ಉತ್ತರಪ್ರದೇಶದ(Uttarpradesh) ಯೋಗಿ ಆದಿತ್ಯನಾಥ್(Yogi Adityanath) ಸರ್ಕಾರ ಕಳೆದ ಒಂದು ವಾರದ ಹಿಂದೆ ಅಕ್ರಮವಾಗಿ ಸೇರಿಸಿಕೊಂಡಿದ್ದ ಎಲ್ಲಾ ಧ್ವನಿವರ್ಧಕಗಳನ್ನು(Loudspeakers) ತೆರುವುಗೊಳಿಸಲು ಸೂಚನೆ ನೀಡುವ ಮುಖೇನ ಅಕ್ರಮವಾಗಿ ಹಾಕಿಕೊಂಡಿದ್ದ ಧ್ವನಿವರ್ಧಕಗಳನ್ನು ತೆರೆವುಗೊಳಿಸಿದರು.

ಈ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೂ ಯೋಗಿ ಸರ್ಕಾರ ಮಾಡಿದಂತೆ ನಮ್ಮಲ್ಲೂ ಮಾಡಬೇಕು ಎಂಬ ಆಗ್ರಹ ರಾಜಕೀಯ ವಲಯಗಳಿಂದ ಕೇಳಿಬಂದಿತು. ಧ್ವನಿವರ್ಧಕಗಳನ್ನು ಶೀಘ್ರವೇ ತೆರುವುಗೊಳಿಸಬೇಕು ಎಂಬ ಒತ್ತಾಯಗಳನ್ನು ಬಿಜೆಪಿ ನಾಯಕರು ಒತ್ತಾಯಿಸಿದರೇ, ಅತ್ತ ಕಾಂಗ್ರೆಸ್ ನಾಯಕರು ಈ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕಾಂಗ್ರೆಸ್-ಬಿಜೆಪಿ ಪಕ್ಷಗಳ ನಡುವೆ ಮಾತಿನ ಜಟಾಪಟಿಯೇ ನಡೆಯುತ್ತಿದೆ. ಮಸೀದಿಗಳಲ್ಲಿ ಧ್ವನಿವರ್ಧಕಗಳು ನಿಷೇಧಿಸದಿದ್ದರೆ, ನಾವು ದಿನಕ್ಕೆ 5 ಬಾರಿ ಹನುಮಾನ್ ಚಾಲಿಸಾ ಪಠನೆ ಮಾಡುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದರು.
ಈ ಹೇಳಿಕೆಯ ಬೆನ್ನಲ್ಲೇ ಆರೋಪ-ಪ್ರತ್ಯಾರೋಪಗಳು ವ್ಯಾಪಕವಾಗಿ ಹರಿದಾಡುತ್ತಿರುವ ನಡುವೆ ಕಾಂಗ್ರೆಸ್ ಎಂಎಲ್ಸಿ ಬಿ.ಕೆ ಹರಿಪ್ರಸಾದ್(BK Hariprasad) ಸುಪ್ರಭಾತ ಅಭಿಯಾನ ನಡೆಸುವವರು ಉಗ್ರರು ಎಂದು ಹೇಳಿಕೆ ಕೊಟ್ಟ ಬಳಿಕ ಬಿಜೆಪಿ ಶಾಸಕ(BJP MLA) ಎಂ.ಪಿ ರೇಣುಕಾಚಾರ್ಯ(MP Renuakcharya) ಕಿಡಿಕಾರಿದ್ದು, ಹಾಗಾದ್ರೆ ಬಿ.ಕೆ ಹರಿಪ್ರಸಾದ್ ನಿಮ್ಮ ಪ್ರಕಾರ ಸುಪ್ರಭಾತ ಅಭಿಯಾನ ನಡೆಸುವವರು ಉಗ್ರರಾದರೆ, ಬಾಂಬ್ ಹಾಕುವವರು ದೇಶಾಪ್ರೇಮಿಗಳಾ? ಎಂದು ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ.