• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ತೆರಿಗೆ ಪಾವತಿದಾರರಿಗೆ ದೊಡ್ಡ ರಿಲೀಫ್: ITR ತಡವಾದರೂ ಸಿಗಲಿದೆ ವಿನಾಯಿತಿ

Teju Srinivas by Teju Srinivas
in Vijaya Time
ತೆರಿಗೆ ಪಾವತಿದಾರರಿಗೆ ದೊಡ್ಡ ರಿಲೀಫ್: ITR ತಡವಾದರೂ ಸಿಗಲಿದೆ ವಿನಾಯಿತಿ
0
SHARES
15
VIEWS
Share on FacebookShare on Twitter

ಗಡುವು ಮೀರಿದರೂ ITR ಸಲ್ಲಿಸಿದವರಿಗೆ (relief for taxpayers) ವಿನಾಯಿತಿ ಸಿಗಲಿದೆ – ITAT

ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಮಹತ್ವದ ತೀರ್ಪು, ತೆರಿಗೆದಾರರಿಗೆ ದೊಡ್ಡ ರಿಲೀಫ್

ತಾಂತ್ರಿಕ ವಿಳಂಬದಿಂದ ತೆರಿಗೆ ರಿಯಾಯಿತಿ ಕಸಿದುಕೊಳ್ಳಬಾರದು ಎಂದ ITAT

ವೈಯಕ್ತಿಕ ಆದಾಯ ತೆರಿಗೆ ಪಾವತಿಸುವ ಉದ್ಯೋಗಿಗಳು ಮತ್ತು ಸ್ವಯಂ (relief for taxpayers) ಉದ್ಯೋಗಿಗಳಿಗೆ ಮಹತ್ವದ ಸಮಾಧಾನದ ಸುದ್ದಿ ದೊರೆತಿದೆ.

ಇನ್ನು ಮುಂದೆ ಆದಾಯ ತೆರಿಗೆ ರಿಟರ್ನ್ಸ್‌ (ITR) ಸಲ್ಲಿಕೆಯಲ್ಲಿ ವಿಳಂಬವಾದರೂ ತೆರಿಗೆ ವಿನಾಯಿತಿಗಳನ್ನು ಪಡೆಯಲು ಅವಕಾಶ ಇರುತ್ತದೆ ಎಂಬ ಮಹತ್ವದ ತೀರ್ಪನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) ನೀಡಿದೆ.

relief for taxpayers

ಈ ತೀರ್ಪು ಸಾವಿರಾರು ತೆರಿಗೆ ಪಾವತಿದಾರರಿಗೆ ನೆರವಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಗಡುವಿನೊಳಗೆ ITR ಸಲ್ಲಿಸದಿದ್ದರೆ ಸೆಕ್ಷನ್ 80 ಅಡಿಯಲ್ಲಿ ಸಿಗುವ

ತೆರಿಗೆ ವಿನಾಯಿತಿಗಳನ್ನು ನಿರಾಕರಿಸಲಾಗುತ್ತಿತ್ತು. ಆದರೆ ಈಗ ನ್ಯಾಯಮಂಡಳಿಯ ತೀರ್ಪಿನಿಂದ ತೆರಿಗೆದಾರರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.

ಇದುವರೆಗೆ ಆದಾಯ ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ, ನಿಗದಿತ ಸಮಯದ (relief for taxpayers) ನಂತರ ITR ಸಲ್ಲಿಸಿದರೆ ಕೆಲವು ತೆರಿಗೆ ರಿಯಾಯಿತಿಗಳನ್ನು ಪಡೆಯಲು ಅವಕಾಶ ಇರಲಿಲ್ಲ. ಇದರಿಂದ ಅನೇಕ ತೆರಿಗೆ ಪಾವತಿದಾರರು ನಷ್ಟ ಅನುಭವಿಸುತ್ತಿದ್ದರು.

ಆದರೆ ITAT ನೀಡಿದ ತೀರ್ಪಿನ ಪ್ರಕಾರ, ಕೇವಲ ರಿಟರ್ನ್ಸ್ ಸಲ್ಲಿಕೆಯಲ್ಲಿ ವಿಳಂಬವಾಯಿತು ಎಂಬ ಕಾರಣಕ್ಕೆ ತೆರಿಗೆದಾರರಿಗೆ ಕಾನೂನುಬದ್ಧವಾಗಿ ಸಿಗಬೇಕಾದ ವಿನಾಯಿತಿಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ನ್ಯಾಯಮಂಡಳಿ ಸ್ಪಷ್ಟಪಡಿಸಿದೆ.

