Bangalore : ಹೌದು ಇತ್ತೀಚೆಗೆ ಸಿನಿಮಾ ಹೆಸರಿನಲ್ಲಿ ವಂಚನೆ ನಡೆಯುತ್ತಲೆ (Reels roll call) ಇದೆ, ನಟನೆಯಲ್ಲಿ ಆಸಕ್ತಿ ಇರುವವರನ್ನು ಟಾರ್ಗೆಟ್ ಮಾಡಿಕೊಂಡು
ಅವರಿಗೆ ಸಿನಿಮಾ (Movie) ರಂಗದಲ್ಲಿ ಅವಕಾಶವನ್ನು ಮಾಡಿಸಿಕೊಡುವುದಾಗಿ ನಂಬಿಸಿ ಲಕ್ಷ ಲಕ್ಷ ಹಣವನ್ನು ತಗೆದುಕೊಂಡು ವಂಚನೆ ಮಾಡುತಿದ್ದ ಅವಿನಾಶ್ ಎಂಬ ವ್ಯಕ್ತಿಯ ಬಣ್ಣ ಬಯಲಾಗಿದೆ.

ರೀಲ್ಸ್ (Reels) ಮಾಡೋ ಹುಡುಗ, ಹುಡುಗಿಯರನ್ನೆ ಟಾರ್ಗೆಟ್ ಮಾಡಿಕೊಂಡು ನಾನು ಉಪೇಂದ್ರ (Upendra),ಯಶ್ (Yash),ದರ್ಶನ್ (Darshan) ಹೀಗೆ
ದೊಡ್ಡ ದೊಡ್ಡ ಸ್ಟಾರ್ ನಟರ ಫ್ರೆಂಡ್ ಅಂತ ಹೇಳಿಕೊಂಡು ಫಿಲಂ ನಲ್ಲಿ ಚಾನ್ಸ್ ಕೊಡ್ತೀನಿ ಅಂತಾ ನಂಬಿಸಿ ಅವರಿಂದ ಲಕ್ಷ ಲಕ್ಷ ಹಣ ಪಡೆದು ಮೋಸ ಮಾಡುವುದೇ ಇವನ ಬಂಡವಾಳವಾಗಿದೆ.
ಈತನ ಹೆಸರು ಅವಿನಾಶ್ ಪ್ರೊಡ್ಯೂಸರ್ ಥರಾ ಪೋಸ್ ಕೊಟ್ಟು ಯಾಮಾರಿಸಿ (Reels roll call) ಯುವಕರಿಗೆ ಬಿಗ್ ಬಾಸ್ ನಲ್ಲಿ ಚಾನ್ಸ್ ಕೊಡ್ತೀನಿ,
ಸಿನಿಮಾದಲ್ಲಿ ಹೀರೋ ಮಾಡ್ತೀನಿ ಅಂತ ಹೇಳ್ತಾನೆ. ಅನೇಕ ನಟರ ಜೊತೆ ಫೋಟೋಗಳನ್ನ ತಗೆಸಿಕೊಂಡು, ತಾನೊಬ್ಬ ದೊಡ್ಡ ಪ್ರೊಡ್ಯೂಸರ್ ಅಂತ ಹೇಳಿ ತನ್ನದೇ ಒಂದು ಕೃಷ್ಣ ಪ್ರೊಡಕ್ಷನ್ ಗೆ ಉಪೇಂದ್ರ ಅವರದ್ದೇ ಕೃಪಾಕಟಾಕ್ಷ
ಅಂತ ಹೇಳಿಕೊಂಡು ಜನರನ್ನ ನಂಬಿಸ್ತಿದ್ದಾನೆ, ರೀಲ್ಸ್ ಮಾಡುವವರನ್ನು, ಹಾಗೂ ಇನ್ಸ್ಟಾಗ್ರಾಮಿನಲ್ಲಿ ಲಕ್ಷ ಗಟ್ಟಲೆ ಲೈಕ್ ಕಮೆಂಟ್ಸ್ ತಗೆದುಕೊಳ್ಳುವವರನ್ನು ಪತ್ತೆ ಹಚ್ಚಿ ಮೆಸೇಜ್ ಮಾಡಿ,
ಇದನ್ನೂ ಓದಿ : https://vijayatimes.com/ragini-dwivedi-bollywood-film/
ಮಾತಾನಾಡಿಸಿ, ಶಭಾಷ್ ಗಿರಿ ಕೊಟ್ಟು ವಾಟ್ಸಾಪ್ ನಂಬರ್ ಎಕ್ಸ್ಚೇಂಜ್ ಮಾಡಿಕೊಳ್ಳುತ್ತಾನೆ. ನಂತರ ಇವನ ಡೋಂಗಿ ಫೋಟೋಸ್, ಬಯೋಗ್ರಫಿ ಹಾಕಿ ಜಂಬ ಕೊಚ್ಚಿಕೊಂಡು ಬೆಣ್ಣೆಯಂಥಾ ಮಾತುಗಳನ್ನ ಆಡಿ ಜನರನ್ನ ಮರುಳು ಮಾಡುತ್ತಾನೆ.
ಈತನ ಮೋಸದ ಬಲೆಗೆ ಬಿದ್ದವರು ಒಬ್ಬಿಬ್ಬರಲ್ಲ, ಈತನ ಮೋಸದ ಆಟದಲ್ಲಿ ಅಂಗವಿಕಲರನ್ನು ಬಿಟ್ಟಿಲ್ಲ .ಕಂಡವರ ದುಡ್ಡು ತಿಂದು ರುಚಿ ಹಿಡಿದಿದ್ದ ಈ ಖದೀಮ ಅವೀನಾಶ್ ಮತ್ತೆ ಅದೇ ಚಾಳಿ ಪ್ರಾರಂಭಿಸಿ ಅನೇಕರಿಗೆ ಮೋಸ ಮಾಡಿದ್ದಾನೆ.
