ಸಿಲಿಕಾನ್ ಸಿಟಿಯ (Rise in air pollution in Bengaluru) ಗಾಳಿಯಲ್ಲಿ ವಿಷ
ಮಾಸ್ಕ್ ಇಲ್ಲದೆ ಕೆಲಸ, ಆರೋಗ್ಯಕ್ಕೆ ಕುತ್ತು
ಮೂರು ವರ್ಷಗಳ ಅಧ್ಯಯನದಲ್ಲಿ ಆಘಾತಕಾರಿ ಸತ್ಯ
Bengaluru : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಹನಗಳ (Rise in air pollution in Bengaluru) ಸಂಖ್ಯೆ ಹೆಚ್ಚಾಗುತ್ತಿದ್ದು, ಇದರ ಪರಿಣಾಮವಾಗಿ ವಾಯುಮಾಲಿನ್ಯದ ಪ್ರಮಾಣವೂ ಏರಿಕೆಯಾಗುತ್ತಿದೆ.
ನಗರದ ರಸ್ತೆಗಳಲ್ಲೇ ಗಂಟೆಗಟ್ಟಲೆ ಕೆಲಸ ಮಾಡುವ ಬಿಎಂಟಿಸಿ ಚಾಲಕರು, ನಿರ್ವಾಹಕರು, ಸಂಚಾರ ಪೊಲೀಸ್ ಸಿಬ್ಬಂದಿ, ಕಟ್ಟಡ ಕಾರ್ಮಿಕರು ಹಾಗೂ ಪೌರಕಾರ್ಮಿಕರ
ಆರೋಗ್ಯದ ಮೇಲೆ ವಾಯುಮಾಲಿನ್ಯ ಗಂಭೀರ ಪರಿಣಾಮ ಬೀರುತ್ತಿರುವ ಆತಂಕಕಾರಿ ವಿಚಾರ ಅಧ್ಯಯನವೊಂದರಲ್ಲಿ ಬಹಿರಂಗವಾಗಿದೆ.

ವಾಹನಗಳಿಂದ ಹೊರಬರುವ ಹೊಗೆ, ರಸ್ತೆಗಳ ಧೂಳು ಹಾಗೂ ಕಲುಷಿತ ಗಾಳಿಯನ್ನು ನಿರಂತರವಾಗಿ ಉಸಿರಾಡುವುದರಿಂದ ಈ ಕಾರ್ಮಿಕರಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಈ ಹಿಂದೆ ಪ್ರತಿದಿನ ಸುಮಾರು 2,500 ಹೊಸ ವಾಹನಗಳು ನೋಂದಣಿಯಾಗುತ್ತಿದ್ದರೆ, ಇದೀಗ ಪ್ರತಿದಿನ ಸುಮಾರು 3,000 ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ ಎಂದು ವರದಿ ತಿಳಿಸಿದೆ. ಈಗಾಗಲೇ ನಗರದ ಹಳೆಯ ವಾಹನಗಳ ಸಂಖ್ಯೆ 1 ಕೋಟಿ 40 ಲಕ್ಷ ದಾಟಿದೆ ಎನ್ನಲಾಗಿದೆ.
ಇಷ್ಟೊಂದು ಪ್ರಮಾಣದಲ್ಲಿ ವಾಹನಗಳು ಸಂಚರಿಸುವುದರಿಂದ ರಸ್ತೆಗಳಲ್ಲಿ ಹೊಗೆ ಮತ್ತು ಧೂಳಿನ ಪ್ರಮಾಣ ಹೆಚ್ಚುತ್ತಿದೆ. ಇದರ ನೇರ ಪರಿಣಾಮವನ್ನು ಪ್ರತಿದಿನ ಹೊರಾಂಗಣದಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರು ಎದುರಿಸುತ್ತಿದ್ದಾರೆ.
ಸಾಮಾನ್ಯವಾಗಿ ವಾಹನಗಳ ದಟ್ಟಣೆಯಲ್ಲಿ ಸಿಲುಕುವ ಸಾರ್ವಜನಿಕರಿಗಿಂತ ರಸ್ತೆಗಳಲ್ಲಿ ನಿರಂತರವಾಗಿ ಕೆಲಸ ಮಾಡುವ ಸಿಬ್ಬಂದಿ ಹೆಚ್ಚು ಹೊತ್ತು ಕಲುಷಿತ ಗಾಳಿಗೆ ಒಡ್ಡಿಕೊಳ್ಳುತ್ತಿದ್ದಾರೆ.
‘ವಾಯು ಆಕ್ಯುಪೇಷನಲ್ ಅಂಡ್ ಎನ್ವಿರಾನ್‌ಮೆಂಟಲ್’ ಸಂಸ್ಥೆಯು ಮೂರು ವರ್ಷಗಳ ಕಾಲ ನಡೆಸಿದ ಅಧ್ಯಯನದಲ್ಲಿ ಈ ವಿಚಾರಗಳು ಬೆಳಕಿಗೆ ಬಂದಿವೆ.
ಸುಮಾರು 10 ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ 4,517 ಬಿಎಂಟಿಸಿ ಚಾಲಕರು, 3,285 ಸಂಚಾರ ಪೊಲೀಸ್ ಸಿಬ್ಬಂದಿ, 2,169 ನಿರ್ಮಾಣ ಕಾರ್ಮಿಕರು ಹಾಗೂ 379 ಪೌರಕಾರ್ಮಿಕರ ಆರೋಗ್ಯವನ್ನು ಪರಿಶೀಲಿಸಲಾಗಿದೆ.
