ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ (remedy for constipation in children) ಕಾಣಿಸಿಕೊಳ್ಳುತ್ತಿದೆ. ಮಲಬದ್ಧತೆಯಿಂದ ಮಕ್ಕಳ ಬೆಳವಣಿಗೆ ಹಾಗೂ ಇತರ ಚಟುವಟಿಕೆಗಳ ಮೇಲೆ ಗಂಭೀರ ಬೀರುತ್ತೆ.

ಮಲಬದ್ಧತೆಗೆ ಪ್ರಮುಖ ಕಾರಣಗಳೇನು?
ಮಕ್ಕಳು ಚೀಸ್, ಬಿಳಿ ಬ್ರೆಡ್ (White bread) , ಕೆಂಪು ಮಾಂಸ ಹಾಗೂ ಸಂಸ್ಕರಿಸಿದ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಮಲಬದ್ಧತೆ ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ.
ಇಂತಹ ಆಹಾರಗಳಲ್ಲಿ ನಾರಿನಂಶ ಕಡಿಮೆ ಇರಬಹುದು. ಜೊತೆಗೆ, ದೈಹಿಕ ಚಟುವಟಿಕೆ ಕಡಿಮೆ ಇರುವುದು ಮತ್ತು ನೀರಿನ ಕೊರತೆಯೂ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಬಹುದು.
ಮಕ್ಕಳಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು
ಮಲವಿಸರ್ಜನೆ ಮಾಡಲು ಕಷ್ಟಪಡುವುದು, ಗಟ್ಟಿಯಾದ ಅಥವಾ ಒಣ ಮಲ, ಹೊಟ್ಟೆನೋವು, ಮಲವಿಸರ್ಜನೆ ವೇಳೆ ನೋವಿನಿಂದ ಅಳುವುದು ಮತ್ತು ಹಸಿವು
ಕಡಿಮೆಯಾಗುವುದು ಮಲಬದ್ಧತೆಯ ಪ್ರಮುಖ ಲಕ್ಷಣಗಳಾಗಿವೆ. ನೋವು ಉಂಟಾಗಬಹುದು ಎಂಬ ಭಯದಿಂದ ಕೆಲವು ಮಕ್ಕಳು ಶೌಚಾಲಯಕ್ಕೆ ಹೋಗುವುದನ್ನು ತಪ್ಪಿಸುತ್ತಾರೆ.
ಇದರಿಂದ ಸಮಸ್ಯೆ ಮತ್ತಷ್ಟು (remedy for constipation in children) ಹೆಚ್ಚಾಗಬಹುದು.

ಮಲಬದ್ಧತೆ ತಡೆಯಲು ಏನು ಮಾಡಬೇಕು?
ಮಕ್ಕಳ ಆಹಾರದಲ್ಲಿ ಹಣ್ಣುಗಳು, ತರಕಾರಿಗಳು ಮತ್ತು ನಾರಿನಂಶ ಹೆಚ್ಚಿರುವ ಆಹಾರಗಳನ್ನು ಸೇರಿಸಬೇಕು. ವಯಸ್ಸಿಗೆ ತಕ್ಕಂತೆ ಸಾಕಷ್ಟು ನೀರು ಕುಡಿಯುವ ಅಭ್ಯಾಸ
ಬೆಳೆಸಬೇಕು. ಪ್ರತಿದಿನ ನಿಯಮಿತ ಸಮಯದಲ್ಲಿ ಶೌಚಾಲಯಕ್ಕೆ ಹೋಗುವಂತೆ ಪ್ರೋತ್ಸಾಹಿಸುವುದರ ಜೊತೆಗೆ ಆಟ ಮತ್ತು ದೈಹಿಕ ಚಟುವಟಿಕೆಗಳಿಗೆ ಅವಕಾಶ ನೀಡಬೇಕು.
ಆರೋಗ್ಯ ಸಮಸ್ಯೆಗಳ ಬಗ್ಗೆಯೂ ಗಮನವಿರಲಿ
ಶಾಲೆ ಆರಂಭವಾಗುವಾಗ ಉಂಟಾಗುವ ಆತಂಕ, ಮನೆ ಬದಲಾವಣೆಯಂತಹ ಪರಿಸ್ಥಿತಿಗಳು ಮಕ್ಕಳ ಮಲವಿಸರ್ಜನೆಯ ಅಭ್ಯಾಸದ ಮೇಲೆ ಪರಿಣಾಮ
ಬೀರಬಹುದು. ಹೈಪೋಥೈರಾಯ್ಡಿಸಮ್‌ನಂತಹ ಕೆಲವು ಆರೋಗ್ಯ ಸಮಸ್ಯೆಗಳೂ ಮಲಬದ್ಧತೆಗೆ ಕಾರಣವಾಗಬಹುದು.
ಮಕ್ಕಳಲ್ಲಿ ಮಲಬದ್ಧತೆ ದೀರ್ಘಕಾಲ ಮುಂದುವರಿದರೆ ಅಥವಾ ತೀವ್ರ ಹೊಟ್ಟೆನೋವು, ವಾಂತಿ, ಹೊಟ್ಟೆ ಊತ ಅಥವಾ ಮಲದಲ್ಲಿ ರಕ್ತ ಕಾಣಿಸಿಕೊಂಡರೆ
ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ವೈದ್ಯರ ಸಲಹೆಯಿಲ್ಲದೆ ಮಕ್ಕಳಿಗೆ ಮಲವಿಸರ್ಜನೆ ಸುಲಭಗೊಳಿಸುವ ಔಷಧಿಗಳನ್ನು ನೀಡಬಾರದು.
ಇದನ್ನು ಓದಿ : https://vijayatimes.com/recruitment-in-railway-department/