New Delhi : ಪ್ರಧಾನಿ ನರೇಂದ್ರ ಮೋದಿಯವರನ್ನು(Narendra Modi) ಭೇಟಿಯಾದ ನಂತರ ಬ್ರಿಟನ್ ಪ್ರಧಾನಿ ರಿಷಿ ಸುನಕ್(Rishi Sunak To India) ಅವರು 3,000 ಭಾರತೀಯರಿಗೆ ವೀಸಾಗಳನ್ನು ನೀಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಪ್ರತಿ ವರ್ಷ ಭಾರತದ ಯುವ ವೃತ್ತಿಪರರಿಗೆ ಯುಕೆಯಲ್ಲಿ ಕೆಲಸ ಮಾಡಲು 3,000 ವೀಸಾ ನೀಡುವ ಯೋಜನೆಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಅನುಮೋದನೆ ನೀಡಿದ್ದಾರೆ.
ಇಂತಹ ಯೋಜನೆಯಿಂದ ಪ್ರಯೋಜನ ಪಡೆಯುವ ಮೊದಲ ರಾಷ್ಟ್ರ ಭಾರತ ಎಂದು ಬ್ರಿಟನ್ ಸರ್ಕಾರ(Rishi Sunak To India) ಹೇಳಿದೆ.
ಕಳೆದ ವರ್ಷ ಒಪ್ಪಿಕೊಂಡಿರುವ ಯುಕೆ-ಭಾರತ ವಲಸೆ ಮತ್ತು ಚಲನಶೀಲ ಪಾಲುದಾರಿಕೆಯ ಬಲವನ್ನು ಎತ್ತಿ ತೋರಿಸುತ್ತದೆ. ಇಂದು ಬ್ರಿಟನ್-ಭಾರತ “ಯಂಗ್ ಪ್ರೊಫೆಷನಲ್ಸ್ ಸ್ಕೀಮ್” ಅನ್ನು ದೃಢೀಕರಿಸಲಾಗಿದೆ.
18-30 ವರ್ಷ ವಯಸ್ಸಿನ ಪದವಿ ಶಿಕ್ಷಣ ಭಾರತೀಯ ಪ್ರಜೆಗಳಿಗೆ ಎರಡು ವರ್ಷಗಳವರೆಗೆ ವಾಸಿಸಲು ಮತ್ತು ಕೆಲಸ ಮಾಡಲು ಯುಕೆಗೆ ಬರಲು 3,000 ವೀಸಾಗಳನ್ನು ನೀಡಲಾಗುತ್ತದೆ ಎಂದು ಯುಕೆ ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
ಇದನ್ನೂ ಓದಿ : https://vijayatimes.com/murderer-aftab-amin/
ಇನ್ನು ಜಿ-20 ಶೃಂಗಸಭೆಯ 17ನೇ ಆವೃತ್ತಿಯಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಕೆಲವೇ ಗಂಟೆಗಳ ನಂತರ ಈ ಘೋಷಣೆ ಬಂದಿದೆ.
ಕಳೆದ ತಿಂಗಳು ಮೊದಲ ಭಾರತೀಯ ಮೂಲದ ಬ್ರಿಟಿಷ್ ಪ್ರಧಾನಿ ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮೊದಲ ಸಭೆಯಾಗಿದೆ.
“ಈ ಯೋಜನೆಯಿಂದಾಗಿ ಭಾರತದೊಂದಿಗಿನ ನಮ್ಮ ದ್ವಿಪಕ್ಷೀಯ ಸಂಬಂಧ ಮತ್ತು ನಮ್ಮ ಎರಡೂ ಆರ್ಥಿಕತೆಗಳನ್ನು ಬಲಪಡಿಸಲು ಇಂಡೋ-ಪೆಸಿಫಿಕ್ ಪ್ರದೇಶದೊಂದಿಗೆ ಬಲವಾದ ಸಂಪರ್ಕಗಳನ್ನು
ರೂಪಿಸುವ ಬ್ರಿಟನ್ ವ್ಯಾಪಕ ಬದ್ಧತೆಗೆ ಮಹತ್ವದ ಕ್ಷಣವಾಗಿದೆ” ಎಂದು ಯುಕೆ ಪ್ರಧಾನ ಮಂತ್ರಿ ಕಚೇರಿ ಟ್ವೀಟ್(Tweet) ಮಾಡಿದೆ.
ಇಂಡೋ-ಪೆಸಿಫಿಕ್ ಪ್ರದೇಶದ ಯಾವುದೇ ದೇಶಕ್ಕಿಂತ ಬ್ರಿಟನ್ ಭಾರತದೊಂದಿಗೆ ಹೆಚ್ಚಿನ ಸಂಪರ್ಕವನ್ನು ಹೊಂದಿದೆ.
ಬ್ರಿಟನ್ನಲ್ಲಿರುವ ಎಲ್ಲಾ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಪೈಕಿ ಸುಮಾರು ಕಾಲು ಭಾಗದಷ್ಟು ಜನರು ಭಾರತದಿಂದ ಬಂದವರು. ಬ್ರಿಟನ್ಗೆ ಭಾರತೀಯ ಹೂಡಿಕೆಯು 95,000 ಉದ್ಯೋಗಗಳನ್ನು ಬೆಂಬಲಿಸುತ್ತದೆ.
ಇದನ್ನೂ ಓದಿ : https://vijayatimes.com/students-stunts-video-viral/
ಬ್ರಿಟನ್ ಪ್ರಸ್ತುತ ಭಾರತದೊಂದಿಗೆ ವ್ಯಾಪಾರ ಒಪ್ಪಂದದ ಮಾತುಕತೆ ನಡೆಸುತ್ತಿದೆ.
ಒಪ್ಪಿಗೆ ನೀಡಿದರೆ ಅದು ಯುರೋಪಿಯನ್ ರಾಷ್ಟ್ರದೊಂದಿಗೆ ಭಾರತ ಮಾಡಿದ ಮೊದಲ ಒಪ್ಪಂದವಾಗಲಿದೆ ಎಂದು ಯುಕೆ ಪ್ರಧಾನ ಮಂತ್ರಿ ಕಚೇರಿ ಹೇಳಿದೆ.
- ಮಹೇಶ್.ಪಿ.ಎಚ್