ತೆರಿಗೆ ಪಾವತಿದಾರರು ತಮ್ಮ ಆದಾಯವನ್ನು ಸರಿಯಾಗಿ ಘೋಷಿಸಿ, ಸಂಬಂಧಿತ ತೆರಿಗೆ ಪಾವತಿಸಿದ್ದರೆ, ತಾಂತ್ರಿಕ ವಿಳಂಬದ ಕಾರಣಕ್ಕೆ ಅವರ ಹಕ್ಕುಗಳನ್ನು ಕಸಿದುಕೊಳ್ಳುವುದು ಸರಿಯಲ್ಲ ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ.

ಈ ಪ್ರಕರಣದಲ್ಲಿ ತೆರಿಗೆ ಪಾವತಿದಾರರೊಬ್ಬರು ನಿಗದಿತ ಗಡುವಿನ ನಂತರ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದರು. ಇದನ್ನು ಆಧಾರವನ್ನಾಗಿ ಮಾಡಿಕೊಂಡು ಆದಾಯ ತೆರಿಗೆ ಇಲಾಖೆ ಸೆಕ್ಷನ್ 80 ಅಡಿಯಲ್ಲಿ ದೊರೆಯುವ ತೆರಿಗೆ ವಿನಾಯಿತಿಗಳನ್ನು ನಿರಾಕರಿಸಿತ್ತು.

ನಂತರ ತೆರಿಗೆ ಪಾವತಿದಾರರು ಮೇಲ್ಮನವಿ ಸಲ್ಲಿಸಿದ್ದು, ಪ್ರಕರಣದ ವಿಚಾರಣೆ ನಡೆಸಿದ ITAT ಆದಾಯ ತೆರಿಗೆ ಕಾಯಿದೆಯ ನಿಯಮಗಳನ್ನು ಪರಿಶೀಲಿಸಿ, ತೆರಿಗೆ ಪಾವತಿದಾರರ

ಪರವಾಗಿ ತೀರ್ಪು ನೀಡಿದೆ. ಇದರಿಂದ ವಿಳಂಬಿತ ITR ಸಲ್ಲಿಸಿದರೂ ಸೆಕ್ಷನ್ 80C ಸೇರಿದಂತೆ ಕೆಲವು ವಿನಾಯಿತಿಗಳನ್ನು ಪಡೆಯಲು ಅವಕಾಶ ಇದೆ ಎಂದು ಸ್ಪಷ್ಟವಾಗಿದೆ.

ಈ ಪ್ರಕರಣದ ಹಿನ್ನೆಲೆಯಾಗಿ ಅಸೆಸ್ಮೆಂಟ್ ವರ್ಷಕ್ಕೆ ಸಂಬಂಧಿಸಿದಂತೆ ಒಂದು ಹೌಸಿಂಗ್ ಸೊಸೈಟಿ ವಿಳಂಬವಾಗಿ ITR ಸಲ್ಲಿಸಿತ್ತು. ಸೆಕ್ಷನ್ 80P ಅಡಿಯಲ್ಲಿ ವಿನಾಯಿತಿಗಳನ್ನು

ಪಡೆದ ನಂತರ ಕಡಿಮೆ ಆದಾಯವನ್ನು ತೋರಿಸಿತ್ತು. ಆದರೆ ಸಹಕಾರಿ ಬ್ಯಾಂಕ್‌ನಿಂದ ಬಂದ ಬಡ್ಡಿ ಆದಾಯಕ್ಕೆ ವಿನಾಯಿತಿ ನೀಡಲು ಆದಾಯ ತೆರಿಗೆ ಇಲಾಖೆ ನಿರಾಕರಿಸಿತ್ತು.

ನಂತರ ಸೊಸೈಟಿ ತಿದ್ದುಪಡಿ ಅರ್ಜಿ ಸಲ್ಲಿಸಿದರೂ ಅದನ್ನು ತಿರಸ್ಕರಿಸಲಾಯಿತು. ಅಂತಿಮವಾಗಿ ಈ ಪ್ರಕರಣ ITAT ಮುಂದೆ ಹೋಗಿ, ನ್ಯಾಯಮಂಡಳಿ ತೆರಿಗೆ ಪಾವತಿದಾರರ ಪರವಾಗಿ ತೀರ್ಪು ನೀಡಿದೆ.

