ಕೋವಿಡ್ (Covid) ಅಥವಾ ಕೊರೋನಾ (Corona)…. ವಿಶ್ವವನ್ನೇ ಬೆಚ್ಚಿಬೀಳಿಸಿದ ಕಾಯಿಲೆ (Disease), ಆ ಸಂದರ್ಭದಲ್ಲಿ ಎಲ್ಲೆಡೆ ನೋಡಿದ್ರು ಸಾವು ನೋವಿನ ಸಂಗತಿಯೇ ಹೆಚ್ಚು.ಇದೇ ಕೋವಿಡ್ ದೇಶವನ್ನು ಸಹ ಬೆಚ್ಚಿಬೀಳಿಸಿತ್ತು (Shocked).ಕೋವಿಡ್ ಲಸಿಕೆ (Covid vaccine) ಕಂಡುಹಿಡಿದ ಬಳಿಕ ದೇಶವೇ ನಿಟ್ಟಿಸಿರು ಬಿಟ್ಟಿತ್ತು.ಲಸಿಕೆ ಹಾಕಿಸಿಕೊಂಡು ಕೊರೋನಾದಿಂದ ಮುಕ್ತಿ ಪಡೆದದ್ದು ಒಂದೆಡೆಯಾದರೆ, ಲಸಿಕೆಯಿಂದ ಉಂಟಾಗಿರುವ ