- ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಸಂಪುಟ ಒಪ್ಪಿಗೆ (Reservation in government contracts)
- ವಿಧೇಯಕ ಅಂಗೀಕರಿಸಿದ್ರೆ ಗ್ರಾಮೀಣ ಜನರ ದೊಡ್ಡ ಬೇಡಿಕೆ ಈಡೇರಿಕೆ
- ಇ-ಖಾತಾ ನಿರೀಕ್ಷೆಯಲ್ಲಿವರಿಗೆ ಸರ್ಕಾರ ಸಿಹಿ ಸುದ್ದಿ
Bengaluru: ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಂರಿಗೆ ಮೀಸಲಾತಿ (Muslim reservation) ನೀಡುವ ವಿಧೇಯಕ ತರಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇದೇ ಅಧಿವೇಶನದಲ್ಲಿ ಬಿಲ್ ಮಂಡಿಸಲು (Present the bill) ತೀರ್ಮಾನಿಸಲಾಗಿದೆ. ಹಿಂದುಳಿದ, ಇತರೇ ಹಿಂದುಳಿದ ವರ್ಗಗಳಿಗಷ್ಟೇ ಇತ್ತು.
ಇದೀಗ ಮುಸ್ಲಿಂ ಸಮಾಜಕ್ಕೆ (Muslim society) ಮೀಸಲಾತಿಯನ್ನು ಸರ್ಕಾರ ವಿಸ್ತರಿಸಿದೆ. ವಿಧೇಯಕ ಪ್ರಕಾರ ರಾಜ್ಯ ಸರ್ಕಾರದ 1 ಕೋಟಿವರೆಗಿನ ಗುತ್ತಿಗೆ ಕಾಮಗಾರಿಗಳಲ್ಲಿ 4% ಮುಸ್ಲಿಂರಿಗೆ ಮೀಸಲಾತಿ ಒದಗಿಸಲಾಗುತ್ತಿದೆ.
2025ನೇ ಸಾಲಿನ ತಮ್ಮ ಬಜೆಟ್ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ (Welfare of minorities) ಭರ್ಜರಿ ಕೊಡುಗೆ ನೀಡಿತ್ತು. ಅದರಲ್ಲೂ ವಿರೋಧದ ನಡುವೆಯೂ ಸರ್ಕಾರಿಗೆ ಗುತ್ತಿಗೆಯಲ್ಲಿ ಸಿಎಂ ಮೀಸಲಾತಿ ಘೋಷಿಸಿದ್ದರು. ಎಸ್ಸಿ ಮತ್ತು ಎಸ್ಟಿ (SC and ST) ಸಮುದಾಯಕ್ಕೆ ಈ ಹಿಂದೆ ಇದ್ದ ಒಂದು ಕೋಟಿಯವರೆಗಿನ ಮೊತ್ತವನ್ನು 2 ಕೋಟಿಯವರೆಗೆ ಮೀಸಲಾತಿ ವಿಸ್ತರಣೆ ಮಾಡಲಾಗಿದೆ.
ವಿಧೇಯಕವನ್ನು ಇದೇ ಅಧಿವೇಶನದಲ್ಲಿ ಮಂಡಿಸಲು ಸಂಪುಟ ಅನುಮೋದನೆ ನೀಡಿದೆ.

ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ:
- ಎಸ್ಸಿ-ಎಸ್ಟಿ ಸಮುದಾಯಕ್ಕೆ 1 ಕೋಟಿ ರೂ.ವರೆಗೆ ಗುತ್ತಿಗೆ
- ಈಗ ಈ ಮೊತ್ತವನ್ನು 2 ಕೋಟಿ ರೂ. ಕಾಮಗಾರಿಗೆ ವಿಸ್ತರಣೆ
- ವಿಧೇಯಕವನ್ನು ಇದೇ ಅಧಿವೇಶನದಲ್ಲಿ ಮಂಡಿಸಲು ಸಿದ್ಧತೆ
- ವಿಧೇಯಕ ಮಂಡನೆಗೆ ಸಚಿವ ಸಂಪುಟ ಸಭೆ ಅನುಮೋದನೆ
- ಮುಸ್ಲಿಮರ ಪ್ರವರ್ಗ 2-ಬಿ ಅಡಿ ಶೇ.4ರಷ್ಟು ಮೀಸಲಾತಿ ಪ್ಲಾನ್
ಇದನ್ನೂ ಓದಿ: ಅತಿಥಿ ಶಿಕ್ಷಕರ , ಬಿಸಿಯೂಟ ಕಾರ್ಯಕರ್ತೆಯರ ಪಾಲಿಗೆ ಸಿಹಿ ನೀಡಿದ ಬಜೆಟ್
ಇತ್ತ, ಇ-ಖಾತಾ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಗ್ರಾಮೀಣ ಭಾಗದಲ್ಲಿ ಇ- ಖಾತಾ (E-Khata) ನೀಡಲು ಸರ್ಕಾರ ಪ್ಲಾನ್ ರೂಪಿಸಿದೆ.ಗ್ರಾಮೀಣ ಪ್ರದೇಶಗಳಲ್ಲಿ ಇ-ಖಾತಾ ಯೋಜನೆಯನ್ನು ಜಾರಿಗೆ ತರಲು ಸಂಪುಟ ಅನುಮೋದನೆ ನೀಡಿದೆ. ಗ್ರಾಮೀಣಾಭಿವೃದ್ಧಿ (Rural development) ಮತ್ತು ಪಂಚಾಯತ್ ರಾಜ್ ವಿಧೇಯಕಕ್ಕೆ ಸಚಿವ ಸಂಪುಟ ಸಭೆ ಅಸ್ತು ಎಂದಿದೆ.
ವಿಧೇಯಕ ಅಂಗೀಕರಿಸಿದರೆ ಗ್ರಾಮೀಣ ಭಾಗದ ಕಂದಾಯ ಬಡಾವಣೆ, (Reservation in government contracts) ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಮನೆ, ನಿವೇಶನ ಸಕ್ರಮಕ್ಕೆ ಅವಕಾಶ ನೀಡಿದಂತಾಗಲಿದೆ. ಈ ವಿಧೇಯಕ ಅಂಗೀಕರಿಸಿದ್ರೆ ಗ್ರಾಮೀಣ ಭಾಗದ ಜನರ ಬಹು ದೊಡ್ಡ ಬೇಡಿಕೆ ಈಡೇರಿದಂತಾಗಲಿದೆ.