- ಕೇಂದ್ರದ ರೇಟಿಂಗ್ ವರದಿಯಲ್ಲಿ (Red card to BESCOM) BESCOMಗೆ ಭಾರೀ ಹಿನ್ನಡೆ
- BESCOM ಸೇರಿದಂತೆ ಐದು ಎಸ್ಕಾಂಗಳು ಟಾಪ್ 20 ಪಟ್ಟಿಯಲ್ಲಿಲ್ಲ
- ವಿದ್ಯುತ್ ವಿತರಣಾ ಕಾರ್ಯಕ್ಷಮತೆಯಲ್ಲಿ ‘-C’ ಶ್ರೇಣಿ; 33,375 ಕೋಟಿ ಆದಾಯ ಇದ್ದರೂ ಲಾಭವಿಲ್ಲ
ಕೇಂದ್ರ ವಿದ್ಯುತ್ ಸಚಿವಾಲಯ ಬಿಡುಗಡೆ ಮಾಡಿರುವ 14ನೇ ವಾರ್ಷಿಕ ಸಮಗ್ರ (Red card to BESCOM) ರೇಟಿಂಗ್ ಮತ್ತು ರ್ಯಾಂಕಿಂಗ್ ವರದಿಯಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಸಂಸ್ಥೆ (BESCOM) ‘-C’ ಶ್ರೇಣಿಯನ್ನು ಪಡೆದುಕೊಂಡಿದ್ದು, ಇದನ್ನು ವಿದ್ಯುತ್ ಕ್ಷೇತ್ರದ ವಲಯದಲ್ಲಿ ‘ರೆಡ್ ಕಾರ್ಡ್’ (Red Card) ಎಂದು ಪರಿಗಣಿಸಲಾಗುತ್ತಿದೆ.
ದೇಶದ ಪ್ರಮುಖ ವಿದ್ಯುತ್ ವಿತರಣಾ ಸಂಸ್ಥೆಗಳ ಪೈಕಿ BESCOM ತಳಮಟ್ಟದ ಶ್ರೇಣಿಗೆ ಇಳಿದಿರುವುದು ರಾಜ್ಯದ ವಿದ್ಯುತ್ ಆಡಳಿತದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಕರ್ನಾಟಕದ ವಿದ್ಯುತ್ ವಿತರಣಾ ವ್ಯವಸ್ಥೆಯು ದೊಡ್ಡ ಮಟ್ಟದಲ್ಲಿ ಜನಜೀವನಕ್ಕೆ ಅವಲಂಬಿತವಾಗಿರುವ ಸಂದರ್ಭದಲ್ಲಿ, ಈ ರೇಟಿಂಗ್ ಸರ್ಕಾರ ಹಾಗೂ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶವಾಗಿದೆ.

ರಾಜ್ಯದಲ್ಲಿನ ಐದು ಪ್ರಮುಖ ಎಸ್ಕಾಂಗಳು—BESCOM (ಬೆಂಗಳೂರು), HESCOM (ಹುಬ್ಬಳ್ಳಿ), MESCOM (ಮಂಗಳೂರು), GESCOM (ಕಲಬುರಗಿ) ಹಾಗೂ CESC (ಮೈಸೂರು)—ಯಾವುದೂ ದೇಶದ ಟಾಪ್ 20 ವಿದ್ಯುತ್ ವಿತರಣಾ ಸಂಸ್ಥೆಗಳ ಪಟ್ಟಿಗೆ ಸೇರಲು ವಿಫಲವಾಗಿವೆ.
ಈ ಪೈಕಿ MESCOM ಮಾತ್ರ 56.44 ಅಂಕಗಳನ್ನು ಪಡೆದು 26ನೇ ಸ್ಥಾನದಲ್ಲಿದ್ದು, ‘B’ ಶ್ರೇಣಿಯನ್ನು ಗಳಿಸಿದೆ. ಉಳಿದ ಎಸ್ಕಾಂಗಳು (Red card to BESCOM) ಸರಾಸರಿ ಅಥವಾ ಕಡಿಮೆ ಕಾರ್ಯಕ್ಷಮತೆ ತೋರಿದ್ದು, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕ ಹಿಂದುಳಿದಿರುವುದನ್ನು ಈ ವರದಿ ಸ್ಪಷ್ಟವಾಗಿ ತೋರಿಸುತ್ತದೆ.
ವಿಶೇಷವಾಗಿ ಬೆಂಗಳೂರುಂತಹ ಮಹಾನಗರಕ್ಕೆ ವಿದ್ಯುತ್ ಪೂರೈಕೆ ಮಾಡುವ BESCOM ತಳಮಟ್ಟದ ಶ್ರೇಣಿಗೆ ಸಿಲುಕಿರುವುದು ಚರ್ಚೆಗೆ ಗ್ರಾಸವಾಗಿದೆ.
ಈ ಮೌಲ್ಯಮಾಪನದಲ್ಲಿ ದೇಶದ ಒಟ್ಟು 54 ರಾಜ್ಯ ಮತ್ತು ಖಾಸಗಿ ವಿದ್ಯುತ್ ವಿತರಣಾ ಸಂಸ್ಥೆಗಳನ್ನು ಒಳಗೊಂಡು ಪರಿಶೀಲನೆ ನಡೆಸಲಾಗಿದೆ.
ಕಾರ್ಯಕ್ಷಮತೆಯನ್ನು ಆಧರಿಸಿ A+ (6 ಸ್ಟಾರ್) ರಿಂದ ಹಿಡಿದು ‘-C’ (1 ಸ್ಟಾರ್) ವರೆಗೆ ಶ್ರೇಣಿಗಳನ್ನು ನೀಡಲಾಗಿದೆ. ಒಟ್ಟು 100 ಅಂಕಗಳ ಆಧಾರದಲ್ಲಿ 15 ಪ್ರಮುಖ ಕಾರ್ಯಕ್ಷಮತಾ ಸೂಚಕಗಳು ಮತ್ತು 9 ವಿಶೇಷ ಪ್ರೋತ್ಸಾಹ ಅಂಶಗಳನ್ನು ಪರಿಗಣಿಸಲಾಗಿದೆ.
ಹಣಕಾಸು ಸ್ಥಿತಿ, ನಗದು ಹರಿವು, ಸಾಲ–ಆಸ್ತಿ ಅನುಪಾತ, ಬಿಲ್ಲಿಂಗ್ ಹಾಗೂ ವಸೂಲಿ ದಕ್ಷತೆ, ವಿತರಣಾ ನಷ್ಟ, ಕಾರ್ಪೊರೇಟ್ ಆಡಳಿತ ಮತ್ತು ಸರ್ಕಾರದಿಂದ ನಷ್ಟ ಭರಿಸುವ ವ್ಯವಸ್ಥೆ ಮುಂತಾದ ಅಂಶಗಳು ಈ ಮೌಲ್ಯಮಾಪನದ ಭಾಗವಾಗಿವೆ. ಈ ಎಲ್ಲ ಅಂಶಗಳಲ್ಲಿ BESCOM ನಿರೀಕ್ಷಿತ ಮಟ್ಟ ತಲುಪಲು ವಿಫಲವಾಗಿದೆ ಎಂಬುದು ವರದಿಯಿಂದ ಸ್ಪಷ್ಟವಾಗಿದೆ.
2025ರ ಆರ್ಥಿಕ ವರ್ಷದಲ್ಲಿ BESCOMನ ಒಟ್ಟು ಆದಾಯ 33,375 ಕೋಟಿ ರೂ. ಆಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.2ರಷ್ಟು ಏರಿಕೆಯಾಗಿದೆ.
