ರೆಡ್ಡಿ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಗೆ ಮಾಜಿ ಗೃಹ ಸಚಿವರ ಆಗ್ರಹ

Share on facebook
Share on google
Share on twitter
Share on linkedin
Share on print

ಬೆಂಗಳೂರು, ನ. 18: “ರೆಡ್ಡಿ ಅಭಿವೃದ್ಧಿ ನಿಗಮ ಮಂಡಳಿ” ಸ್ಥಾಪನೆ ಮಾಡುವ ಮೂಲಕ ನಮ್ಮ ಸಮುದಾಯಕ್ಕೂ ಪ್ರಾತಿನಿಧ್ಯ ನೀಡಬೇಕೆಂದು ನಾನು ರಾಜ್ಯ ಸರ್ಕಾರವನ್ನು ಈ ಮೂಲಕ ಒತ್ತಾಯಿಸುತ್ತೇನೆ. ಮಾಡುವುದಾದರೆ ಎಲ್ಲಾ ಸಮುದಾಯಗಳ ನಿಗಮ ಮಂಡಳಿಗಳನ್ನು ಸ್ಥಾಪನೆ ಮಾಡಿ ತಾರತಮ್ಯ ನಿವಾರಿಸಲಿ” ಎಂದು ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಆಗ್ರಹಿಸಿದ್ದಾರೆ.

ಅದಲ್ಲದೇ “ಎಲ್ಲಾ ಸಮುದಾಯಗಳಲ್ಲಿ ಹಲವಾರು ಸಮಸ್ಯೆಗಳು ಇರುವ ಜೊತೆಗೆ ಸಾಕಷ್ಟು ಸಂಖ್ಯೆಯಲ್ಲಿ ಬಡವರು ಇದ್ದಾರೆ. ನಿಗಮ ಮಂಡಳಿಗಳ ಸ್ಥಾಪನೆಯಾದಲ್ಲಿ ಇಂತವರನ್ನು ಗುರುತಿಸಿ ಸಹಾಯ ಮಾಡಲು ಅನುಕೂಲವಾಗುತ್ತದೆ” ಎಂದು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Submit Your Article