ಅಧ್ಯಯನದ ಪ್ರಕಾರ, ಬಿಎಂಟಿಸಿ ಚಾಲಕರಲ್ಲಿ ಶೇ. 2.6ರಷ್ಟು ಮಂದಿಗೆ ಉಸಿರಾಟದ (Rise in air pollution in Bengaluru) ಸಮಸ್ಯೆ ಕಂಡುಬಂದಿದೆ.
ಪೌರಕಾರ್ಮಿಕರಲ್ಲಿ ಶೇ. 2.3, ನಿರ್ಮಾಣ ಕಾರ್ಮಿಕರಲ್ಲಿ ಶೇ. 2.1 ಹಾಗೂ ಸಂಚಾರ ಪೊಲೀಸ್ ಸಿಬ್ಬಂದಿಯಲ್ಲಿ ಶೇ. 1ರಷ್ಟು ಮಂದಿಗೆ ಇಂತಹ ಸಮಸ್ಯೆಗಳು ಪತ್ತೆಯಾಗಿವೆ.
ಮಾಸ್ಕ್ ಬಳಕೆಯಲ್ಲಿ ನಿರ್ಲಕ್ಷ್ಯವೂ ಆತಂಕಕಾರಿ: ವಾಯುಮಾಲಿನ್ಯದಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಬಳಕೆ ಮುಖ್ಯವಾಗಿದ್ದರೂ, ಹೆಚ್ಚಿನ ಸಿಬ್ಬಂದಿ ಕೆಲಸದ ಸಮಯದಲ್ಲಿ
ಮಾಸ್ಕ್ ಧರಿಸುತ್ತಿಲ್ಲ ಎಂಬುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಶೇ. 88.2ರಷ್ಟು ಬಿಎಂಟಿಸಿ ಚಾಲಕರು ತಾವು ಎಂದಿಗೂ ಮಾಸ್ಕ್ ಬಳಸಿಲ್ಲ ಎಂದು ತಿಳಿಸಿದ್ದಾರೆ.
ಸಂಚಾರ ಪೊಲೀಸ್ ಸಿಬ್ಬಂದಿಯಲ್ಲಿ ಈ ಪ್ರಮಾಣ ಶೇ. 55ರಷ್ಟಿದ್ದರೆ, ನಿರ್ಮಾಣ ಕಾರ್ಮಿಕರಲ್ಲಿ ಶೇ. 37.9 ಹಾಗೂ ಪೌರಕಾರ್ಮಿಕರಲ್ಲಿ ಶೇ. 16.3ರಷ್ಟಿದೆ.
ನಿರಂತರವಾಗಿ ಧೂಳು ಮತ್ತು ವಾಹನಗಳ ಹೊಗೆಗೆ ಒಡ್ಡಿಕೊಳ್ಳುವ ಇವರು ಸೂಕ್ತ ರಕ್ಷಣಾ ಕ್ರಮಗಳನ್ನು ಅನುಸರಿಸದಿರುವುದು ಆರೋಗ್ಯದ ಅಪಾಯವನ್ನು ಮತ್ತಷ್ಟು ಹೆಚ್ಚಿಸಬಹುದು. ಹೀಗಾಗಿ ಕೆಲಸದ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳ ಅನುಷ್ಠಾನ ಅತ್ಯಗತ್ಯವಾಗಿದೆ.
ಬೆಂಗಳೂರಿನ ವಾಯುಮಾಲಿನ್ಯ ಸಮಸ್ಯೆ ಕೇವಲ ಪರಿಸರಕ್ಕೆ ಸೀಮಿತವಾಗಿಲ್ಲ, ಅದು ನಗರದ ದುಡಿಯುವ ವರ್ಗದ ಆರೋಗ್ಯಕ್ಕೂ ಸವಾಲಾಗಿ ಪರಿಣಮಿಸುತ್ತಿದೆ.
ವಾಹನಗಳ ಹೊಗೆ ನಿಯಂತ್ರಣ, ರಸ್ತೆ ಧೂಳನ್ನು ಕಡಿಮೆ ಮಾಡುವುದು, ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವುದು ಹಾಗೂ ಕಟ್ಟಡ ಕಾಮಗಾರಿಗಳಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸುವುದು ಅಗತ್ಯವಾಗಿದೆ.
ವಿಶೇಷವಾಗಿ ಬಿಎಂಟಿಸಿ ಚಾಲಕರು, ಸಂಚಾರ ಪೊಲೀಸರು ಮತ್ತು ಪೌರಕಾರ್ಮಿಕರಿಗೆ ಗುಣಮಟ್ಟದ ರಕ್ಷಣಾತ್ಮಕ ಮಾಸ್ಕ್‌ಗಳನ್ನು ಒದಗಿಸುವುದರ ಜೊತೆಗೆ ನಿಯಮಿತ ಆರೋಗ್ಯ ತಪಾಸಣೆಯ ವ್ಯವಸ್ಥೆಯೂ ಇರಬೇಕು.
ಅಭಿವೃದ್ಧಿಯ ಓಟದಲ್ಲಿ ನಗರದ ಗಾಳಿಯ ಗುಣಮಟ್ಟವನ್ನೂ, ಅದನ್ನೇ ಉಸಿರಾಡಿ ಬದುಕು ಕಟ್ಟಿಕೊಳ್ಳುವ ಕಾರ್ಮಿಕರ ಆರೋಗ್ಯವನ್ನೂ ಮರೆಯಬಾರದು ಎಂಬುದನ್ನು ಈ ಅಧ್ಯಯನ ಎಚ್ಚರಿಸಿದೆ.
ಇದನ್ನು ಓದಿ : https://vijayatimes.com/price-of-coffee-tea-increased/