Visit Channel

ಯುವ ಜನತೆಯಲ್ಲಿ ಕಾಡುತ್ತಿರುವ ಒಸಿಡಿ ಸಮಸ್ಯೆ!

depressed

ಒಸಿಡಿ ಎಂಬ ರೋಗ ಇದೆ ಎಂಬುದು ಹಲವು ಜನರಿಗೆ ಗೊತ್ತೇ ಇಲ್ಲ. ಆದರೆ ಅದರ ರೋಗಲಕ್ಷಣಗಳನ್ನು ಹೇಳಿದರೆ ಮಾತ್ರ ಇದೂ ಒಂದು ರೋಗ ಎಂಬುದು ತಿಳಿಯುತ್ತದೆ. ಹಾಗಾದ್ರೆ ಒಸಿಡಿ ಅಂದರೆ ಏನು ? ಇದೊಂದು ಮಾನಸಿಕ ಗೀಳು ,ಇದೊಂದು ಮಾನಸಿಕ ಅಸ್ವಸ್ಥತೆ. ಇದನ್ನು OCD (Obsessive compulsive disorder) ಒಬ್ಸೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್ ಎನ್ನುತ್ತಾರೆ. ವ್ಯಕ್ತಿಯು ತನ್ನ ನಿಯಂತ್ರಣಕ್ಕೂ ಮೀರಿ ಕೆಲವು ಕೆಲಸಗಳನ್ನು ಪದೇ ಪದೇ ಪುನರಾವರ್ತಿಸುತ್ತಾನೆ. ಬೇಡದ ಯೋಚನೆಗಳು ಮತ್ತೆ ಮತ್ತೆ ತಲೆಗೆ ಹೊಕ್ಕುತ್ತದೆ.


ಈ ರೋಗದ ಲಕ್ಷಣಗಳನ್ನು ನೋಡುವುದಾದರೆ ದಿನನಿತ್ಯ ನಾವು, ಪದೇ ಪದೇ ದೇವರಿಗೆ ನಮಸ್ಕಾರ ಮಾಡುವವರು, ಕೈ ತೊಳೆದುಕೊಳ್ಳುವವರನ್ನು, ಹೇಳಿದ ಮಾತನ್ನೇ ಮತ್ತೆ ಮತ್ತೆ ಹೇಳುವವರನ್ನು, ಬಾಗಿಲು ಹಾಕಿದೆಯೋ ಇಲ್ಲವೋ ಎಂದು ಆತಂಕ ಪಡುವವರನ್ನು, ಬ್ಯಾಂಕಿನಲ್ಲಿ ನೋಟನ್ನು ಮತ್ತೆ ಮತ್ತೆ ಎಣಿಸುವವರನ್ನೂ ನೋಡಿರುತ್ತೇವೆ. ಇನ್ನೂ ಕೆಲವರಿಗೆ ದೇವರನ್ನು ಅಥವಾ ಪ್ರೀತಿ ಪಾತ್ರರನ್ನು ನೋಡಿದ ಕೂಡಲೇ ಮನಸ್ಸಿನಲ್ಲಿ ಅವಾಚ್ಯ ಶಬ್ದಗಳು ಮೂಡುತ್ತದೆ. ಆದ ಕಾರಣ ತಪ್ಪಾಯಿತು ತಪ್ಪಾಯಿತು ಎಂದು ಅನೇಕ ಬಾರಿ ಕೈ ಮುಗಿಯುತ್ತಾರೆ. ಪ್ರೀತಿ ಪಾತ್ರರ ಬಗ್ಗೆಯೇ ಬೇಡದಿದ್ದರೂ ನಕಾರಾತ್ಮಕ ಭಾವನೆಗಳು ಮೂಡುವುದಲ್ಲಾ ಎಂದು ಗೊಂದಲ ಕಾಡುತ್ತದೆ.

