Karnataka: ಈಗಂತೂ ಸಿನಿ ಪ್ರಿಯರ ಬಾಯಲ್ಲಿ ‘ಕಾಂತಾರ’(RGV Tweet To Rishab) ಸಿನಿಮಾ ಬಗ್ಗೆಯೇ ಮಾತು. ಒಂದು ಸಲ ಸಿನಿಮಾ ನೋಡಿದ ಹೆಚ್ಚಿನ ಪ್ರೇಕ್ಷಕರು ಮತ್ತೊಮ್ಮೆ ಚಿತ್ರ ನೋಡಲು ಮುಗಿಬೀಳುತ್ತಿದ್ದಾರೆ.
ತಮಿಳು ನಟ ಕಾರ್ತಿ ಸೇರಿ ಸಾಕಷ್ಟು ಪರಭಾಷಾ ಮಂದಿ ಕಾಂತಾರ ಚಿತ್ರ ನೋಡಿ ಮೆಚ್ಚುಗೆ ಸೂಚಿಸಿದ್ದರು. ಈ ಚಿತ್ರದ ಯಶಸ್ಸಿನ ನಂತರ, ರಿಷಬ್ (Rishab Shetty) ಅವರಿಗೆ ಪರಭಾಷೆಯಿಂದಲೂ ಬಹಳಷ್ಟು ಆಫರ್ ಬರುತ್ತಿವೆ.
ಆದರೆ ಮುಂದಿನ ಪ್ರಾಜೆಕ್ಟ್ ಯಾವುದು ಎಂದು ದೇವರಿಗೆ ಗೊತ್ತಿದೆ(RGV Tweet To Rishab)ಎಂದು ರಿಷಬ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಇದನ್ನೂ ಓದಿ : https://vijayatimes.com/state-govt-responds-to-kantara/
ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಈ ಸಂದರ್ಭದಲ್ಲಿ, ಬಹುತೇಕ ಪಾಸಿಟಿವ್ ಪ್ರತಿಕ್ರಿಯೆಗಳೇ ಕೇಳಿಬರುತ್ತಿವೆ. ಇದೀಗ,
ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ(Ram Gopal Varma) ಅವರು ಕೂಡ ಕಾಂತಾರ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ಆರಂಭದಲ್ಲಿ ಕನ್ನಡದಲ್ಲಿ ರಿಲೀಸ್ ಆದ ‘ಕಾಂತಾರ’ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಪಡೆದ ನಂತರದಲ್ಲಿ ಪರಭಾಷೆಯಲ್ಲಿಯೂ ರಿಲೀಸ್ ಆಗುತ್ತಿದೆ. ಈಗ ಈ ಚಿತ್ರ ನೋಡಿ ಪರಭಾಷೆ ಮಂದಿ ಕೂಡ ಜೈಹೋ ಎನ್ನುತ್ತಿರುವುದರಿಂದ,
ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ದಾಖಲೆಯತ್ತ ಮುನ್ನುಗ್ಗುತ್ತಿದೆ. ಈಗಾಗಲೇ ‘ಕಾಂತಾರ’ ಚಿತ್ರ 100 ಕೋಟಿ ರೂಪಾಯಿ ಗಳಿಕೆ ಮಾಡಿ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಲ್ಲಿ ಸನಿಹದಲ್ಲಿದೆ.
ಕೇವಲ 16-17 ಕೋಟಿ ರೂಪಾಯಿ ಆಸುಪಾಸಿನಲ್ಲಿ ನಿರ್ಮಾಣವಾದ ಈ ಚಿತ್ರ, ಈಗ ನೂರಾರು ಕೋಟಿ ರೂಪಾಯಿ ಗಳಿಕೆ ಮಾಡುತ್ತಿದೆ.
ಈ ಬಗ್ಗೆ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ. ಇನ್ನು, ಆರ್‌ಜಿವಿ ಟ್ವೀಟ್ ಏನು ಎಂದು ನೋಡುವುದಾದರೆ,
“ದಶಕಗಳಿಂದ ಮೆಗಾ ಬಜೆಟ್ ಸಿನಿಮಾಗಳು ಮಾತ್ರ ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆದುಕೊಂಡು ಬರುತ್ತದೆ ಎನ್ನುವುದನ್ನು ಕಾಂತಾರ ಸುಳ್ಳು ಮಾಡಿದೆ. ‘ಕಾಂತಾರ’ ಸಿನಿಮಾ ಬಹಳ ಚೆನ್ನಾಗಿದೆ, ಇದು ಚಿತ್ರವಲ್ಲ ದಂತಕಥೆ ಎಂದು ಸಾಕಷ್ಟು ಜನರು ಹೇಳುತ್ತಿದ್ದಾರೆ.
ಆದರೆ ಕಾಂತಾರ ಸಿನಿಮಾ ಕಲೆಕ್ಷನ್ ನೋಡಿದ 500 ಕೋಟಿ ಸಿನಿಮಾ ಮಾಡುವ ನಿರ್ಮಾಪಕರಿಗೆ ಮಾತ್ರ ಹೃದಯಾಘಾತವಾಗುತ್ತದೆ.
ಈಗ ಚಿತ್ರರಂಗದಲ್ಲಿ ರಿಷಬ್ ಶೆಟ್ಟಿ, ದೈವ ಗುಳಿಗದಿಂದ ಕೂಡಿದ ಶಿವ ಇದ್ದಂತೆ. 300, 400, 500 ಕೋಟಿ ರೂಪಾಯಿ ಹಾಕಿ ಸಿನಿಮಾ ಮಾಡುವವರು ವಿಲನ್‌ಗಳು.
ಈಗ ಕಾಂತಾರ ಕಲೆಕ್ಷನ್ ನೋಡಿ ಈ ನಿರ್ಮಾಪಕರಿಗೆ ಹೃದಯಾಘಾತವಾಗುತ್ತದೆ. ಎಲ್ಲ ಚಿತ್ರರಂಗದವರು ಕಲಿಯಬೇಕಾದ ಪಾಠವನ್ನು ರಿಷಬ್ ಕಲಿಸಿದ್ದಾರೆ. ಹಾಗಾಗಿ ಈಗ ಎಲ್ಲರೂ ನಿಮಗೆ ಟ್ಯೂಷನ್ ಫೀ ಕೊಡಬೇಕು” ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
- ಪವಿತ್ರ