- ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣ ಕೊಂಚ ರಿಲೀಫ್
- ಶಾಸಕ ಸ್ಥಾನಕ್ಕೆ ಸದ್ಯಕ್ಕಿಲ್ಲ ಕುತ್ತು
- ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯ ಭಾಗ್ಯವಿಲ್ಲ
Bengaluru: ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ (MLA Gali Janardhana Reddy) ಅವರಿಗೆ ತೆಲಂಗಾಣ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್ (Temporary relief) ಸಿಕ್ಕಿದ್ದು,
ವಿಶೇಷ ಸಿಬಿಐ ನ್ಯಾಯಾಲಯ ಇತ್ತೀಚೆಗೆ ವಿಧಿಸಿದ್ದ ಏಳು ವರ್ಷಗಳ ಜೈಲು ಶಿಕ್ಷೆಯನ್ನು (Imprisonment) ಈ ಹಂತದಲ್ಲಿ ಜಾರಿಗೊಳಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ತೀರ್ಪು (High Court verdict) ನೀ
ಡಿ ಜನಾರ್ದನ ರೆಡ್ಡಿಗೆ (Janardhana Reddy) ಷರತ್ತುಬದ್ಧ ಜಾಮೀನು ನೀಡಿದೆ.ರೆಡ್ಡಿಗೆ ಷರತ್ತುಬದ್ಧ ಜಾಮೀನು ನೀಡಿರುವ ಕೋರ್ಟ್, ತಲಾ 10 ಲಕ್ಷ ಮೌಲ್ಯದ (Worth 10 lakhs) ಇಬ್ಬರು ಶ್ಯೂರಿಟಿಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದೆ. ಅಲ್ಲದೇ, ಭಾರತ ಬಿಟ್ಟು ಹೋಗಲು (Leave India) ಅನುಮತಿ ಇರುವುದಿಲ್ಲ.
ಗಾಲಿ ಜನಾರ್ದನ ರೆಡ್ಡಿ ಅವರ ಪಾಸ್‌ಪೋರ್ಟ್ (Passport) ಅನ್ನು ಒಪ್ಪಿಸುವಂತೆಯೂ ಆದೇಶಿಸಿದೆ.
ಕಳೆದ ತಿಂಗಳು ಅಂದರೆ ಮೇ 6ರಂದು ಓಬಳಾಪುರಂ ಮೈನಿಂಗ್ ಕಂಪನಿಗೆ (Mining company) ಸಂಬಂಧಿಸಿದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯವು (CBI Court) ಅಂತಿಮ ತೀರ್ಪು ನೀಡಿ ಏಳು ವರ್ಷಗಳ ಶಿಕ್ಷೆ ವಿಧಿಸಿತ್ತು.ಜನಾರ್ದನ ರೆಡ್ಡಿ ಜತೆಗೆ,

ಶ್ರೀನಿವಾಸ್ ರೆಡ್ಡಿ, ವಿ.ಡಿ. ರಾಜಗೋಪಾಲ್ (Srinivasa Reddy, V.D. Rajagopal) ಮತ್ತು ಅಲಿ ಖಾನ್ ಕೂಡ (Khan) ತಪ್ಪಿತಸ್ಥರೆಂದು ಸಾಬೀತಾಗಿತ್ತು.
ತೀರ್ಪು ಪ್ರಶ್ನಿಸಿ (Question the judgment) ರೆಡ್ಡಿ ಹೈಕೋರ್ಟ್ ಮೊರೆ ಹೋಗಿದ್ದರು.ಈ ಅರ್ಜಿಯ ವಾದಗಳನ್ನು ಮಂಗಳವಾರ ಆಲಿಸಿದ್ದ ಕೋರ್ಟ್ ತೀರ್ಪನ್ನು (Court decision) ಇಂದಿಗೆ ಕಾಯ್ದಿರಿಸಿತ್ತು.
