ಬೆಂಗಳೂರು, ಫೆ. 11: ಕೊರೊನಾ ಸೋಂಕಿನ ಆರ್ಭಟ ಕಡಿಮೆಯಾಗುತ್ತಿದ್ದಂತೆ ಸಾಲು ಸಾಲು ಚಿತ್ರಗಳು ಬೆಳ್ಳಿತೆರೆಗೆ ಲಗ್ಗೆ ಇಡುತ್ತಿವೆ. ಈಗಾಗಲೇ ಹಲವು ಸ್ಟಾರ್ ನಟರ ಚಿತ್ರಗಳು ಬಿಡುಗಡೆಗೆ ದಿನಾಂಕ ನಿಗದಿಯಾಗಿವೆ. ಈ ಸಾಲಿಗೆ ಹೊಸ ಸೇರ್ಪಡೆಯಾಗಿ ರಿಷಭ್ ಶೆಟ್ಟಿ ಅಭಿನಯದ ‘ಹೀರೋ’ ಚಿತ್ರ ಸೇರಿಕೊಂಡಿದೆ.
ಕೊರೊನಾ ನಡುವೆಯೇ ಸದ್ದಿಲ್ಲದೆ ನಿರ್ಮಾಣವಾಗಿರುವ ಹೀರೋ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಇದೀಗ ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಗೊಳಿಸಿರುವ ಚಿತ್ರತಂಡ ಮಾರ್ಚ್ 5ರಂದು ಬಿಡುಗಡೆ ಮಾಡಲು ತೀರ್ಮಾನಿಸಿದೆ. ಈ ಹಿಂದೆ ಹೀರೋ ಸಿನಿಮಾದ ಪುಟ್ಟ ವಿಡಿಯೋ ಹಾಗೂ ಒಂದು ಫಸ್ಟ್ಲುಕ್ ಪೋಸ್ಟರ್ ಹಂಚಿಕೊಂಡಿದ್ದರು. ಇತ್ತೀಚೆಗಷ್ಟೆ ಹೀರೋ ಚಿತ್ರದ ಟ್ರೇಲರ್ ರಿಲೀಸ್ ಆಗಿತ್ತು. ಸಿನಿಮಾದ ಟ್ರೇಲರ್ಗೆ ಅಭಿಮಾನಿಗಳಿಂದ
ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು.
ಸಿನಿಮಾದ ಟ್ರೇಲರ್ ನೋಡಿದ ಅಭಿಮಾನಿಗಳು ಚಿತ್ರದ ರಿಲೀಸ್ ದಿನಾಂಕ ಯಾವಾಗ ಎಂದು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಈ ಕುತೂಹಲಕ್ಕೆ ತೆರೆ ಎಳೆದಿರುವ ಚಿತ್ರತಂಡ ರಿಷಭ್ ಶೆಟ್ಟಿ ಹಾಗೂ
ಗಾನವಿ ಲಕ್ಷ್ಮಣ್ ಅಭಿನಯದ ಹೀರೋ ಸಿನಿಮಾ ಮಾರ್ಚ್ 5ಕ್ಕೆ ತೆರೆ ಕಾಣಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟಿಸಿದೆ.