Panaji : ಒಂದು ಸಿನಿಮಾ ಹೆಚ್ಚು ಸ್ಥಳೀಯ ಮತ್ತು ಮೂಲ ಬೇರುಗಳನ್ನು ಹೊಂದಿದ್ದರೆ, ಅದು ಹೆಚ್ಚು ಸಾರ್ವತ್ರಿಕವಾಗುತ್ತದೆ. ಆಗ ಸಿನಿಮಾಗಳು ಭಾಷೆಯ ಗಡಿ ದಾಟುತ್ತವೆ ಎಂದು ಕಾಂತಾರ(Kantara) ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ(Rishab Shetty) ಅಭಿಪ್ರಾಯಪಟ್ಟಿದ್ದಾರೆ.

ಗೋವಾದಲ್ಲಿ(Goa) ನಡೆಯುತ್ತಿರುವ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂವಾದಾತ್ಮಕ ಅಧಿವೇಶನದಲ್ಲಿ ಭಾಗವಹಿಸಿ, ‘ಕಾಂತಾರ’ ಯಶಸ್ಸಿನಿಂದ ಹಿಡಿದು ಅವರು ಚಲನಚಿತ್ರೋದ್ಯಮಕ್ಕೆ ಹೇಗೆ ಪ್ರವೇಶಿಸಿದರು ಮತ್ತು ಪ್ಯಾನ್-ಇಂಡಿಯನ್(Pan India) ಚಲನಚಿತ್ರಗಳ ಪರಿಕಲ್ಪನೆಯವರೆಗೆ ಹಲವಾರು ವಿಷಯಗಳ ಬಗ್ಗೆ ಅವರು ಮಾತನಾಡಿದರು.
ಇಂದು ಸಿನಿಮಾಗಳು ಭಾಷೆಯ ಗಡಿ ದಾಟುತ್ತಿವೆ. ಭಾರತೀಯ ಸಿನಿಮಾವನ್ನು ವಿವಿಧ ಭಾಷೆಗಳಲ್ಲಿ ಪ್ರಸ್ತುತ ಪಡಿಸಲಾಗುತ್ತದೆ. ಒಂದು ವಿಷಯವು ಪ್ರೇಕ್ಷಕರೊಂದಿಗೆ ಸಂಪರ್ಕಗೊಂಡರೆ, ಚಲನಚಿತ್ರವನ್ನು ಅಖಿಲ ಭಾರತೀಯ ಚಲನಚಿತ್ರವಾಗಿ ಸ್ವೀಕರಿಸಲಾಗುತ್ತದೆ. ಒಂದು ಚಲನಚಿತ್ರವು ಹೆಚ್ಚು ಸ್ಥಳೀಯ ಮತ್ತು ಬೇರೂರಿದೆಯಾದರೆ,
ಇದನ್ನೂ ಓದಿ : https://vijayatimes.com/health-tips-of-groundnuts/
ಅದು ಹೆಚ್ಚಿನ ಸಾರ್ವತ್ರಿಕ ಆಕರ್ಷಣೆಯನ್ನು ಹೊಂದಿರುತ್ತದೆ ಎಂಬುದು ನನ್ನ ನಂಬಿಕೆ ಎಂದು ರಿಷಬ್ ಶೆಟ್ಟಿ ಹೇಳಿದರು. 90ರ ದಶಕದ ಉತ್ತರಾರ್ಧದಲ್ಲಿ ಪ್ರಾದೇಶಿಕ ಚಿತ್ರಗಳು ಪಾಶ್ಚಿಮಾತ್ಯ ಚಲನಚಿತ್ರಗಳ ಪ್ರಭಾವವನ್ನು ಹೊಂದಿದ್ದವು. ಆದರೆ ಇಂದು ಅನೇಕರು ಸ್ಥಳೀಯ ಸಂಸ್ಕೃತಿಯನ್ನು ಸಂಯೋಜಿಸುತ್ತಿದ್ದಾರೆ ಮತ್ತು ವೈವಿಧ್ಯತೆಯು ಅವರಿಗೆ ಹೆಚ್ಚು ಅಗತ್ಯವಿರುವ ಚೈತನ್ಯ ನೀಡಿದೆ.

ಅದನ್ನು ಪ್ರೇಕ್ಷಕರು ಸ್ವೀಕರಿಸಿದ್ದಾರೆ. ಅವರ ಅಭಿಪ್ರಾಯಗಳನ್ನು ಬೆಂಬಲಿಸಲು, ಭಾಷೆಯ ತಡೆಗೋಡೆಯ ಹೊರತಾಗಿಯೂ ಭಾರತದಾದ್ಯಂತ ಜನರು ಕಾಂತಾರವನ್ನು ಒಪ್ಪಿಕೊಂಡಿದ್ದಾರೆ. ಏಕೆಂದರೆ ಪ್ರೇಕ್ಷಕರು ವಿಷಯದೊಂದಿಗೆ ಉತ್ತಮವಾಗಿ ಸಂಪರ್ಕ ಸಾಧಿಸಬಹುದು ಎಂದು ರಿಷಬ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : https://vijayatimes.com/koragajja-nemotsava-stopped/
ಇನ್ನು ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಲನಚಿತ್ರವಾಗಿದೆ. ಕನ್ನಡ ಕೆಜಿಎಫ್ 2(KGF 2) ದಾಖಲೆಯನ್ನು ಕಾಂತಾರ ಹಿಂದಿಕ್ಕಿದೆ. ಈ ವರ್ಷ ಅತಿಹೆಚ್ಚು ಗಳಿಕೆ ಕಂಡ 6ನೇ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಕಾಂತಾರ ಚಿತ್ರ ಪಾತ್ರವಾಗಿದೆ.

ಕರ್ನಾಟಕದ ನೈಋತ್ಯ ಭಾಗವಾದ ತುಳುನಾಡಿನಲ್ಲಿ ಪ್ರಚಲಿತದಲ್ಲಿರುವ ಜಾನಪದ ಮತ್ತು ಸಂಸ್ಕೃತಿಗಳನ್ನು ಒಳಗೊಂಡಿರುವ ಈ ಚಲನಚಿತ್ರವು ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿಯನ್ನು ಪಡೆಯುತ್ತಿದೆ.
- ಮಹೇಶ್.ಪಿ.ಎಚ್