ದೇಶದ ಪ್ರತಿಷ್ಠಿತ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ನಲ್ಲಿ (Bharat Electronics Ltd) ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಡಿಪ್ಲೊಮ (Diploma), ಬಿ.ಕಾಂ (B.Com) ಪದವಿ ಹಾಗೂ ಇಂಜಿನಿಯರಿಂಗ್ ಪದವಿ (Engineering degree) ಪಾಸಾದವರು ಅರ್ಜಿ ಸಲ್ಲಿಸಬಹುದು. ನೇರ ಸಂದರ್ಶನಕ್ಕೆ (Direct interview) ಹಾಜರಾಗಬಹುದು. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ನೇಮಕಾತಿ ಪ್ರಾಧಿಕಾರ : ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ( ಬಿಇಎಲ್)
ಒಟ್ಟು ಹುದ್ದೆಗಳ ಸಂಖ್ಯೆ : 83
ಹುದ್ದೆಯ ಅವಧಿ : 1 ವರ್ಷ. (ಅಪ್ರೆಂಟಿಸ್ )
ಗ್ರಾಜುಯೇಟ್ ಅಪ್ರೆಂಟಿಸ್ (Graduate Apprentice) – 63
ಟೆಕ್ನೀಷಿಯನ್ (ಡಿಪ್ಲೊಮ ) ಅಪ್ರೆಂಟಿಸ್ – 10
B.Com ಅಪ್ರೆಂಟಿಸ್ : 10
ನೇರ ಸಂದರ್ಶನ ದಿನಾಂಕಗಳು :
B.Tech in ECE, EEE, CSE : ದಿನಾಂಕ 20-01-2025
BE, B.Tech ಮೆಕ್ಯಾನಿಕಲ್, ಸಿವಿಲ್ : ದಿನಾಂಕ 21-01-2025
ಡಿಪ್ಲೊಮ ಅಪ್ರೆಂಟಿಸ್ : ದಿನಾಂಕ 22-01-2025
ವಯಸ್ಸಿನ ಅರ್ಹತೆಗಳು : ಅರ್ಜಿ ಸಲ್ಲಿಸಲು ಗರಿಷ್ಠ 25 ವರ್ಷ ವಯಸ್ಸು ಮೀರಿರಬಾರದು. OBC ಅಭ್ಯರ್ಥಿಗಳಿಗೆ 3 ವರ್ಷ, SC ಮತ್ತು ST ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
ಸ್ಟ್ರೈಫಂಡ್ ವಿವರ (Detail of stipend) :
ಗ್ರಾಜುಯೇಟ್ ಅಪ್ರೆಂಟಿಸ್ – Rs.17,500.
ಟೆಕ್ನೀಷಿಯನ್ ಅಪ್ರೆಂಟಿಸ್ – Rs.12,500.
ಬಿ.ಕಾಂ ಅಪ್ರೆಂಟಿಸ್ – Rs.12,500.
ನೇರ ಸಂದರ್ಶನಕ್ಕೆ ಹಾಜರಾಗುವಾಗ ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು
SSLC ಅಂಕಪಟ್ಟಿ
PUC ದಾಖಲೆಗಳು
ಡಿಪ್ಲೊಮ / ಪದವಿ ದಾಖಲೆಗಳು.
ಆಧಾರ್ಕಾರ್ಡ್
ಜಾತಿ ಪ್ರಮಾಣ ಪತ್ರ
ನೇರ ಸಂದರ್ಶನ ಸ್ಥಳ : ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್, ನಂದಮ್ಬಕ್ಕಮ್ (Nandambakkam), ಚೆನ್ನೈ (Chennai) – 600089.