Bengaluru : ಕನ್ನಡ ಚಿತ್ರರಂಗದ ಪವರ್‌ಸ್ಟಾರ್ ನಟ ಪುನೀತ್ ರಾಜ್‌ಕುಮಾರ್ (rerelease Puneeth movie Shivratri) ಅವರು ನಟಿಸಿದ ರಾಜಕುಮಾರ ಚಿತ್ರವನ್ನು ಮಹಾಶಿವರಾತ್ರಿ ಹಬ್ಬದ ಜಾಗರಣೆಗೆ ವಿಶೇಷ ಪ್ರದರ್ಶನ ನೀಡಲು ಯೋಜಿಸಲಾಗಿದೆ.

ಮಹಾಶಿವರಾತ್ರಿ ಹಬ್ಬ ಎಂದೇ ಕೂಡಲೇ ಪ್ರತಿಯೊಬ್ಬರಿಗೂ ಮೊದಲು ನೆನಪಿಗೆ ಬರುವುದು ಜಾಗರಣೆ! ಹೌದು, ಹಬ್ಬದ ಪ್ರಯುಕ್ತ ಅಂದು ಜಾಗರಣೆ ಮಾಡುವ ಮೂಲಕ ಶಿವರಾತ್ರಿ ಹಬ್ಬವನ್ನು ನಾಡಿನೆಲ್ಲೆಡೆ ಆಚರಣೆ ಮಾಡಲಾಗುತ್ತದೆ.
ಈ ಪೈಕಿ ಅನೇಕರು ದೇವಸ್ಥಾನಕ್ಕೆ ತೆರಳಿ, ಭಗವಂತನ ನಾಮಸ್ಮರಣೆ ಮಾಡುವ ಮೂಲಕ ಜಾಗರಣೆ ಮಾಡುತ್ತಾರೆ. ಇನ್ನು ಕೆಲವರು ಚಿತ್ರಮಂದಿರಗಳಿಗೆ ರಾತ್ರಿ ವೇಳೆ ನಿಗದಿಯಾಗಿರುವ ಶೋಗೆ ಹೋಗಿ,
ಸಿನಿಮಾ ನೋಡುತ್ತಾ ಜಾಗರಣೆ ಆಚರಿಸುತ್ತಾರೆ. ಇದೀಗ ಈ ಆಸಕ್ತಿ ಕೊಂಚ ಹೆಚ್ಚಾಗಿದ್ದು, ರಾತ್ರಿ ವೇಳೆ ಇರುವ ಶೋಗೆ ಹೋಗಲು ಅನೇಕರು ಆಶಯ ವ್ಯಕ್ತಪಡಿಸಿದ್ದಾರೆ.

ಅದಕ್ಕೆ ಅನುಗುಣವಾಗಿ ಈಗ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ರಾಜಕುಮಾರ ಚಿತ್ರ ಪ್ರದರ್ಶನ ಕಾಣಲು ಸಜ್ಜಾಗಿದೆ, ರಾಜಕುಮಾರ ಚಿತ್ರ ಕನ್ನಡ ಚಿತ್ರರಂಗದಲ್ಲಿ ೧೦೦ ದಿನಗಳನ್ನು ಪೂರೈಸಿ,
ಅತ್ಯಂತ ಯಶಸ್ವಿ ಚಿತ್ರಗಳ ಸಾಲುಗಳಿಗೆ ಸೇರ್ಪಡೆಯಾದ ಚಿತ್ರವಾಗಿದೆ.ಶಿವರಾತ್ರಿ ದಿನದಂದು ಸಿನಿಮಾವನ್ನು ಪ್ರದರ್ಶನ ನೀಡಲು ವಿತರಕರು ಈ ಹಿಂದೆ ಹಿಟ್ (Hit) ಆದ ಚಿತ್ರಗಳನ್ನು ಪ್ರದರ್ಶನ ಪಡಿಸಿ ಉತ್ತಮ ಕಲೆಕ್ಷನ್ (Collection)ಮಾಡಿದ್ದರು.
ಸದ್ಯ ಅದರಂತೆ ಈ ಬಾರಿಯೂ ಕೂಡ ಚಿತ್ರಮಂದಿರಗಳಲ್ಲಿ ಒಳ್ಳೆಯ ಚಿತ್ರಗಳನ್ನು ಪ್ರದರ್ಶನ ಪಡಿಸುವ ಮೂಲಕ ಜನರು ಶಿವರಾತ್ರಿ ಹಬ್ಬವನ್ನು ಆಚರಿಸುವಂತೆ ಮಾಡಿದ್ದಾರೆ.
ಇದನ್ನು ಓದಿ: “ಉತ್ತರ ಕೊಡಿ ರೂಪ ಅವ್ರೆ” ಎಂಬ ಹ್ಯಾಷ್ ಟ್ಯಾಗ್ ಬಳಸಿ ಡಿ.ರೂಪಾಗೆ 9 ಪ್ರಶ್ನೆಗಳನ್ನು ಕೇಳಿದ ರೋಹಿಣಿ ಅಭಿಮಾನಿಗಳು

ಫೆ,೧೯ ರ ಶನಿವಾರ ರಾತ್ರಿ ಅಂದ್ರೆ ಭಾನುವಾರ ೧೨:೩೦ ರ ವೇಳಗೆ ಸರಿಯಾಗಿ ಕನ್ನಡ ಚಿತ್ರರಂಗದ ಪವರ್ ಸ್ಟಾರ್ (Power star), ಅಪ್ಪು, ನಟ ಪುನೀತ್ ರಾಜಕುಮಾರ್(Puneeth Rajkumar) ನಟನೆಯ
ಇಂಡಸ್ಟ್ರಿ ಹಿಟ್ ಚಿತ್ರ ರಾಜಕುಮಾರ ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಇದು ಯಾವ ಚಿತ್ರಮಂದಿರಗಳಲ್ಲಿ ಏರ್ಪಡಿಸಲಾಗಿದೆ ಮತ್ತು ಯಾವ ನಗರಗಳಲ್ಲಿ ಮಾಡಲಾಗಿದೆ ಎಂಬ ಮಾಹಿತಿಯನ್ನು ತಿಳಿಯುವುದಾದರೆ, ಅದು ಹೀಗಿದೆ. ಬೆಂಗಳೂರಿನ ಪೀಣ್ಯ ನಗರದಲ್ಲಿರುವ ಭಾರತಿ ಥಿಯೇಟರ್
(rerelease Puneeth movie Shivratri)ನಲ್ಲಿ ಫೆ. ೧೯ರ ೧೨:೩೦ ರ ಸಮಯಕ್ಕೆ ರಾಜಕುಮಾರ ಚಿತ್ರದ ಒಂದು ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