ನ್ಯಾಯಮೂರ್ತಿ ಕೆ. ಲಕ್ಷ್ಮಣ್ ಅವರು ಸಿಬಿಐ ನ್ಯಾಯಾಲಯದ ತೀರ್ಪನ್ನು ತಾತ್ಕಾಲಿಕವಾಗಿ ತಡೆಹಿಡಿದು ಗಾಲಿ ಜನಾರ್ದನ ರೆಡ್ಡಿಗೆ (Gali Janardhana Reddy) ಜಾಮೀನು ನೀಡಿ ತೀರ್ಪು ನೀಡಿದ್ದಾರೆ
ಆದರೆ ಇದರಲ್ಲಿ ಮತ್ತೊಂದು ಟ್ವಿಸ್ಟ್ ಇದ್ದು, ಜಾಮೀನು ಸಿಕ್ಕರೂ ಜನಾರ್ದನ ರೆಡ್ಡಿ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಿಂದ (Parappana Agrahara Jail) ಬಿಡುಗಡೆಯ ಭಾಗ್ಯವಿಲ್ಲದಾಗಿದೆ.ತೆಲಂಗಾಣ ಹೈಕೋರ್ಟ್ (Telangana High Court) ಇಂದು ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಆದರೂ ರೆಡ್ಡಿ ಅವರು ಜೈಲಿನಿಂದ ರಿಲೀಸ್ ಆಗಲ್ಲ. ಯಾಕಂದ್ರೆ ಬೆಂಗಳೂರು ಸಿಬಿಐನಿಂದ (Galuru CBI) ಬೇರೆ ಕೇಸ್‌ಗೆ ಸಂಬಂಧಪಟ್ಟಂತೆ ಸಿಬಿಐ ತನಿಖೆ ನಡೆಯುತ್ತಿದೆ.
ಬೆಂಗಳೂರು ಸಿಬಿಐ, ಬೇಲೆಕೇರಿ (CBI, Belekeri) ಬಂದರು ಅದಿರು ರಫ್ತು ಕೇಸ್‌ನ ತನಿಖೆ ನಡೆಸುತ್ತಿದೆ.
ಬಂದರಿನಲ್ಲಿ ಅದಿರು ಅಕ್ರಮ ರಫ್ತು ಕೇಸ್ನಲ್ಲಿ (Illegal export case) ಜನಾರ್ದನ ರೆಡ್ಡಿ ಅವರನ್ನು ಕೋರ್ಟ್ಗೆ ಹಾಜರುಪಡಿಸಲಾಗಿದೆ.
ಬೆಂಗಳೂರು ಸಿಬಿಐ (Bangalore CBI) ಅಧಿಕಾರಿಗಳು ಹೈದರಾಬಾದ್‌ನ ಚಂಚಲಗೂಡ ಜೈಲಿಂದ (Chanchalguda Jail, Hyderabad.) ಬಾಡಿ ವಾರೆಂಟ್ ಮೇಲೆ ಜನಾರ್ದನ ರೆಡ್ಡಿ ಅವರನ್ನ ಬೆಂಗಳೂರಿಗೆ (Bangalore) ಕರೆ ತಂದಿದೆ.
ಸದ್ಯ ಇದೇ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅವರು ಬೆಂಗಳೂರು ಜೈಲಿನಲ್ಲಿದ್ದಾರೆ (Bangalore jail.) .
ಈ ಪ್ರಕರಣದಲ್ಲಿ ಇನ್ನೂ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಸಿಕ್ಕಿಲ್ಲ. ಓಬಳಾಪುರಂ ಮೈನಿಂಗ್ (Obalapuram Mining) ಕೇಸ್ನಲ್ಲಿ ತಡೆಯಾಜ್ಞೆ ಸಿಕ್ರೂ ಬಿಡುಗಡೆ ಭಾಗ್ಯ ಮಾತ್ರ ಇಲ್ಲ.
ಇದನ್ನು ಓದಿ : ಕ್ಷಮೆ ಕೇಳದ ಹೊರತು Thug Life ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗುವುದಿಲ್ಲ: KFCC ಸ್ಪಷ್ಟನೆ
ಬೇಲೆಕೇರಿ ಕೇಸ್ನಲ್ಲೂ (Belekeri case) ಜಾಮೀನು ಸಿಕ್ಕರೆ ಮಾತ್ರ ರೆಡ್ಡಿ ರಿಲೀಸ್ ಆಗುವ ಸಾಧ್ಯತೆ ಇದೆ.