ಹೊಸ ವರ್ಷದ (New year) ಮೊದಲ ದಿನವೇ LPG ಗ್ಯಾಸ್ (LPG Gas) ಗ್ರಾಹಕರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಸರ್ಕಾರಿ ತೈಲ ಕಂಪನಿಗಳು (Government Oil Companies) ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆ ಮಾಡಲು ಮುಂದಾಗಿದೆ. ವಾಣಿಜ್ಯ ಎಲ್‌ಪಿಜಿ (Commercial LPG) ಸಿಲಿಂಡರ್‌ಗಳ ಬೆಲೆಯನ್ನ ಇಂದಿನಿಂದ ಕಡಿತಗೊಳಿಸಲಾಗಿದೆ. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ₹ 1,818.5 ರಿಂದ ₹ 1,804 ಕ್ಕೆ ಇಳಿದಿದೆ.
ಪ್ರತೀ LPG ಸಿಲಿಂಡರ್ (LPG Cylinder) ಬೆಲೆಯಲ್ಲಿ 14.50 ರೂಪಾಯಿ ಇಳಿಕೆ ಆಗಿದೆ. ಕೊಲ್ಕತ್ತಾದಲ್ಲಿ LPG ಗ್ಯಾಸ್ ಬೆಲೆ 1927 ರೂಪಾಯಿಯಿಂದ 1911 ಕ್ಕೆ ಇಳಿಕೆ (Decrease) ಆಗಿದೆ. ಅದ್ರಂತೆ ಮುಂಬೈನಲ್ಲಿ ಸಿಲಿಂಡರ್ (Cylinder in Mumbai) ಬೆಲೆ 1756 ರೂಪಾಯಿಗೆ ಇಳಿಕೆ ಆಗಿದೆ. ಚೆನ್ನೈನಲ್ಲಿ (Chennai) ಇವತ್ತಿನಿಂದ 19 ಕೆಜಿ ಸಿಲಿಂಡರ್ಗೆ 1966 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಬೆಂಗಳೂರಿನಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ: 805.50 ರೂಪಾಯಿ ಇದೆ.

ಹೊಸ ವರ್ಷದಲ್ಲಿ ಗ್ರಾಹಕರಿಗೆ ಈ ಸಿಹಿ ಸುದ್ದಿ ಸಿಕ್ಕಿರೋದು ಸಂತಸ ಆಗಿದೆ. ಇಂದು ಮಧ್ಯರಾತ್ರಿಯಿಂದಲೇ ಈ ಕಡಿಮೆ ಸಿಲಿಂಡರ್ ದರ (Cylinder rate) ಜಾರಿಗೆ ಬರಲಿದೆ. ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯಲ್ಲಿ 6 ತಿಂಗಳ ನಂತರ ಇಳಿಕೆ ಕಂಡಿದೆ. ಜನವರಿಯ ಮೊದಲು, ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳು (Commercial gas cylinders) ಸತತ 6 ತಿಂಗಳವರೆಗೆ ಅಂದ್ರೆ, ಜುಲೈನಿಂದ ಡಿಸೆಂಬರ್‌ವರೆಗೆ ದುಬಾರಿಯಾಗುತ್ತಿತ್ತು.
ದೇಶೀಯ ಎಲ್‌ಪಿಜಿ ಸಿಲಿಂಡರ್ (LPG Cylender) ಬೆಲೆಯನ್ನ ಮಾರ್ಚ್ 2024 ರಲ್ಲಿ ಕೊನೆದಾಗಿ 100 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿತ್ತು. ಇಷ್ಟು ದಿನ ಎಲ್‌ಪಿಜಿ ಗ್ಯಾಸ್ ಬೆಲೆ ಜನರ ಕೈ ಸುಡುತ್ತಿತ್ತು. ಸದ್ಯ ದೇಶದ ಜನತೆ ಎಲ್‌ಪಿಜಿ ಗ್ಯಾಸ್ ದರ ಇಳಿಕೆಯಿಂದ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.