲ್ಕ ಪಾವತಿ ನಂತರ, ಮುಂದಿನ ರೆಫರೆನ್ಸ್‌ಗಾಗಿ ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ.
ಅರ್ಜಿ ಶುಲ್ಕ ವಿವರ:
- ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ.600.
- ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.300.
- ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ, ಪ್ರವರ್ಗ-1, ಮಾಜಿ ಸೈನಿಕ, ವಿಕಲ ಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಕೆಪಿಎಸ್‌ಸಿ ಪೋರ್ಟಲ್‌ನಲ್ಲಿ ರಿಜಿಸ್ಟ್ರೇಷನ್‌ಗೆ (Registrations) ಹಾಗೂ ಅರ್ಜಿಗೆ ಬೇಕಾದ ದಾಖಲೆಗಳು ಹೀಗಿವೆ:
ಹೆಸರು,ವೈಯಕ್ತಿಕ ವಿವರಗಳು, ಮೊಬೈಲ್ ನಂಬರ್ (Mobile Number)
ಶೈಕ್ಷಣಿಕ ವಿವರಗಳು, ಅಂಕಗಳು, ಅಂಕಪಟ್ಟಿಗಳು,
ಸಹಿ ಸ್ಕ್ಯಾನ್ ಕಾಪಿ, ಭಾವಚಿತ್ರ ಸ್ಕ್ಯಾನ್ ಕಾಪಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ,ಆಧಾರ್ ಕಾರ್ಡ್,ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ (SSLC Markscard), ಇನ್ನು ಸರ್ಕಾರಿ ಉದ್ಯೋಗಿ ಆಗಿದ್ದಲ್ಲಿ, ಎನ್‌ಒಸಿ (NOC) ನೀಡಬೇಕಾಗಿರುತ್ತದೆ.