ಆದಾಯ ಹೆಚ್ಚಳವಾಗಿದ್ದರೂ, ತೆರಿಗೆ ನಂತರ ಸಂಸ್ಥೆಗೆ ಲಾಭ ದೊರಕಿಲ್ಲ ಎಂಬುದು ಗಂಭೀರ ಅಂಶ. ರೇಟಿಂಗ್ ಸ್ಕೋರ್‌ನಲ್ಲಿ BESCOM ಕೇವಲ 28.94/100 ಅಂಕಗಳನ್ನು ಪಡೆದುಕೊಂಡಿದ್ದು, ವಿಶೇಷ ಪ್ರೋತ್ಸಾಹಕ ಅಂಕಗಳಲ್ಲಿ 16.50 ಮಾತ್ರ ಗಳಿಸಿದೆ.
ಇದರಿಂದಾಗಿ ಸಂಸ್ಥೆಯ ಹಣಕಾಸು ನಿರ್ವಹಣೆ, ವೆಚ್ಚ ನಿಯಂತ್ರಣ ಮತ್ತು ಕಾರ್ಯಕ್ಷಮತೆಯಲ್ಲಿನ ದುರ್ಬಲತೆ ಬಹಿರಂಗವಾಗಿದೆ. ಇದೇ ವರದಿಯಲ್ಲಿ CESC ಅನ್ನು 44ನೇ ಸ್ಥಾನದಲ್ಲಿ ಪಟ್ಟಿ ಮಾಡಲಾಗಿದ್ದು, ಒಟ್ಟಾರೆ ಕರ್ನಾಟಕದ ವಿದ್ಯುತ್ ವಿತರಣಾ ಸಂಸ್ಥೆಗಳ ಸ್ಥಿತಿ ನಿರಾಶಾಜನಕವಾಗಿದೆ.
ಈ ರೇಟಿಂಗ್ ಕುರಿತು ಪ್ರತಿಕ್ರಿಯಿಸಿರುವ ವಿದ್ಯುತ್ ಕ್ಷೇತ್ರದ ತಜ್ಞರು, ಇದು ‘ಎಚ್ಚರಿಕೆ ಘಂಟೆ’ಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ಮಾರಾಟವಾಗುವ ವಿದ್ಯುತ್‌ನ ಶೇ.55ರಷ್ಟು BESCOM ಮೂಲಕವೇ ಪೂರೈಕೆಯಾಗುತ್ತಿರುವುದರಿಂದ, ಈ ಸಂಸ್ಥೆಯ ದುರ್ಬಲತೆ ನೇರವಾಗಿ ರಾಜ್ಯದ ಆರ್ಥಿಕತೆ ಹಾಗೂ ಜನಜೀವನದ ಮೇಲೆ ಪರಿಣಾಮ ಬೀರುತ್ತದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಎಸ್ಕಾಂಗಳ ಮೇಲೆ ಸಂಪೂರ್ಣ ಮೇಲ್ವಿಚಾರಣಾ ಅಧಿಕಾರ ಇಲ್ಲದಿರುವುದು, ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಉಚಿತ ಅಥವಾ ಕಡಿಮೆ ದರದ ವಿದ್ಯುತ್ ಪೂರೈಕೆ, ಹಾಗೂ ಐದು ಎಸ್ಕಾಂಗಳ ನಡುವೆ ಹಣಕಾಸು ಮತ್ತು ಸಂಪನ್ಮೂಲಗಳ ಸಮಾನ ಹಂಚಿಕೆಗೆ ಒಗ್ಗಟ್ಟಿನ ಹೋಲ್ಡಿಂಗ್ ಕಂಪನಿ ಇಲ್ಲದಿರುವುದೂ ಪ್ರಮುಖ ಸಮಸ್ಯೆಗಳಾಗಿವೆ. ಈ ಎಲ್ಲ ಕಾರಣಗಳು ಒಟ್ಟಾಗಿ ಕರ್ನಾಟಕದ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಹಿನ್ನಡೆಗೊಳಿಸುತ್ತಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಇದನ್ನು ಓದಿ : https://vijayatimes.com/transfer-from-b-khata-to-a-khata/