ಸಾಮಾನ್ಯ ಸದಸ್ಯರ ನಿಂದನಾತ್ಮಕ ಹೇಳಿಕೆಗೆ ವಾಟ್ಸಪ್ ಗ್ರೂಪ್ ಅಡ್ಮಿನ್ ಇನ್ಮುಂದೆ ಜವಾಬ್ದಾರರಲ್ಲ! ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖ ಎಂದು ಕರೆಸಿಕೊಳ್ಳುವ ವಾಟ್ಸಾಪ್ ಗಳಲ್ಲಿ ಸಾಮಾನ್ಯ ಸದಸ್ಯನೊಬ್ಬ ಯಾವುದಾದರೂ ನಿಂದನಾತ್ಮಕ ಅಥವಾ ಬೇರೆ ಧರ್ಮದ ಭಾವನೆಗೆ ಧಕ್ಕೆ ತರುವಂತಹ ಪೋಸ್ಟ್ ಗಳನ್ನು ಮಾಡಿದ್ದಲ್ಲಿ ಗ್ರೂಪ್ ಅಡ್ಮಿನ್ ಪ್ರಶ್ನಾರ್ಹನಲ್ಲ ಎಂದು ಕೇರಳ ಹೈಕೋರ್ಟ್ ತಿಳಿಸಿದೆ. ವಾಟ್ಸಪ್ ಗ್ರೂಪಿನಲ್ಲಿ ಸಾಮಾನ್ಯ ಸದಸ್ಯನೊಬ್ಬ ಚೈಲ್ಡ್ ಫೋರ್ನೋಗ್ರಫಿ ಪ್ರಕರಣಕ್ಕೆ ಸಂಬಂಧಪಟ್ಟ ವಿಚಾರಣೆಯಲ್ಲಿ ಈ ನಿರ್ಣಯ ಕೈಗೊಂಡಿದೆ ಹಾಗೆ ಕೋರ್ಟ್ ಈ ನಿರ್ಧಾರವನ್ನ ತಿಳಿಸಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಗ್ರೂಪ್ ಅಡ್ಮಿನ್ ವಿರುದ್ಧ ಜಾರಿ ಮಾಡಲಾಗಿದ್ದರೂ ಕಾಯ್ದೆಯನ್ನ ಹೈಕೋರ್ಟ್ ರದ್ದು ಮಾಡಿದೆ.

ಸದಸ್ಯರಿಂದ ನಡೆಯುವ ಅಚಾತುರ್ಯಕ್ಕೆ ಮತ್ತು ಅವರು ಮಾಡುವ ಅಪರಾಧಕ್ಕೆ ಗ್ರೂಪ್ ಅಡ್ಮಿನ್ ಎಂದಿಗೂ ಜವಾಬ್ದಾರನಲ್ಲ ಎಂದು ಕೂಡ ಹೈಕೋರ್ಟ್ ತಿಳಿಸಿದೆ. ಒಂದು ಬಳಗದ ಅಡ್ಮಿನ್ ಕೇವಲ ಆ ಗ್ರೂಪಿಗೆ ಸದಸ್ಯರನ್ನು ಹಾಕುವ ಮತ್ತು ತೆಗೆದುಹಾಕುವ ಅಧಿಕಾರವನ್ನು ಮಾತ್ರ ಹೊಂದಿರುತ್ತಾರೆ. ಹಾಗಾಗಿ ಸದಸ್ಯರು ಮಾಡುವ ಎಲ್ಲಾ ತಪ್ಪಿಗೆ ಹೊಣೆ ಅಡ್ಮಿನ್ ಆಗಿರುವುದಿಲ್ಲ ಎಂದು ಈ ಹಿಂದೆ ಹೇಳಿದ ಬಾಂಬೆ ಹೈಕೋರ್ಟ್ ಆದೇಶವನ್ನು ಕೂಡ ಹೈಕೋರ್ಟ್ ಉಲ್ಲೇಖಿಸಿತು.
ವಾಟ್ಸಾಪ್ ಬಳಗದಲ್ಲಿ ಸದಸ್ಯರು ಏನು ಪೋಸ್ಟ್ ಮಾಡುತ್ತಾರೋ ಮತ್ತು ಏನು ಚರ್ಚಿಸುತ್ತಾರೋ ಅದರ ಬಗ್ಗೆ ಬೌದ್ಧಿಕ ನಿಯಂತ್ರಣ ಅಡ್ಮಿನ್ಗಳಿಗೆ ಇರುವುದಿಲ್ಲ. ಹಾಗಾಗಿ ಆತನೇಕೆ ಹೊಣೆಗಾರಾನಾಗಬೇಕು ಎಂದು ಕೋರ್ಟ್ ಪ್ರಶ್ನಿಸಿ ಹೇಳಿದೆ.

ಒಂದು ವಾಟ್ಸಪ್ ಗ್ರೂಪ್ ನಲ್ಲಿ ಸದಸ್ಯನೊಬ್ಬ ಕಳಿಸಿದ ಅಶ್ಲೀಲ ವಿಡಿಯೋ ಸಂಬಂಧ, ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಈ ಸಂಬಂಧ ಕುರಿತಾದ ಆರೋಪಿ ವಿರುದ್ಧ ಪೋಕ್ಸೋ ಕಾಯಿದೆ ಅಡಿ ಕೇಸು ದಾಖಲಿಸಿದ್ದರು. ಜೊತೆಗೆ ಆ ವಿಡಿಯೋದಲ್ಲಿ ಮಕ್ಕಳನ್ನ ಲೈಂಗಿಕ ತೃಷೆಗೆ ಬಳಸಿದ್ದ ಹಿನ್ನಲೆಯಲ್ಲಿ ಆ ಕೇಸು ಗಂಭೀರವಾಗಿತ್ತು. ಈ ವಿಚಾರ ಕೇರಳ ಹೈ ಕೋರ್ಟ್ ವಿಚಾರಣೆಯಲ್ಲಿ ವಾಟ್ಸಪ್ ಗ್ರೂಪ್ ಅಡ್ಮಿನ್ ಸದಸ್ಯರ ತಪ್ಪಿಗೆ ಗ್ರೂಪ್ ಅಡ್ಮಿನ್ ತಪ್ಪಿತಸ್ಥನಾಗಿರುವುದಿಲ್ಲ ಮತ್ತು ಹೊಣೆಗಾರನಾಗುವುದಿಲ್ಲ ಎಂಬ ಸಂದೇಶವನ್ನು ಪ್ರಕಟಿಸಿದೆ.
- ಮುಸ್ತಫಾ