Bengaluru: ಸ್ಪಂದನಾ ವಿಜಯ್ ರಾಘವೇಂದ್ರ (rip spandana vijayaraghavendra) ಅವರು ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ೧೯೭೯ ಜನಿಸಿದರು.ಇವರ ತಂದೆಯ ಹೆಸರು ಬಿ.ಕೆ.ಶಿವರಾಂ,
(B.K.Shivaram) ಸಹಾಯಕ ಪೊಲೀಸ್ ಆಯುಕ್ತರು,ಬೆಂಗಳೂರು. ಸಂಗೀತ ಕೇಳುವುದು, ಪುಸ್ತಕಗಳನ್ನು ಓದುವುದು, ಅಡುಗೆ ಮಾಡುವುದು, ಶಾಪಿಂಗ್ ಮಾಡುವುದು ಇವರ ಹವ್ಯಾಸವಾಗಿತ್ತು.

ಸ್ಪಂದನಾ ಅವರು ತನ್ನ ಶಾಲಾ ಶಿಕ್ಷಣವನ್ನು ಬೆಂಗಳೂರಿನ ಸ್ಟೆಲ್ಲಾ ಮಾರಿಸ್ ಹೈಸ್ಕೂಲ್ನಲ್ಲಿ (St.Mary’s High School) ಪೂರ್ಣಗೊಳಿಸಿದರು ಮತ್ತು ಕೇರಳದ MES ಕಾಲೇಜಿನಲ್ಲಿ ಪದವಿಯನ್ನು
ಮುಗಿಸಿದ್ದು, ವೃತ್ತಿಯಲ್ಲಿ (rip spandana vijayaraghavendra) ನಟಿಯಾಗಿದ್ದಾರೆ.

ಇವರು 26 ಆಗಸ್ಟ್ 2007 ರಂದು ಸ್ಯಾಂಡಲ್ ವುಡ್ನ ಪ್ರಸಿದ್ಧ ಕನ್ನಡ ಚಲನಚಿತ್ರ ನಟರಾದ ವಿಜಯರಾಘವೇಂದ್ರ (Vijayaraghavendra) ಅವರನ್ನು ವಿವಾಹವಾಗಿದ್ದು, ಇವರ ದಾಂಪತ್ಯ ಜೀವನ
ತಮಿಳುನಾಡಿಗೆ ಹರಿದ ಕಾವೇರಿ: ಸರ್ಕಾರದ ಈ ನಡೆಗೆ ರಾಜ್ಯದ ರೈತರ ತೀವ್ರ ಆಕ್ರೋಶ
ಸುಂದರವಾಗಿತ್ತು. ಹಾಗೆ ಇವರಿಗೆ ಶೌರ್ಯ (Shourya) ಎಂಬ ಒಬ್ಬ ಮಗನಿದ್ದಾನೆ

ಸ್ಪಂದನಾ ವಿಜಯ್ ರಾಘವೇಂದ್ರರವರು ಅಪೂರ್ವ (Apoorva) ಮತ್ತು ಕಿಸ್ಮತ್ (Kismat) ಚಿತ್ರದಲ್ಲಿ ನಟಿಸಿದ್ದಾರೆ. ಇವರು 2016 ರಲ್ಲಿ ವಿ. ರವಿಚಂದ್ರನ್ ನಿರ್ದೇಶನದ “ಅಪೂರ್ವ” ಎಂಬ ಕನ್ನಡ ಚಲನಚಿತ್ರದೊಂದಿಗೆ ತಮ್ಮ ನಟನೆಯನ್ನು ಪ್ರಾರಂಭಿಸಿದ್ದರು.

ಥೈಲ್ಯಾಂಡ್ ನಲ್ಲಿ (Tailand) ನಿನ್ನೆ ಸಂಜೆ ಶಾಪಿಂಗ್ ಮುಗಿಸಿ ರೂಂಗೆ ಹೋಗುವಾಗ ಹೃದಯಾಘಾತ ಸಂಭವಿಸಿದ್ದು, ಹೃದಯಾಘಾತಕ್ಕೆ ಒಳಗಾಗಿದ್ದ ಸ್ಪಂದನಾರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ
ದಾಖಲಿಸಲಾಗಿತ್ತು. ಆದರೆ ಬ್ಯಾಂಕಾಕ್ನ (Bangkok) ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ.