Rishab Shetty slams Bollywood for negative depictions of India at global festivals
Bengaluru: ‘ಕಾಂತಾರ’ (Kantara) ಸಿನಿಮಾದ ಮೂಲಕ ದೇಶಾದ್ಯಂತ ಮನೆಮಾತಾಗಿದ್ದ ನಟ ರಿಷಬ್ ಶೆಟ್ಟಿ (Rishab Shetty) ಯವರು ಇದೀಗ ಆ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದು, ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಘೋಷಣೆಯಾದ ಬಳಿಕ ಅವರ ನೀಡಿರುವ ಹೇಳಿಕೆಯೊಂದು ಎಲ್ಲೆಡೆ ಭಾರಿ ಚರ್ಚೆಗೆ ಕಾರಣವಾಗ್ತಿದೆ. ಅದರಲ್ಲೂ ಬಾಲಿವುಡ್ ತಾರೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಚರ್ಚೆಗೆ ಕಾರಣವಾದ ಹೇಳಿಕೆ ಏನು?
“ಬಾಲಿವುಡ್ನಲ್ಲಿ (Bollywood) ಭಾರತದ ಬಗ್ಗೆ ಕೇವಲವಾಗಿ, ಕೆಟ್ಟದಾಗಿ ತೋರಿಸಿ, ಅದನ್ನು ಕಲಾತ್ಮಕ ಸಿನಿಮಾಗಳು ಅಂತ ಹೇಳಿ, ಹೊರಗಡೆ ಫೆಸ್ಟಿವಲ್ಗಳಿಗೆ ಹೋಗಿ ಪ್ರಶಸ್ತಿಗಳನ್ನ ಪಡೆದುಕೊಂಡು ಬಂದಿರುವುದನ್ನು ಗಮನಿಸಿದ್ದೇನೆ. ನಮ್ಮ ದೇಶ ನಮ್ಮ ಹೆಮ್ಮೆ. ನನ್ನ ರಾಜ್ಯ ನನ್ನ ಹೆಮ್ಮೆ. ನನ್ನ ಭಾಷೆ ನನ್ನ ಹೆಮ್ಮೆ. ಹೀಗಿರುವಾಗ ನಾನ್ಯಾಕೆ ಅದನ್ನು ಪಾಸಿಟಿವ್ ಆಗಿ ತೋರಿಸಬಾರದು? ನಮ್ಮಲ್ಲಿರುವ ಪಾಸಿಟಿವ್ (Positive) ವಿಚಾರಗಳನ್ನು ಪಾಸಿಟಿವ್ ಆಗಿಯೇ ತೋರಿಸಬಹುದಲ್ಲ” ಎಂದು ರಿಷಬ್ ಶೆಟ್ಟಿ ಹೇಳಿದ್ದರು.
ಹೇಳಿದ್ದು ಎಲ್ಲಿ?
ರಿಷಬ್ ಶೆಟ್ಟಿ ಅವರು ಮೆಟ್ರೋ ಸಾಗಾ (Metro Saga) ಎಂಬ ಯೂಟ್ಯೂಬ್ ಚಾನೆಲ್ಗೆ (YouTube Channel) ಸಂದರ್ಶನ ನೀಡುತ್ತಿದ್ದ ವೇಳೆ ಅಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ. ಸದ್ಯ ಈ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಇಡೀ ಸಂದರ್ಶನದಲ್ಲಿ ಇದಿಷ್ಟು ಹೇಳಿಕೆ ಮಾತ್ರ ಸಾಕಷ್ಟು ವೈರಲ್ ಆಗುತ್ತಿದೆ. ಅಲ್ಲದೆ, ರಿಷಬ್ ಶೆಟ್ಟಿ ನೀಡಿರುವ ಹೇಳಿಕೆ ಮೇಲೆ ಪರ-ವಿರೋಧ ಚರ್ಚೆ ಆರಂಭವಾಗಿದೆ.
‘ಕಾಂತಾರ’ ಚಿತ್ರದಲ್ಲಿನ ಕೆಲವೊಂದು ಸೀನ್ಗಳನ್ನು ಉದಾಹರಿಸಿ, ರಿಷಬ್ ಶೆಟ್ಟಿ ಅವರನ್ನು ಟೀಕೆ ಮಾಡಲಾಗುತ್ತಿದೆ. ಇನ್ನೂ ಕೆಲ ಮಂದಿ ರಿಷಬ್ ಶೆಟ್ಟಿ ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಪರವಾಗಿ ಟ್ವೀಟ್ಗಳನ್ನು (Tweet) ಮಾಡುತ್ತಿದ್ದಾರೆ.
ನಟ ಮತ್ತು ನಿರ್ದೇಶಕರಾಗಿ ಯಶಸ್ಸು ಕಂಡಿರುವ ರಿಷಬ್ ಶೆಟ್ಟಿ, ಆನಂತರ ನಿರ್ಮಾಪಕರಾಗಿ ಬೇರೆ ನಿರ್ದೇಶಕ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಅವರ ನಿರ್ಮಾಣದ ‘ಪೆದ್ರೋ’, ‘ಶಿವಮ್ಮ’ (Shivamma) ಸಿನಿಮಾಗಳು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ಗಳಲ್ಲಿ ಪ್ರದರ್ಶನ ಕಂಡು, ಹೆಸರು ಸಂಪಾದಿಸಿವೆ. ದೊಡ್ಡ ದೊಡ್ಡ ಅವಾರ್ಡ್ಗಳನ್ನು ಪಡೆದುಕೊಂಡಿವೆ. ಫಿಲ್ಮ್ ಫೆಸ್ಟಿವಲ್ಗಳಲ್ಲೇ (Film Festival) ಹೆಚ್ಚು ಪ್ರದರ್ಶನವಾಗುತ್ತಿದ್ದ ‘ಶಿವಮ್ಮ’ ಸಿನಿಮಾವನ್ನು ಈಚೆಗೆ ಚಿತ್ರಮಂದಿರದಲ್ಲೂ ರಿಲೀಸ್ ಮಾಡಿದ್ದರು ರಿಷಬ್ ಶೆಟ್ಟಿ.
Rishab Shetty Viral Statement in kannada
Bengaluru: Actor Rishab Shetty, who became a household name across the country through the movie 'Kantara', has now also received the National Award for his performance in that film, and his statement after the announcement of the 'Best Actor' National Award has caused a huge debate everywhere. Especially, he is the target of Bollywood stars.
What is the statement that led to the debate?
"Bollywood only shows bad things about India, calling them art films, I have seen them go to festivals and get awards. Our country is our pride. My state is my pride. My language is my pride. So why can't I show it in a positive way? The positive that we have. (Positive) ideas cannot be shown in a positive way," Rishabh Shetty said.
Where did you say?
Rishabh Shetty spoke about this issue when he was giving an interview to the YouTube Channel called Metro Saga. Now this statement is national news. In the entire interview, only this statement is going viral. Also, a pro-opposition discussion has started on the statement given by Rishabh Shetty.
Rishabh Shetty is being criticized citing some scenes in the movie 'Kantara'. Some people are tweeting on behalf of Rishabh Shetty saying that there is something wrong with what he said
Rishabh Shetty, who has seen success as an actor and director, has been producing films for other directors as a producer. His movies 'Pedro' and 'Shivamma' have been screened at international film festivals and have gained fame. Received major awards. Rishabh Shetty had recently released the movie 'Shivamma' which was being screened at film festivals.