disorder


ರೋಗವನ್ನು ಹೇಗೆ ಪತ್ತೆ ಮಾಡಬಹುದು ?
• ಬಲವಂತ ಹಾಗೂ ಗುಪ್ತ ಆಲೋಚನೆಗಳು ಯಾವುದೇ ಸೂಚನೆ ನೀಡದೆ ನಿಮ್ಮ ಸುಪ್ತ ಮನಸ್ಸಿನೊಳಗೆ ವಕ್ಕರಿಸುವುದು. ಪ್ರತಿಯೊಬ್ಬರಿಗೂ ಇಂತಹ ಆಲೋಚನೆಗಳು ಬರುವುದು. ಆದರೆ ಇದನ್ನು ನಿಯಂತ್ರಿಸಲು ಸಾಧ್ಯವಾಗದೆ ಇರುವಾಗ ಅದು ಒಸಿಡಿ ಆಗಿ ಪರಿವರ್ತನೆ ಆಗುವುದು.
• ಗುಪ್ತ ಆಲೋಚನೆಗಳಿಂದ ಕೆಲವರಿಗೆ ತುಂಬಾ ಪಶ್ಚಾತ್ತಾಪ ಅಥವಾ ನಕಾರಾತ್ಮಕ ಭಾವನೆಗಳು ಬರುವುದು ಇದೆ. ಹೀಗಾಗಿ ಅವರು ಇದನ್ನು ತಡೆಯುವ ಸಲುವಾಗಿ ಕೆಲವು ಜನರು ಹಾಗೂ ಸ್ಥಳಗಳಿಗೆ ಹೋಗಲು ಹಿಂಜರಿಯುವರು ಅಥವಾ ಕಡೆಗಣಿಸುವರು.
• ಕೆಲವು ಜನರಲ್ಲಿ ಲೈಂಗಿಕ ಆಲೋಚನೆಗಳು, ಧಾರ್ಮಿಕ ವಿಚಾರದ ಬಗ್ಗೆ ಅಸಮಾಧಾನ ಅಥವಾ ಹಿಂಸಾತ್ಮಕ ಆಲೋಚನೆಗಳು ಬರಬಹುದು. ಇಂತಹ ಒಸಿಡಿ ಇರುವ ಜನರು ತಮ್ಮ ಗುಪ್ತ ಆಲೋಚನೆಗಳನ್ನು ದೂರ ಮಾಡಲು ಪ್ರಯತ್ನಿಸುವರು.

• ಕೀಟಾಣುಗಳಿಂದ ಬರುವ ರೋಗದ ಬಗ್ಗೆ ಭೀತಿಯಾಗುವುದು
• ಅತಿಯಾಗಿ ಕೈಗಳನ್ನು ತೊಳೆಯುವುದು
• ಬೇರೆ ಜನರನ್ನು ಭೇಟಿ ಮಾಡುವುದು ಅಥವಾ ಸ್ಪರ್ಶಿಸುವುದನ್ನು ಇವರು ಕಡೆಗಣಿಸುವರು.
• ಗುಪ್ತ ಆಲೋಚನೆಗಳು
ಒಸಿಡಿಗೆ ಯಾವುದೆಲ್ಲ ಕಾರಣಗಳಿವೆ ?
• ಅನುವಂಶೀಯತೆ
• ಮೆದುಳಿನಲ್ಲಿನ ರಾಸಾಯನಿಕ ಅಸಮತೋಲನ
• ಸಣ್ಣ ವಯಸ್ಸಿನಿಂದಲೂ ಕೆಲಸದಲ್ಲಿ ಬೆಳಸಿಕೊಂಡ ಅತಿಯಾದ ಅಚ್ಚುಕಟ್ಟುತನ, ಸ್ವಚ್ಛತೆ, ಬೆಳೆಯುತ್ತಾ ಒಸಿಡಿಗೆ ಕಾರಣವಾಗಬಹುದು.
• ಜೀವನದ ಹಲವು ಪ್ರಮುಖ ಬದಲಾವಣೆಗಳು ಉದಾಹರಣೆಗೆ ಹೊಸ ಕೆಲಸ, ಹೆಚ್ಚಿದ ಜವಾಬ್ದಾರಿ ಕಾಳಜಿ.
• ಕೆಲವು ಅನಿರೀಕ್ಷಿತ ಘಟನೆಗಳು : ಉದಾಹರಣೆಗೆ ತಿಳಿಯದೆ ಜಿರಳೆ ಔಷಧ ಮುಟ್ಟಿದ ನಂತರ ಅಸಹ್ಯ ಹಾಗು ವಿಷ ಎಂಬ ಭಯದಿಂದ ಪದೇ ಪದೇ ಕೈ ತೊಳೆದುಕೊಳ್ಳುವುದು.

