• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ನಾನು ಹಿಂದಿ ಸಿನಿಮಾ ಮಾಡುವುದಿಲ್ಲ, ನಾನು ಹೆಮ್ಮೆಯ ಕನ್ನಡಿಗ, ಕನ್ನಡಿಗರಿಂದಲೇ ಇಂದು ಈ ಮಟ್ಟದಲ್ಲಿದ್ದೇನೆ : ರಿಷಬ್ ಶೆಟ್ಟಿ

Mohan Shetty by Mohan Shetty
in ಮನರಂಜನೆ
ನಾನು ಹಿಂದಿ ಸಿನಿಮಾ ಮಾಡುವುದಿಲ್ಲ, ನಾನು ಹೆಮ್ಮೆಯ ಕನ್ನಡಿಗ, ಕನ್ನಡಿಗರಿಂದಲೇ ಇಂದು ಈ ಮಟ್ಟದಲ್ಲಿದ್ದೇನೆ : ರಿಷಬ್ ಶೆಟ್ಟಿ
0
SHARES
0
VIEWS
Share on FacebookShare on Twitter

Bengaluru : ಕನ್ನಡದ ಕಾಂತಾರ(Kantara) ಸಿನಿಮಾದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.

ಸಿನಿಮಾ ಸೂಪರ್ ಹಿಟ್ ಆಗಿದ್ದು, ತೆರೆಗೆ ಬಂದು ಒಂದು ತಿಂಗಳು ಕಳೆದರೂ ಮೊದಲ ದಿನದ ಕ್ರೇಜ್ ಹೇಗಿತ್ತೋ ಅದೇ ರೀತಿಯೇ ಇವತ್ತಿನವರೆಗೂ ಕಾಂತಾರ ಕ್ರೇಜ್ ಮುಂದುವರೆದಿದೆ.

hit

ಇಲ್ಲಿವರೆಗೂ, ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಖ್ಯಾತಿಯೂ ಈ ಚಿತ್ರಕ್ಕೆ ಸಲ್ಲುತ್ತದೆ.

ಇಂತಹ ವಿಭಿನ್ನ ಇರುವ ಸಿನಿಮಾವನ್ನ ನೋಡಿ ಜನ ಹೇಗೆ ರಿಯಾಕ್ಟ್ ಮಾಡ್ತಿದ್ದಾರೆ ಎಂದು ತಿಳಿದುಕೊಳ್ಳುವ ಸಲುವಾಗಿ, ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ(Rishab Shetty) ಈಗ ಎಲ್ಲೆಡೆ ಭೇಟಿ ನೀಡುತ್ತಿದ್ದಾರೆ.

ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ, ಮಾಧ್ಯಮಕ್ಕೆ ಸಂದರ್ಶನ ನೀಡಿದ ವೇಳೆ ರಿಷಬ್ ಹೀಗೊಂದು ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಇದು ಕನ್ನಡಿಗರೆಲ್ಲ ಹೆಮ್ಮೆ ಪಡುವಂತೆ ಮಾಡಿದೆ.

ಕಾಂತಾರ ಸಿನಿಮಾದ ಹವಾ ದೊಡ್ಡ ಮಟ್ಟದಲ್ಲಿಯೇ ಮುಂದುವರಿಯುತ್ತಿದ್ದು, ಬಾಲಿವುಡ್ ನಲ್ಲಿ(Bollywood) ಕೂಡ ಈ ಸಿನಿಮಾ ಕಿಚ್ಚು ಜೋರಾಗಿಯೇ ಇದೆ.

ಇದನ್ನೂ ಓದಿ : https://vijayatimes.com/gandadagudi-box-office-collection/

ಬಾಲಿವುಡ್ ಮಂದಿ ಕೂಡ ಈಗ ಹಿಂದಿಗೆ ಡಬ್ ಆಗಿರುವ ಕಾಂತಾರ ಸಿನಿಮಾವನ್ನು ನೋಡಿ ವಾರೆ ವ್ಹಾ ಅಂತಿದ್ದಾರೆ.

ಇಷ್ಟೊಂದು ಕ್ರೇಜ್ ಹುಟ್ಟಿಸಿದ ಕಾಂತಾರ ಚಿತ್ರ ಬಾಲಿವುಡ್ ಬಾಕ್ಸ್ ಆಫೀಸ್ ಅನ್ನೂ ಕೂಡ ಕೊಳ್ಳೆ ಹೊಡೆದಿರುವುದು ವಿಶೇಷ.

ಮುಂಬೈನಲ್ಲಿ ಕೂಡ ಕಾಂತಾರ ಸಿನಿಮಾ ಕಣ್ತುಂಬಿಕೊಳ್ಳಲು ಜನ ಥಿಯೇಟರ್ಗೆ ನುಗ್ಗಿ ಬರುತ್ತಿದ್ದಾರೆ.

ದಕ್ಷಿಣದ ಸ್ಥಳೀಯ ಕಂಟೆಂಟ್ಗಳನ್ನ ಒಪ್ಪಿ ಅಪ್ಪಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಕನ್ನಡ ಸಿನಿಮಾಗಳು ಓಡುವುದು ಕಡಿಮೆ ಎನ್ನುವ ಕಾಲವೊಂದಿತ್ತು.

ಆದರೆ, ಇತ್ತೀಚಿಗೆ ಆ ನಂಬಿಕೆ ಸುಳ್ಳು ಎಂದು ಸಾಬೀತಾಗುತ್ತಿದೆ. ಈ ಹಿಂದೆ ಕೆಆರ್ಜಿಯ ಕೆಜಿಎಫ್ ಕಮಾಲ್ ಮಾಡಿತ್ತು, ಈಗ ಇದೇ ಕೆಆರ್ಜಿಯ ‘ಕಾಂತಾರ’ ಇಡೀ ಬಾಲಿವುಡ್ ನಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ.

rishab shetty


ಸದ್ಯ, ಬಾಲಿವುಡ್ ನಲ್ಲಿ ರಿಷಬ್ ಶೆಟ್ಟಿಯ ಕ್ರೇಜ್ ತುಂಬಾ ಇದೆ. ಸಿನಿಮಾ ನೋಡಿದ ಮುಂಬೈ ಮಂದಿ ರಿಷಬ್ ಜೊತೆಗೆ ಒಂದು ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಮುಗಿ ಬೀಳುತ್ತಿದ್ದಾರೆ.

ಇಷ್ಟೊಂದು ಹವಾ ಕ್ರಿಯೇಟ್ ಮಾಡಿರೋ ರಿಷಬ್ ಶೆಟ್ಟಿ ಎಂದರೆ ಕನ್ನಡಿಗರಿಗೆ ಒಂದು ರೀತಿಯ ಹೆಮ್ಮೆ.

ರಿಷಬ್ ಶೆಟ್ಟಿಯನ್ನು ಮಾತನಾಡಿಸಲು ಬಾಲಿವುಡ್ ಮಾಧ್ಯಮಗಳೂ ಕೂಡ ಮುಗಿ ಬೀಳುತ್ತಿವೆ. ಪ್ರಶ್ನೆ ಮೇಲೆ ಪ್ರಶ್ನೆ ಹಾಕಿ ಕಾಂತಾರ ಚಿತ್ರದ ಕ್ರೇಜನ್ನು ಇನ್ನಷ್ಟು ಹೆಚ್ಚಿಸುತ್ತಿವೆ.

ಮಾಧ್ಯಮಗಳು ಹಿಂದಿಯಲ್ಲಿ ಕೇಳುವ ಪ್ರಶ್ನೆಗಳಿಗೆ ರಿಷಬ್ ಕೂಡ ಹಿಂದಿಯಲ್ಲಿಯೇ ಉತ್ತರ ನೀಡಿದ್ದಾರೆ.

ಇದನ್ನೂ ಓದಿ : https://vijayatimes.com/kantara-to-ott/

ಹೌದು, ರಿಷಬ್ ಶೆಟ್ಟಿ ಬಾಲಿವುಡ್ ಮಾಧ್ಯಮಗಳ ಹಲವಾರು ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಈ ಸಂದರ್ಶನದಲ್ಲಿ ತೂರಿ ಬಂದ ಒಂದು ಪ್ರಶ್ನೆ, ರಿಷಬ್ ಬಾಲಿವುಡ್ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಾರಾ ಎಂದಾಗಿತ್ತು.

ಇದಕ್ಕೆ ರಿಷಬ್ ಕೊಟ್ಟ ಉತ್ತರ ಸದ್ಯ ವೈರಲ್(Viral) ಆಗ್ತಿದೆ.


“ನಾನು ಹೆಮ್ಮೆಯ ಕನ್ನಡಿಗ, ಕನ್ನಡದ ಜನರಿಂದಾಗಿಯೇ ನಾನು ಇಂದು ಈ ಮಟ್ಟದಲ್ಲಿದ್ದೇನೆ. ನಾನು ಹಿಂದಿ ಸಿನಿಮಾ ಮಾಡುವುದಿಲ್ಲ.

ಬದಲಾಗಿ ನನ್ನ ಕನ್ನಡ ಸಿನಿಮಾಗಳನ್ನೇ ಹಿಂದಿಗೆ ಡಬ್ ಮಾಡುವೆ. ಹಿಂದಿ ಚಿತ್ರರಂಗಕ್ಕೆ ಬರುವ ಪ್ಲಾನ್ ಏನೂ ಇಲ್ಲ” ಎನ್ನುವ ಅರ್ಥದಲ್ಲಿಯೇ ರಿಷಬ್ ಶೆಟ್ಟಿ ರಿಯಾಕ್ಟ್ ಮಾಡಿದ್ದಾರೆ.

