• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ಮಾಜಿ ಡಾನ್ ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ:ಕೂದಲೆಳೆ ಅಂತರದಲ್ಲಿ ರಿಕ್ಕಿ ರೈ ಪಾರು!

Neha M by Neha M
in Vijaya Time
ಮಾಜಿ ಡಾನ್ ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ:ಕೂದಲೆಳೆ ಅಂತರದಲ್ಲಿ ರಿಕ್ಕಿ ರೈ ಪಾರು!
0
SHARES
34
VIEWS
Share on FacebookShare on Twitter
  • ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ (Manipal Hospital) ಮುತ್ತಪ್ಪ ರೈ ಪುತ್ರ ದಾಖಲು
  • ಮಾಜಿ ಡಾನ್ ಮುತ್ತಪ್ಪ ರೈ (Muttappa Rai) ಪುತ್ರ ರಿಕ್ಕಿ ಮೇಲೆ ಗುಂಡಿನ ದಾಳಿ (Ricky Rai narrowly escapes)
  • ಎರಡು ದಿನದ ಹಿಂದಷ್ಟೇ ರಷ್ಯಾದಿಂದ ವಾಪಸಾಗಿದ್ದ ರಿಕ್ಕಿ ರೈ ಮೇಲೆ ಅಪರಿಚಿತರಿಂದ ದಿಢೀರ್ ಫೈರಿಂಗ್

Bengaluru: ಮಾಜಿ ಭೂಗತ ಪಾತಕಿ ಮುತ್ತಪ್ಪ ರೈ (Muttappa Rai) ಕಿರಿಯ ಪುತ್ರ ರಿಕ್ಕಿ ರೈ (Ricky Rye) ಮೇಲೆ ದುಷ್ಕರ್ಮಿಗಳು ಶೂಟೌಟ್ ನಡೆಸಿರುವ ಘಟನೆ ರಾಮನಗರ ಜಿಲ್ಲೆಯ (Ramnagar district) ಬಿಡದಿಯಲ್ಲಿ ತಡರಾತ್ರಿ ನಡೆದಿದೆ.ಬಿಡದಿಯಲ್ಲಿರುವ ಮುತ್ತಪ್ಪ ರೈ ನಿವಾಸದ ಮುಂಭಾಗದ ಕಾಂಪೌಂಡ್ ಬಳಿ ರಾತ್ರಿ 12:50ರ ಸುಮಾರಿಗೆ 2 ಸುತ್ತಿನ ಗುಂಡಿನ ದಾಳಿ (Shooting attack) ನಡೆದಿದೆ. ರಿಕ್ಕಿ ರೈ ಅವರನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಲಾಗಿದೆ.

ಈ ವೇಳೆ ರಿಕ್ಕಿ ರೈ, ಮೂಗು, ಕೈಗೆ ಗುಂಡು ತಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್‌ (Police) ಮೂಲಗಳು ತಿಳಿಸಿವೆ.ರಿಕ್ಕಿ ರೈ ತಮ್ಮ ಫಾರ್ಚೂನರ್ ಕಾರಿನಲ್ಲಿ ಡ್ರೈವರ್ (Car driver) ಮತ್ತು ಗನ್‌ಮ್ಯಾನ್ (Gunman) ಜೊತೆಗೆ ಬಿಡದಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಮನೆಯ ಕಾಂಪೌಂಡ್ ಬಳಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ರಿಕ್ಕಿ ರೈ ಅವರಿಗೆ ಗಾಯಗಳಾಗಿವೆ.

ತಕ್ಷಣವೇ ಅವರನ್ನು ಬಿಡದಿಯ ಖಾಸಗಿ ಆಸ್ಪತ್ರೆಗೆ (Private hospital in Bidadi) ಕರೆದೊಯ್ಯಲಾಗಿದ್ದು, ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ (Hospital in Bangalore) ಶಿಫ್ಟ್ ಮಾಡಲಾಗಿದೆ.

ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ (Son Ricky Rye) ಮೇಲೆ ನಡೆದ ಶೂಟೌಟ್‌ನಲ್ಲಿ ದುಷ್ಕರ್ಮಿಗಳು ಡ್ರೈವಿಂಗ್ ಸೀಟ್‌ನನ್ನೇ ಗುರಿಯಾಗಿಸಿ 2 ಸುತ್ತು ಗುಂಡುಗಳನ್ನು ಹಾರಿಸಿದ್ದಾರೆ. ರಿಕ್ಕಿ ರೈ ಸಾಮಾನ್ಯವಾಗಿ ತಾನೇ ಕಾರು ಚಾಲನೆ ಮಾಡುತ್ತಿದ್ದ ಕಾರಣ, ದಾಳಿಕೋರರು ಡ್ರೈವಿಂಗ್ ಸೀಟ್‌ನ ಮೇಲೆ ಗುರಿ ಇಟ್ಟಿದ್ದರು. ಆದರೆ, ಈ ಬಾರಿ ಕಾರನ್ನು ಚಾಲಕ ರಾಜು (Driver Raju) ಚಲಾಯಿಸುತ್ತಿದ್ದು, ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ಪಕ್ಕದ ಸೀಟ್‌ನಲ್ಲಿದ್ದ ರಿಕ್ಕಿ ರೈ ಅವರ ಮೂಗು ಮತ್ತು ಕೈಗೆ ಗುಂಡು (Bullet in the hand) ತಾಕಿದ್ದು

KA53 MC 7128 ನಂಬರ್​​​ನ ಕಪ್ಪು ಬಣ್ಣದ ಫಾರ್ಚೂನರ್ ಕಾರಿನ (Fortuner car) ಹಿಂಬದಿ ಸೀಟಿನಲ್ಲಿ ರಿಕ್ಕಿ ರೈ ಕುಳಿತಿದ್ದರು. ಆದರೆ ಡ್ರೈವಿಂಗ್ ಸೀಟ್ (Driving seat) ಟಾರ್ಗೆಟ್​ ಮಾಡಿ ಫೈರಿಂಗ್ ಮಾಡಲಾಗಿದೆ. ಯಾಕೆಂದರೆ ಪ್ರತಿ ಬಾರಿಯೂ ರಿಕ್ಕಿ ರೈ ತಮ್ಮ ಕಾರನ್ನು ತಾವೇ ಡ್ರೈವ್​ ಮಾಡುತ್ತಿದ್ದರು. ಹೀಗಾಗಿ ಡ್ರೈವಿಂಗ್ ಸೀಟ್ ಟಾರ್ಗೆಟ್ (Driving seat target) ಮಾಡಿ ಶೂಟ್ ಮಾಡಿದ್ದಾರೆ. ಫೈರಿಂಗ್ ಮಾಡ್ತಿದ್ದಂತೆಯೇ ಡ್ರೈವಿಂಗ್ ಸೀಟ್​ಗೆ ಗುಂಡು ತಗುಲಿದೆ. ಸೀಟ್​​ಗೆ ಬಡಿದ ಗುಂಡುಗಳು ಹಿಂಬದಿಯಲ್ಲಿ ಕೂತಿದ್ದ ರಿಕ್ಕಿಗೂ ತಗುಲಿದೆ.

ಇನ್ನು ಕೂದಲೆಳೆ ಅಂತರದಲ್ಲಿ ರಿಕ್ಕಿ ಕಾರು ಚಾಲಕ ರಾಜು (Driver Raju) ಪಾರಾಗಿದ್ದಾರೆ.ಬಿಡದಿ ಮನೆಯ ಎದುರಿನ ರಸ್ತೆಯಲ್ಲಿ ಪ್ರಕೃತಿ ಗೇಟ್ ವೇ ಲೇಔಟ್ ಇದೆ. ಇದೇ ಫ್ಯೂಚರ್ ಅರ್ಥ್ ಪ್ರಕೃತಿ ಗೇಟ್ ವೇ ಲೇಔಟ್ (Nature Gateway Layout) ಒಳಗಡೆ ಆಗಂತುಕರು ಇದ್ದರು.

ಲೇಔಟ್​ಗೆ ಹಾಕಿರುವ ಪೆನ್ಸಿಂಗ್ ಕಾಂಪೌಂಡ್ ಮೇಲೆ ನಿಂತು ಅಟ್ಯಾಕ್ ಮಾಡಿದ್ದಾರೆ. ಫೈರಿಂಗ್​​ನಲ್ಲಿ 70 MM ಬುಲೆಟ್ ಹೊಂದಿರುವ ಶಾರ್ಟ್​ ಗನ್​ನನ್ನು ಬಳಸಲಾಗಿದೆ. ರಿಕ್ಕಿ ರೈ ಮೇಲೆ ಆಗಂತುಕರು ಶಾರ್ಟ್ ಗನ್​ನಿಂದ 2 ಸುತ್ತಿನ ಫೈರಿಂಗ್ (2 rounds firing) ಮಾಡಿ ಎಸ್ಕೇಪ್ ಆಗಿದ್ದಾರೆ.