washing hands

ಒಸಿಡಿಗೆ ಚಿಕಿತ್ಸೆಗಳು :
• ಒಸಿಡಿಯ ತೀವ್ರತೆಗೆ ಅನುಗುಣವಾಗಿ ಔಷಧ, ಚಿಕಿತ್ಸೆ ನೀಡಲಾಗುತ್ತದೆ.
• ಸಿಬಿಟಿ (CBT) cognitive behavioral therapy- ಇದರಿಂದ ಮನಸ್ಸಿಗೆ ಬೇಡದ ಆಲೋಚನೆಗಳು ಬಾರದಂತೆ, ಮೈ ಮನಸ್ಸು ಹತೋಟಿಗೆ ತರಬಹುದು.
• ಆಪ್ತಸಲಹೆ ಸಹಕಾರಿ.
• ಧ್ಯಾನ, ಸಂಗೀತ ಕೂಡ ಆತಂಕ, ಒತ್ತಡ ನಿವಾರಿಸುವಲ್ಲಿ ಪರಿಣಾಮಕಾರಿ.

Latest News

Bilkis Bano
ದೇಶ-ವಿದೇಶ

ಬಿಲ್ಕಿಸ್ ಬಾನೊ ಪ್ರಕರಣ ; ಅಪರಾಧಿಗಳನ್ನು ಬಿಡುಗಡೆ ಮಾಡದಂತೆ 6,000 ಮಾನವ ಹಕ್ಕುಗಳ ಕಾರ್ಯಕರ್ತರು, ಇತಿಹಾಸಕಾರರಿಂದ ಸುಪ್ರೀಂಗೆ ಪತ್ರ!

ವಿದ್ವಾಂಸರು, ಚಲನಚಿತ್ರ ನಿರ್ಮಾಪಕರು, ಪತ್ರಕರ್ತರು ಮತ್ತು ಮಾಜಿ ಅಧಿಕಾರಗಳು ಈ ಪತ್ರಕ್ಕೆ ಸಹಿ ಹಾಕಿ, ಅಪರಾಧಿಗಳನ್ನು ಬಿಡುಗಡೆ ಮಾಡದಂತೆ ಕೋರಿದ್ದಾರೆ.

JK
ದೇಶ-ವಿದೇಶ

ಜಮ್ಮು-ಕಾಶ್ಮೀರದಲ್ಲಿ ಬೇರೆ ರಾಜ್ಯದವರು ಮತ ಚಲಾಯಿಸಬಹುದು ; ಕಣಿವೆ ರಾಜ್ಯದ ಹೊಸ ಚುನಾವಣಾ ನಿಯಮಗಳ ವಿವರ ಇಲ್ಲಿದೆ

ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸಿಸುವ ಅಥವಾ ಕೆಲಸ ಮಾಡುವ ಸ್ಥಳೀಯರಲ್ಲದವರು ಸೇರಿದಂತೆ ಯಾವುದೇ ಭಾರತೀಯ ನಾಗರಿಕರು ತಮ್ಮ ಹೆಸರನ್ನು ಮತದಾನ ಪಟ್ಟಿಯಲ್ಲಿ ಸೇರಿಸಬಹುದು.

Dolo 650
ದೇಶ-ವಿದೇಶ

ಡೋಲೋ 650 ಮಾತ್ರೆ ಬರೆಯಲು ವೈದ್ಯರಿಗೆ 1000 ಕೋಟಿ ರೂ. ಲಂಚ! : ಸುಪ್ರೀಂಗೆ ದೂರು

ಡೋಲೋ 650 ಮಾತ್ರೆ ಉತ್ಪಾದಕ ಕಂಪನಿಯೂ ಅಂದಾಜು 1000 ಕೋಟಿ ರೂಪಾಯಿಗಳನ್ನು ವೈದ್ಯರಿಗೆ ನೀಡಿದೆ ಎಂದು ವೈದ್ಯಕೀಯ ಮಾರಾಟ ಪ್ರತಿನಿಧಿಗಳ ಸಂಘವು ಆರೋಪಿಸಿದೆ.

Kannada
ಮನರಂಜನೆ

2000-2010ರ ಸಾಲಿನ ಕನ್ನಡ ಚಿತ್ರರಂಗದ ಟಾಪ್ 12 ಚಿತ್ರಗಳು ಯಾವುವು ಗೊತ್ತಾ? ಇಲ್ಲಿದೆ ಓದಿ

ಆ ಕಾಲಕ್ಕೆ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದ್ದ ಈ ಸಿನಿಮಾ ಹಲವು ಕೇಂದ್ರಗಳಲ್ಲಿ ಯಶಸ್ವಿಯಾಗಿ 25 ವಾರಕ್ಕೂ ಅಧಿಕ ಸಮಯ ಪ್ರದರ್ಶನ ಕಂಡಿತ್ತು.