ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ಡೈರೆಕ್ಷನ್ ಮೂಲಕ ಸಿನಿ ರಂಗದಲ್ಲಿ ಗುರುತಿಸಿಕೊಂಡ ನಿರ್ದೇಶಕ , ನಟ ರಿಷಬ್ ಶೆಟ್ಟಿ, ಗಾಂಧಿನಗರದಲ್ಲಿ ಈಗಾಗಲೇ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ , ಬೆಲಬಾಟಮ್ ನಲ್ಲಿ ಮಿಂಚಿದ ರಿಷಬ್ ಸದ್ಯ ಹರಿಕಥೆಯಲ್ಲ ಗಿರಿಕಥೆ ಅನ್ನೋ ಸಿನಿಮಾ ಕಥೆಯಲ್ಲಿ ಬ್ಯುಸಿಯಾಗಿದ್ದಾರೆ.
ಕಷ್ಟದಲ್ಲೇ ಬೆಳೆದಿರೋ ರಿಷಬ್ ಸಿನಿಮಾ ಕ್ಷೇತ್ರಕ್ಕೆ ಬರಬೇಕು ಅನ್ನೋ ಕನಸನ್ನು ಚಿಕ್ಕವಯಸ್ಸಿನಲ್ಲೇ ಕನಸುಕಂಡಿದ್ರು ,ಅದಕ್ಕಾಗಿ ಕಷ್ಟಪಟ್ಟಿದ್ದಾರೆ . ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಮಾಡಿರೊ ರಿಷಬ್ ಸಿನಿ ಇಂಡಸ್ಟ್ರಿಗೆ ಸೇರೋ ಮುಂಚೆ ಬಿಸಿಲರಿ ಸೇಲ್ ಮಾಡಿದ್ದಾರೆ .. ಜೊತೆಗೆ ಹಲವು ಚಿಕ್ಕಪುಟ್ಟ ಕೆಲಸಗಳನ್ನು ಮಾಡಿ ತಮ್ಮ ಕನಸಿನಂತೆ ಡೈರೆಕ್ಟರ್ ಕ್ಯಾಪ್ ತೊಟ್ಟು ಸಿನಿಮಾದಲ್ಲಿ ಸಕ್ಸಸ್ ಕಂಡಿದ್ದಾರೆ.
ಕುಟುಂಬ ವಿಚಾರಕ್ಕೆ ಬಂದ್ರೆ ಪ್ರಗತಿಯನ್ನು ಲವ್ ಮಾಡಿ ಮದುವೆಯಾಗಿರೋ ರಿಷಬ್ ಗೆ ಪುಟ್ಟದಾದ ಗಂಡುಮಗುವೊಂದಿದೆ..
ತನ್ನ ಮಗನನ್ನು ಕಲಿತು ಇಂಜನಿಯರಿಂಗ್ ಡಾಕ್ಟರ್ ಮಾಡಬೇಕು ಅನ್ನೋ ಕನಸನ್ನು ರಿಷಬ್ ಹೊಂದಿಲ್ಲ ಬದಲಾಗಿ ಸಮಾಜಕ್ಕೆ ತನ್ನ ಮಗ ಮಾದರಿಯಾಗಬೇಕೆನ್ನುದೆ ತನ್ನ ಆಸೆ ಎಂದಿದ್ದಾರೆ . ಜೊತೆಗೆ ಖಿನ್ನತೆ ಬಗ್ಗೆ ವಿಜಯ ಟೈಮ್ಸ್ ಜೊತೆ ಮಾತನಾಡಿರೋ ರಿಷಬ್ ಖಿನ್ನತೆ ಅನ್ನೋದು ಪ್ರತಿಕ್ಷೇತ್ರದಲ್ಲೂ ಇದೆ. ಯಾರು ಖಿನ್ನತೆಗೆ ಒಳಗಾಗಬಾರದು . ಬದಲಾಗಿ ಎಲ್ಲವನ್ನೂ ಖುಷಿಯಾಗಿ ಸ್ವೀಕರಿಸಬೇಕು ಎಂದಿದ್ದಾರೆ ..
ವಿಜಯಟೈಮ್ಸ್ ಜೊತೆ ರಿಷಬ್ ಶೆಟ್ಟಿ ಮನಬಿಜ್ಜಿ ಮಾತನಾಡಿದ್ದು ಹೀಗಿದೆ ನೋಡಿ ..