ಇನ್ನು , ಬಿಡದಿಯ ಖಾಸಗಿ ಆಸ್ಪತ್ರೆಯಲ್ಲಿ (Private hospital in Bidadi) ರಿಕ್ಕಿ ರೈಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ (Manipal Hospital, Bangalore) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳದಲ್ಲಿ ಸೋಕೋ, FSL ತಂಡ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಬಿಡದಿಯ ಇನ್ಸ್​ಪೆಕ್ಟರ್ ಶಂಕರ್ ನಾಯಕ್ (Inspector Shankar Nayak) ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.

ಈಗಾಗಲೇ ರಿಕ್ಕಿ ಕಾರು ಚಾಲಕ ರಾಜುನಿಂದ ಘಟ‌ನೆ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗಿದೆ.ಎರಡು ದಿನದ ಹಿಂದಷ್ಟೇ ರಷ್ಯಾದಿಂದ ರಿಕ್ಕಿ ರೈ ವಾಪಸ್ ಆಗಿದ್ದರು. ರಿಯಲ್ ಎಸ್ಟೇಟ್ ಬಿಸಿನೆಸ್ ನಲ್ಲಿ ಆಕ್ಟಿವ್ ಆಗಿದ್ದರು. ಕಾರು ಚಾಲಕ ರಾಜುನಿಂದ ಘಟ‌ನೆ (Incident from Raju) ಬಗ್ಗೆ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ:  http://ಇನ್ಮುಂದೆ ಟೋಲ್ ಬೂತ್‌ನಲ್ಲಿ ಟೈಮ್ ವೇಸ್ಟ್ ಮಾಡ್ಬೇಕಾಗಿಲ್ಲ: ಮೇ 1ರಿಂದ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿ

ಬಿಡದಿ ಇನ್ಸ್ಪೆಕ್ಟರ್ ಶಂಕರ್ ನಾಯಕ್ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ. (Ricky Rai narrowly escapes) ಘಟನೆಯ ಸ್ಥಳಕ್ಕೆ ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ (Srinivas Gowda) ಮತ್ತು ಡಿವೈಎಸ್‌ಪಿ ಶ್ರೀನಿವಾಸ್ (DySP Srinivas) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related News

WHO ಮೂಲ ಧ್ಯೇಯದಿಂದ ದೂರ ಸರಿದಿದೆ:ವೀಕ್ಷಕನಾಗಿಯೂ ಮುಂದುವರಿಯಲ್ಲ ಎಂದು ಸದಸ್ಯತ್ವ ತ್ಯಜಿಸಿದ ಅಮೆರಿಕ
Vijaya Time

WHO ಮೂಲ ಧ್ಯೇಯದಿಂದ ದೂರ ಸರಿದಿದೆ:ವೀಕ್ಷಕನಾಗಿಯೂ ಮುಂದುವರಿಯಲ್ಲ ಎಂದು ಸದಸ್ಯತ್ವ ತ್ಯಜಿಸಿದ ಅಮೆರಿಕ

January 24, 2026
ಬೆಂಗಳೂರಿನ 23 ಪ್ರಮುಖ ರಸ್ತೆಗಳಲ್ಲಿ ಪೇ–ಅಂಡ್–ಪಾರ್ಕ್ ಜಾರಿ: ಖಾಸಗಿ ನಿರ್ವಾಹಕರ ಮೂಲಕ ಶುಲ್ಕ ಸಂಗ್ರಹ
Vijaya Time

ಬೆಂಗಳೂರಿನ 23 ಪ್ರಮುಖ ರಸ್ತೆಗಳಲ್ಲಿ ಪೇ–ಅಂಡ್–ಪಾರ್ಕ್ ಜಾರಿ: ಖಾಸಗಿ ನಿರ್ವಾಹಕರ ಮೂಲಕ ಶುಲ್ಕ ಸಂಗ್ರಹ

January 10, 2026
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ; 1146 ಹುದ್ದೆಗಳಿಗೆ ಅರ್ಜಿ ಆಹ್ವಾನ
Vijaya Time

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ; 1146 ಹುದ್ದೆಗಳಿಗೆ ಅರ್ಜಿ ಆಹ್ವಾನ

January 7, 2026
ಒಂದು ದಿನಕ್ಕೆ ಬಳಸುವ ಹಣಕ್ಕೂ ಕಾನೂನಿದೆ: RBI ಮತ್ತು ಆದಾಯ ತೆರಿಗೆ ನಿಯಮಗಳ ಸಂಪೂರ್ಣ ಮಾಹಿತಿ
Vijaya Time

ಒಂದು ದಿನಕ್ಕೆ ಬಳಸುವ ಹಣಕ್ಕೂ ಕಾನೂನಿದೆ: RBI ಮತ್ತು ಆದಾಯ ತೆರಿಗೆ ನಿಯಮಗಳ ಸಂಪೂರ್ಣ ಮಾಹಿತಿ

January 7, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.