ಒಟ್ಟಿನಲ್ಲಿ, ಈ ತೀರ್ಪು ಅನಿವಾರ್ಯ ಕಾರಣಗಳಿಂದ ಸಕಾಲದಲ್ಲಿ ITR ಸಲ್ಲಿಸಲು ಸಾಧ್ಯವಾಗದ ತೆರಿಗೆ ಪಾವತಿದಾರರಿಗೆ ದೊಡ್ಡ ನೆರವಾಗಲಿದೆ.

ತೆರಿಗೆ ವಿನಾಯಿತಿ ಒಂದು ಪ್ರೋತ್ಸಾಹಕ ಕ್ರಮವಾಗಿದ್ದು, ಅರ್ಹತೆ ಇದ್ದಾಗ ಕೇವಲ ತಾಂತ್ರಿಕ ಕಾರಣಗಳ ಆಧಾರದ ಮೇಲೆ ಅದನ್ನು ನಿರಾಕರಿಸುವುದು ಸರಿಯಲ್ಲ ಎಂದು ನ್ಯಾಯಮಂಡಳಿ ತಿಳಿಸಿದೆ.

ಈ ತೀರ್ಪಿನಿಂದ ಮುಂದಿನ ದಿನಗಳಲ್ಲಿ ವಿಳಂಬಿತ ITR ಸಲ್ಲಿಸಿದರೂ ಅನೇಕ ತೆರಿಗೆದಾರರಿಗೆ ವಿನಾಯಿತಿ ಪಡೆಯುವ ಅವಕಾಶ ದೊರೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಇದನ್ನು ಓದಿ : https://vijayatimes.com/us-conditions-for-iran-to-stop-war/

Related News

ಶಂಖಪುಷ್ಪ ಹೂವಿನ ಚಹಾ (ಬ್ಲೂ ಟೀ) ಸೇವನೆಯಿಂದ ತೂಕ ಕಡಿಮೆ ಆಗುತ್ತಾ ? ಇಲ್ಲಿದೆ ಪೂರ್ಣ ವಿವರ
Vijaya Time

ಶಂಖಪುಷ್ಪ ಹೂವಿನ ಚಹಾ (ಬ್ಲೂ ಟೀ) ಸೇವನೆಯಿಂದ ತೂಕ ಕಡಿಮೆ ಆಗುತ್ತಾ ? ಇಲ್ಲಿದೆ ಪೂರ್ಣ ವಿವರ

November 11, 2026
KSRTC ಪ್ರಯಾಣಿಕರಿಗೆ ಮತ್ತೊಂದು ಶಾಕ್: ಲಗೇಜ್ ಸಾಗಣೆ ಶುಲ್ಕ ದುಪ್ಪಟ್ಟು ಏರಿಕೆ
Vijaya Time

KSRTC ಪ್ರಯಾಣಿಕರಿಗೆ ಮತ್ತೊಂದು ಶಾಕ್: ಲಗೇಜ್ ಸಾಗಣೆ ಶುಲ್ಕ ದುಪ್ಪಟ್ಟು ಏರಿಕೆ

November 11, 2026
ನವೆಂಬರ್ 1ರಿಂದ ಮೊಬೈಲ್ ಬಳಕೆದಾರರಿಗೆ ಹೊಸ ಸೌಲಭ್ಯ: ಅಪರಿಚಿತ ಕರೆ ಮಾಡಿದವರ ಹೆಸರೂ ಇನ್ಮುಂದೆ ಡಿಸ್‌ಪ್ಲೇ
Vijaya Time

ನವೆಂಬರ್ 1ರಿಂದ ಮೊಬೈಲ್ ಬಳಕೆದಾರರಿಗೆ ಹೊಸ ಸೌಲಭ್ಯ: ಅಪರಿಚಿತ ಕರೆ ಮಾಡಿದವರ ಹೆಸರೂ ಇನ್ಮುಂದೆ ಡಿಸ್‌ಪ್ಲೇ

October 30, 2026
ಇಸ್ರೋದಲ್ಲಿ 61 ಹುದ್ದೆಗಳ ನೇಮಕಾತಿ: 10ನೇ ತರಗತಿ, ಐಟಿಐ ಪಾಸಾದವರಿಗೆ ಅವಕಾಶ
Vijaya Time

ಇಸ್ರೋದಲ್ಲಿ 61 ಹುದ್ದೆಗಳ ನೇಮಕಾತಿ: 10ನೇ ತರಗತಿ, ಐಟಿಐ ಪಾಸಾದವರಿಗೆ ಅವಕಾಶ

October 29, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.