ಬೆಳಗಾವಿ(Belagavi) ಜಿಲ್ಲೆಯಾದ್ಯಂತ(District) ನಡೆಯುತ್ತಿದೆ ಅಕ್ರಮ(Illegal) ಅಕ್ಕಿ ದಂಧೆ(Rice Mafia)! ಹೌದು, ಸರಕಾರಿ ಅಧಿಕಾರಿಗಳೇ ಈ ಅಕ್ರಮದಲ್ಲಿ ಭಾಗಿಯಾಗಿ, ಇಂಥ ಕಿಡಿಗೇಡಿಗಳಿಗೆ ಸಾಥ್ ನೀಡುತ್ತಿದ್ದಾರೆ. ಈ ಅಕ್ರಮ ದಂಧೆಯನ್ನು ಪ್ರಶ್ನಿಸಲು ಯಾರಾದರೂ ಮುಂದೆ ಬಂದರೆ ಅವರ ವಿರುದ್ಧ ಸೆಣಸಾಡಲು ಮುಂದಾಗುತ್ತಾರೆ. ಮಚ್ಚು-ಲಾಂಗ್ ಏಟಿನ ಬೆದರಿಕೆ ಇಡುತ್ತಾರೆ. ಇದೊಂದು ಹೆದರಿಕೆಗೆ ಜನಸಾಮಾನ್ಯರು ಕಂಡರು ಕಾಣದಂತೆ ಸುಮ್ಮನಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಅಕ್ರಮ ದಂಧೆಕೋರರದ್ದೆ ರಾಜ್ಯ ದರ್ಬಾರಾಗಿ ಮಾರ್ಪಟ್ಟಿದೆ. ಜನಸಾಮಾನ್ಯರಿಗೆ ರಕ್ಷಣೆ ಕೊಡಬೇಕಾದ ಆರಕ್ಷಕರೇ ಈಗ ಲಂಚದ ಮಂಚವನ್ನು ಏರಿದ್ದಾರೆ. ಪೊಲೀಸ್ ಇಲಾಖೆಯ ಲಂಚಾವತಾರವನ್ನು ಬಿಚ್ಚಿಟ್ಟ ಸ್ಥಳೀಯ ಅಕ್ರಮ ಅಕ್ಕಿ ಮಾರಾಟಗಾರ. ಅಂಕಲಿ ಪೊಲೀಸ್ ಠಾಣಾ ಅಧಿಕಾರಿಗಳು ತಿಂಗಳಿಗೆ ಮೂರು ಸಾವಿರ ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪ ವರದಿಯಾಗಿದೆ. ಪೊಲೀಸ್ ಇಲಾಖೆಯ ಇಂಥ ದುರ್ಲಕ್ಷ್ಯ ನಡುವಳಿಕೆಯಿಂದ ಜಿಲ್ಲೆಯಲ್ಲಿ ಸಮಾಜಘಾತುಕ ಕೃತ್ಯಗಳು ಸರ್ವೆ ಸಾಮಾನ್ಯವಾಗಿ ಹೋಗಿದೆ ಎಂಬುದರಲ್ಲಿ ಆಶ್ಚರ್ಯವೇ ಇಲ್ಲ ಬಿಡಿ.

ಪ್ರಶ್ನೆ ಮಾಡುವವರ ವಿರುದ್ಧ ಗೂಂಡಾಗಿರಿ ನಡೆಸುವುದು, ಪ್ರಚೋದನೆ ಕೊಡುವುದು ಇಲ್ಲಿಯ ಅಧಿಕಾರಿಗಳ ಚಾಳಿಯಾಗಿದೆ. ಜಿಲ್ಲೆಯ ಗಡಿಭಾಗವಾದ ಕಾಗವಾಡ ಚೆಕ್ಕ್ ಪೋಸ್ಟ್ ಮೂಲಕ ರಾಜಾರೋಷವಾಗಿ ಹಾಡು ಹಗಲೇ ಬಡವರ ಅಕ್ಕಿ ಸಾಗಾಟ ಮಾಡುತ್ತಾರೆ. ಅಕ್ರಮವಾಗಿ ಅಕ್ಕಿ ಸಾಗಾಟವಾಗುತ್ತಿದ್ದರು ಸ್ಥಳಿಯ ತಾಲೂಕಾಡಳಿತ ಹಾಗೂ ಪೊಲೀಸ್ ಇಲಾಖೆ ಕಂಡೂ ಕಾಣದ ಹಾಗೆ ಸುಮ್ಮನಿರುವುದನ್ನು ಕಂಡರೆ ಲಂಚಕ್ಕೆ ಇವರ ಹಿಂದಿನ ಮನೆಯ ಬಾಗಿಲು ತೆರೆದಿರುವುದು ಸತ್ಯ ಅನ್ನೋದು ಎದ್ದು ಕಾಣುತ್ತಿದೆ.

ಮಾನ್ಯ ಕರ್ನಾಟಕ ಘನ ಸರ್ಕಾರದ ಗೃಹ ಮಂತ್ರಿಗಳಾದ ಅರಗ ಜ್ಞಾನೇಂದ್ರ ಅವರಿಗೆ ಪಾಪ ಈ ವಿಚಾರ ತಿಳಿದಿಲ್ಲ ಎಂದು ಕಾಣುತ್ತದೆ. ದಯವಿಟ್ಟು ಈ ಸುದ್ದಿಯನ್ನು ಅವರಿಗೆ ತಲುಪಿಸುವ ಕೆಲಸ ನಾವುಗಳೇ ಒತ್ತಿ ಮಾಡಬೇಕಾಗಿದೆ. ರಾಜ್ಯ ಸರ್ಕಾರದ ಗೃಹ ಮಂತ್ರಿಗಳಾದ ಅರಗ ಜ್ಞಾನೇಂದ್ರೇ ಅವರೇ ದಯವಿಟ್ಟು ಭ್ರಷ್ಟ ಅಧಿಕಾರಿಗಳ ಅಕ್ರಮ ಚಟುವಟಿಕೆಗಳತ್ತ ಗಮನಿಸಿ, ಹೆಡೆಮುರಿಕಟ್ಟಿ ಸಾರ್ವಜನಿಕರ ಹಿತ ಕಾಪಾಡಬೇಕಾಗಿದೆ.