Mysore : ಮೈಸೂರು ರಂಗಾಯಣದಲ್ಲಿ ಪ್ರದರ್ಶನ ಕಂಡ ನಾಟಕವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Ridicule about Siddu DKshi) ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ(DK Shiva kumar) ಅವರನ್ನು ಉದ್ದೇಶಪೂರ್ಕವಾಗಿ ಅಪಹಾಸ್ಯ ಮಾಡಿದ್ದಾರೆ ಎಂದು ಆರೋಪಿಸಿ,
ನಾಟಕದಲ್ಲಿ ಅಭಿನಯಿಸಿದ 18 ರಂಗ ಕಲಾವಿದರ ವಿರುದ್ದ ಕರ್ನಾಟಕ ಕುರುಬ ಸಂಘವು ದೂರು ದಾಖಲಿಸಿದೆ.

ಜ್ಞಾನಪೀಠ(Jnanapeeta) ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ(Chandra shekar kambara) ಅವರ ‘ಸಾಂಬಶಿವ’ (Ridicule about Siddu DKshi)ನಾಟಕದ ಪ್ರದರ್ಶನದ ವೇಳೆ ಮಾಜಿ ಮುಖ್ಯಮಂತ್ರಿ
ಹಾಗೂ ಕುರುಬ ನಾಯಕ ಸಿದ್ದರಾಮಯ್ಯನವರನ್ನು ಅವಹೇಳನಕಾರಿಯಾಗಿ ಟೀಕಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಕುರುಬ ಸಂಘವು ದೂರು ದಾಖಲಿಸಿದ್ದು, ಕೂಡಲೇ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ರಂಗಾಯಣದಲ್ಲಿ ಸಾಂಬಶಿವ ನಾಟಕ ಪ್ರದರ್ಶಿಸಿದ 18 ಕಲಾವಿದರ ವಿರುದ್ಧ ದೂರು ದಾಖಲಿಸಿದ್ದೇನೆ.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕುರುಬ ಸಮುದಾಯದ ಜನಪ್ರಿಯ ನಾಯಕ ಸಿದ್ದರಾಮಯ್ಯನವರನ್ನು ಅಪಹಾಸ್ಯ ಮಾಡುವ ಉದ್ದೇಶದಿಂದ ನಾಟಕ ಪ್ರದರ್ಶನ ಮಾಡಲಾಗಿದೆ.
ಮೂಲ ನಾಟಕದಲ್ಲಿ ಅಂತಹ ದೃಶ್ಯಗಳು ಅಥವಾ ಸಂಭಾಷಣೆಗಳು ಇರಲಿಲ್ಲ. ನಿರ್ದೇಶಕರು ಉದ್ದೇಶಪೂರ್ವಕವಾಗಿ ಅಂತಹ ಸಂಭಾಷಣೆಯನ್ನು ಸೇರಿಸಿದ್ದಾರೆ.
ಡಿಕೆ ಶಿವಕುಮಾರ್ ಅವರನ್ನು “ಕೆಡಿ ಅಂಕಲ್”(KD Uncle) ಎಂದು ವ್ಯಂಗ್ಯವಾಡಿದ್ದಾರೆ.
ಎಲ್ಲ ರೀತಿಯ ಬಾಗ್ಯಗಳನ್ನು (ಸಿದ್ದರಾಮಯ್ಯನವರ ಅವಧಿಯಲ್ಲಿ ಜಾರಿಗೆ ತಂದ ಕಲ್ಯಾಣ ಯೋಜನೆಗಳನ್ನು ಉಲ್ಲೇಖಿಸಿ) ಜನರಿಗೆ ನೀಡುವ ಮೂಲಕ ನೀವು ಜನರನ್ನು ಸೋಮಾರಿಗಳನ್ನಾಗಿ ಮಾಡಿದ್ದೀರಿ ಎಂದು ಕಲಾವಿದರು ಹೇಳಿದ್ದು,

ಇದು ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡುತ್ತಿದೆ. ಈ ನಾಟಕವು ಸಿದ್ದರಾಮಯ್ಯನವರ ಅಭಿಮಾನಿಗಳ ಭಾವನೆಗಳಿಗೆ ಮತ್ತು ಗೌರವಕ್ಕೆ ಧಕ್ಕೆ ತಂದಿದೆ ಎಂದು ರಾಜ್ಯ ಕುರುಬ ಸಂಘದ ಅಧ್ಯಕ್ಷ ಬಿ.
ಸುಬ್ರಹ್ಮಣ್ಯ ಹೇಳಿದ್ದಾರೆ. ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು, ಇಡೀ ನಾಟಕದಲ್ಲಿ ಕಲಾವಿದರು ಸಿದ್ದರಾಮಯ್ಯ ಅಥವಾ ಡಿಕೆ ಶಿವಕುಮಾರ್ ಅವರ ಹೆಸರನ್ನು ಹೇಳಿಲ್ಲ, ಹೀಗಿರುವಾಗ ಇಬ್ಬರು ನಾಯಕರ ಮೇಲೆ ಅಪಮಾನ ಮಾಡಿದ್ದು ಹೇಗೆ?
ಇದನ್ನೂ ಓದಿ: https://vijayatimes.com/lord-siddeshwar-is-immortal/
ಇದು ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯ. ಪ್ರತಿಯೊಬ್ಬರೂ ಇತರರ ಹಕ್ಕುಗಳನ್ನು ಗೌರವಿಸಬೇಕು. ಪಕ್ಷ ಭೇದವಿಲ್ಲದೆ ಎಲ್ಲಾ ನಾಯಕರ ವಿರುದ್ಧ ಈ ಹಿಂದೆ ಇಂತಹ ನೂರಾರು ನಾಟಕಗಳು ನಡೆದಿವೆ.
ದೃಶ್ಯ ಮಾಧ್ಯಮ ಚಾನೆಲ್‌ಗಳು ಕೂಡ ಎಲ್ಲಾ ರಾಜಕೀಯ ನಾಯಕರನ್ನು ಅಪಹಾಸ್ಯ ಮಾಡುತ್ತಿವೆ, ಅವರು ಪ್ರತಿಭಟನೆ ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
-ಮಹೇಶ್.ಪಿ.ಎಚ್