Rishab About Kannadigas

ರಿಷಬ್ ಶೆಟ್ಟಿ ತಮ್ಮ ಕಾಂತಾರ ಚಿತ್ರದ ಬಗ್ಗೆ ತುಂಬಾ ಮಾತನಾಡಿದ್ದಾರೆ. ನಾನು ಸ್ಥಳೀಯ ಕಂಟೆಟ್ ನ ಸಿನಿಮಾ ಮಾಡಿದ್ದೇನೆ, ಇದನ್ನ ಜನರು ಒಪ್ಪಿಕೊಂಡಿದ್ದಾರೆ.

ಕನ್ನಡ ಜನತೆ ಪ್ರೀತಿಯಿಂದ ನಮ್ಮ ಸಿನಿಮಾವನ್ನು ಒಪ್ಪಿಕೊಂಡಂತೆ, ಬಾಲಿವುಡ್ ಮಂದಿನೂ ಸಿನಿಮಾವನ್ನು ರಿಸೀವ್ ಮಾಡಿದ್ದಾರೆ ಎಂದು ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : https://vijayatimes.com/kantara-box-office-movie/

ಹೀಗೆ, ಕನ್ನಡದ ಕಾಂತಾರ ಸಿನಿಮಾದ ತನ್ನ ಯಶಸ್ವಿ ಪಯಣವನ್ನ ಇನ್ನೂ ಮುಂದುವರೆಸಿದೆ. ಸದ್ಯ ಕಾಂತಾರ ಕ್ರೇಜ್ ಇನ್ನೂ ನಿಲ್ಲುವಂತೆ ಕಾಣೋದಿಲ್ಲ, ಈ ಮೂಲಕ ಕನ್ನಡದ ಹೆಮ್ಮೆಯನ್ನೇ ಕಾಂತಾರ ಹೆಚ್ಚಿಸುತ್ತ ಸಾಗುತ್ತಿದೆ.

  • ಪವಿತ್ರ
Tags: KantaraKarnatakaRishab Shetty

Related News

‘ಜವಾನ್’ ಅಬ್ಬರ: ವಿಶ್ವಾದ್ಯಂತ ತೆರೆಯ ಮೇಲೆ ‘ಜವಾನ್‌’, ದಾಖಲೆ ಬರೆಯಲು ಶಾರುಖ್ ಖಾನ್‌ ರೆಡಿ!
ದೇಶ-ವಿದೇಶ

‘ಜವಾನ್’ ಅಬ್ಬರ: ವಿಶ್ವಾದ್ಯಂತ ತೆರೆಯ ಮೇಲೆ ‘ಜವಾನ್‌’, ದಾಖಲೆ ಬರೆಯಲು ಶಾರುಖ್ ಖಾನ್‌ ರೆಡಿ!

September 8, 2023
ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನಮ್ಮ ಅಪ್ಪನಿಗೆ ಹುಟ್ಟಿದ್ದೇನೆ’. ನಾನು ಧರ್ಮದ ವಿರೋಧಿ ಅಲ್ಲ, ನರೇಂದ್ರ ಮೋದಿಯ ವಿರೋಧಿ ಪ್ರಕಾಶ್ ರೈ
ಪ್ರಮುಖ ಸುದ್ದಿ

ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನಮ್ಮ ಅಪ್ಪನಿಗೆ ಹುಟ್ಟಿದ್ದೇನೆ’. ನಾನು ಧರ್ಮದ ವಿರೋಧಿ ಅಲ್ಲ, ನರೇಂದ್ರ ಮೋದಿಯ ವಿರೋಧಿ ಪ್ರಕಾಶ್ ರೈ

September 7, 2023
ರಮ್ಯಾ ಆಘಾತ: ರಮ್ಯಾಗೆ ಹೃದಯಾಘಾತ ಸುದ್ದಿ ವೈರಲ್ ! ಈ ಸುದ್ದಿ ಸುಳ್ಳಾಗಿದ್ದು ಯೂರೋಪ್ ಪ್ರವಾಸದಲ್ಲಿ ರಮ್ಯಾ
Vijaya Time

ರಮ್ಯಾ ಆಘಾತ: ರಮ್ಯಾಗೆ ಹೃದಯಾಘಾತ ಸುದ್ದಿ ವೈರಲ್ ! ಈ ಸುದ್ದಿ ಸುಳ್ಳಾಗಿದ್ದು ಯೂರೋಪ್ ಪ್ರವಾಸದಲ್ಲಿ ರಮ್ಯಾ

September 6, 2023
ನಟ ಶಾರುಖ್ ಖಾನ್ ನಿವಾಸ ʼಮನ್ನತ್ʼ ಮುಂದೆ ಭಾರೀ ಪ್ರತಿಭಟನೆ ; ಕಾರಣವೇನು..?!
ಪ್ರಮುಖ ಸುದ್ದಿ

ನಟ ಶಾರುಖ್ ಖಾನ್ ನಿವಾಸ ʼಮನ್ನತ್ʼ ಮುಂದೆ ಭಾರೀ ಪ್ರತಿಭಟನೆ ; ಕಾರಣವೇನು..?!

August 28, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.