ರಾಜ್ಯಾದ್ಯಂತ ಕೇಸರಿ ಮತ್ತು ಹಿಜಾಬ್ ವಿವಾದ ಹೆಚ್ಚುತ್ತಿರುವ ಬೆನ್ನಲ್ಲೇ ಹಲವು ರಾಜಕಾರಣಿಗಳು ಹಲವು ರೀತಿಯಲ್ಲಿ ತಮ್ಮ ಹೇಳಿಕೆಗಳನ್ನು ನೀಡುತ್ತಿದ್ದು, ಈ ಬಗ್ಗೆ ರೇಣುಕಾಚಾರ್ಯ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದು, ,ಪಾಕಿಸ್ತಾನದಲ್ಲಿ ಇದೇ ರೀತಿ ವರ್ತಿಸಿದರೆ ಶೂಟ್ ಮಾಡಿ ಬಿಸಾಕುತ್ತಾರೆ. ಇಲ್ಲಿನ ಅಲ್ಪಸಂಖ್ಯಾತರನ್ನು ಪಾಕಿಸ್ತಾನದವರು ನಂಬಲ್ಲ. ನಾವೇನಾದರೂ ಅಲ್ಪಸಂಖ್ಯಾತರಿಗೆ ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಿದ್ದೇವಾ?.
ವಿದ್ಯಾರ್ಥಿಗಳ ಮನಸ್ಸಲ್ಲಿ ಸಂಘರ್ಷ ಹುಟ್ಟುಹಾಕಲು ಷಡ್ಯಂತ್ರ ರೂಪಿಸಲಾಗಿದೆ. ಇದರಲ್ಲಿ ಉಗ್ರಗಾಮಿ ಹಾಗೂ ಭಯೋತ್ಪಾದಕ ಸಂಘಟನೆಗಳ ಕೈವಾಡ ಇದೆ. ರಾಜ್ಯದಲ್ಲಿ ಹಿಜಾಬ್ ವಿಚಾರ ಮುಂದಿಟ್ಟುಕೊಂಡು ಸಂಘರ್ಷಕ್ಕೆ ಎಡಮಾಡಿ ಕೊಡಲು ಕಾಂಗ್ರೆಸ್ ನಾಯಕರು ಷಡ್ಯಂತ್ರ ರೂಪಿಸಿದ್ದಾರೆ. ಇದಕ್ಕೆ ಅವಕಾಶ ಕೊಡುವುದಿಲ್ಲ. ಹಿಜಾಬ್ ವಿಚಾರದಲ್ಲಿ ರಾಜಕಾರಣ ಮಾಡಿದವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಪಾಕಿಸ್ತಾನಕ್ಕೆ ಕಳುಹಿಸಿಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ವಿವಾದ ರಾಷ್ಟ್ರ ಮಟ್ಟಕ್ಕೆ ಹೋಗಿದೆ ಎಂದರೆ ಇದರ ಇಂದೆ ದೊಡ್ಡ ಷಡ್ಯಂತ್ರ ಇದೆ. ಯು.ಟಿ. ಖಾದರ್, ಜಮೀರ್ ಅಹಮದ್ ಅಮಾಯಕ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ ವಿದ್ಯಾರ್ಹತೆಯಿಂದ ವಂಚನೆ ಮಾಡುವ ಹುನ್ನಾರ ರೂಪಿಸಿದ್ದಾರೆ. ಸಂಘರ್ಷ ಆದರೆ ಕಾಂಗ್ರೆಸ್ಸಿಗರೇ ಕಾರಣ. ಕರ್ನಾಟಕ ತಾಲಿಬಾನ್ ಆಗಲು ಬಿಡಲ್ಲ. ವೋಟಿಗೋಸ್ಕರ ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ಎತ್ತಿಕಟ್ಟಿದ್ದೀರಾ? ಎಂದು ಅವರು ಆರೋಪಿಸಿದ್ದಾರೆ.