Visit Channel

ಸಂಬಂಧಗಳ ಕತೆಯ ‘ಬಾಡಿ ಗಾಡ್’

5ace5fb0-ff0a-456e-b31b-e234013a3fca

ತಮ್ಮ‌ ನಿರ್ದೇಶನದ ಮೂಲಕ ಮನೆಮಾತಾಗಿರುವ ಗುರುಪ್ರಸಾದ್ ಕಲಾವಿದರಾಗೂ ಸೈ ಅನಿಸಿಕೊಂಡವರು.
ಕೊರೋನ ಲಾಕ್ ಡೌನ್ ಸಮಯದಲ್ಲಿ ಗುರುಪ್ರಸಾದ್ ವಿಭಿನ್ನ ಕಥಾಹಂದರ ಹೊಂದಿರುವ “ಬಾಡಿ ಗಾಡ್” ಚಿತ್ರದಲ್ಲಿ ನಟಿಸಿದ್ದಾರೆ.

ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅನುಭುವ ಹಂಚಿಕೊಂಡ ಗುರು ಪ್ರಸಾದ್, “ಲಾಕ್ ಡೌನ್ ಸಮಯದಲ್ಲಿ ಖಾಲಿ ಕುಳಿತಿದ್ದ ನನಗೆ ನಿರ್ದೇಶಕರು ಹೇಳಿದ ಈ ಕಥೆ ಇಷ್ಟವಾಯಿತು.
ಅರವತ್ತರ ಆಸುಪಾಸಿನ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ತನಕ ಪತ್ರಕರ್ತ ಹಾಗೂ ನಿರ್ದೇಶಕನಾಗಿ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ನನಗೆ ಇದು ವಿಭಿನ್ನ ಪಾತ್ರ. ಇದರಲ್ಲಿ ಮಗ-ಮಗಳು ವಿದೇಶದಲ್ಲಿ ನೆಲೆಸಿರುತ್ತಾರೆ. ವಯಸ್ಸಾದ ವರಿಗೆ ಮಕ್ಕಳ ಅವಶ್ಯಕತೆ ಎಷ್ಟಿರುತ್ತದೆ ಎನ್ನುವುದನ್ನು ಈ ಪಾತ್ರದ ಮೂಲಕ ಹೇಳಹೊರಟಿದ್ದಾರೆ. ನನ್ನ ಪತ್ನಿ ಪಾತ್ರದಲ್ಲಿ ಪದ್ಮಜಾರಾವ್ ಅಭಿನಯಿಸಿದ್ದಾರೆ.
ಒಳ್ಳೆಯ ಕಥೆ, ಒಳ್ಳೆಯ ತಂಡ. ಇಡೀ ತಂಡದ ಶ್ರಮದಿಂದ ಚಿತ್ರ ಚೆನ್ನಾಗಿ ಬಂದಿದೆ. ಪ್ರೇಕ್ಷಕರ ಮೆಚ್ಚುಗೆಗೂ “ಬಾಡಿ ಗಾಡ್” ಪಾತ್ರವಾಗಲಿದೆ” ಎಂದರು.

ದಕ್ಷಿಣ ಭಾರತದ ಹೆಸರಾಂತ ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿರುವ ಹಾಗೂ ಕನ್ನಡದಲ್ಲಿ “ಗಣಪ”, “ಕರಿಯ 2”,
“ಡಾಲಿ” ಚಿತ್ರಗಳನ್ನು ನಿರ್ದೇಶಿಸಿರುವ ಪ್ರಭು ಶ್ರೀನಿವಾಸ್ ಈ ಚಿತ್ರದ ನಿರ್ದೇಶಕರು. ಸತ್ತ ವ್ಯಕ್ತಿಯ ದೇಹದ ಹಿಂದೆ ಹೆಣೆಯಲಾಗಿರುವ ವಿಭಿನ್ನ ಕಥೆಯ ಬಾಡಿ ಗಾಡ್ ಚಿತ್ರವನ್ನು ಲಾಕ್ ಡೌನ್ ಸಮಯದಲ್ಲಿ ನಿರ್ದೇಶಿಸಿದ್ದೇನೆ.
ಈ ಕಥೆಯನ್ನು ನನ್ನ‌ ಸ್ನೇಹಿತರ ಬಳಿ ಹೇಳಿದೆ. ಅವರೆ ನಿರ್ಮಾಣ ಮಾಡಬೇಕಿತ್ತು. ಕಾರಣಾಂತರದಿಂದ ಆನಂತರ ನಾನೇ ನಿರ್ಮಾಣವನ್ನು ಮಾಡಿದ್ದೇನೆ. ಪ್ರಮೋಷನಲ್ ಸಾಂಗ್ ಒಂದರ ಚಿತ್ರೀಕರಣ ಬಿಟ್ಟು ಬಾಕಿ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರ‌ ಕೂಡ ತೆರೆಗೆ ಬರಲು ಬಹುತೇಕ ಸಿದ್ಧವಾಗಿದೆ.‌ ಅಂದುಕೊಂಡಂತೆ ಆದರೆ ಸೆಪ್ಟೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ತರುತ್ತೇನೆ ಎನ್ನುತ್ತಾರೆ ಪ್ರಭು ಶ್ರೀನಿವಾಸ್.

ಮಧ್ಯಮವರ್ಗದ ಯುವಕನೊಬ್ಬನ ಪಾತ್ರದಲ್ಲಿ ನಾನು ಅಭಿನಯಿಸಿದ್ದೇನೆ. ನನ್ನ ಹಾಗೂ ಗುರುಪ್ರಸಾದ್ ಅವರ ಕಾಂಬಿನೇಶನ್ ನಲ್ಲಿ ಬರುವ ಸನ್ನಿವೇಶಗಳು ಚೆನ್ನಾಗಿದೆ ಎಂದು ಚಿತ್ರದ ನಾಯಕ ಮನೋಜ್ ಹೇಳಿದ್ದಾರೆ.
ಈ ಹಿಂದೆ “ಮೊಗ್ಗಿನ ಮನಸ್ಸು”, ” ಓ ಪ್ರೇಮವೇ” ಮುಂತಾದ ಚಿತ್ರಗಳಲ್ಲಿ ಮನೋಜ್ ಅಭಿನಯಿಸಿದ್ದಾರೆ.
ಮುಗ್ದ ಯುವಕನ ಪಾತ್ರಕ್ಕಾಗಿ ಸಾಕಷ್ಟು ಕಲಾವಿದರನ್ನು ಸಂಪರ್ಕಿಸಲು‌ ಪ್ರಯತ್ನ ಮಾಡಿದರಂತೆ. ಆದರೆ ಅನಿರೀಕ್ಷಿತ ಭೇಟಿಯಾದ ಮನೋಜ್ ಅವರು ಈ ಪಾತ್ರಕ್ಕೆ ಸರಿಹೊಂದುತ್ತಾರೆ ಎಂದು ಕೊಂಡು ಮನೋಜ್ ಅವರನ್ನು ನಾಯಕನ ಪಾತ್ರಕ್ಕೆ ಆಯ್ಕೆ ಮಾಡಿರುವುದಾಗಿ ತಿಳಿಸಿದ ನಿರ್ದೇಶಕರು, ಮನೋಜ್ ಅವರ ಸಹಜ ಅಭಿನಯ ನೋಡುಗರ ಮನದಲ್ಲೇ ಉಳಿಯುತ್ತದೆ ಎನ್ನುತ್ತಾರೆ.
ಚಿತ್ರದಲ್ಲಿ ನಟಿಸಿರುವ ನಿರಂಜನ್, ಅಶ್ವಿನ್ ಹಾಸನ್, ಸಂಗೀತ ನೀಡಿರುವ‌ ಕರಣ್ ಬಿ ಕೃಪ ಹಾಗೂ ಸಂಕಲನಕಾರ ಉಜ್ವಲ್ ಚಂದ್ರ “ಬಾಡಿ ಗಾಡ್” ಬಗ್ಗೆ ತಮ್ನ ಅನುಭವ ಹಂಚಿಕೊಂಡರು.

Latest News

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.

Culprits
ಪ್ರಮುಖ ಸುದ್ದಿ

ಹಾಲಿನ ವ್ಯಾಪಾರದ ಸೋಗಿನಲ್ಲಿ ಖೋಟಾ ನೋಟು ದಂಧೆ ; ಬಿಜೆಪಿ ಮುಖಂಡ ಸೇರಿ ಮೂವರ ಬಂಧನ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

rss
ರಾಜಕೀಯ

RSS ಭಾರತದಲ್ಲಿನ ತಾಲಿಬಾನ್ ಇದ್ದಂತೆ : ಕಾಂಗ್ರೆಸ್‌

ಆರ್‌ಎಸ್‌ಎಸ್‌ ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಭಯಸುವ ಆರ್‌ಎಸ್‌ಎಸ್‌, ಭಾರತದಲ್ಲಿನ ತಾಲಿಬಾನ್ ಇದ್ದಂತೆ.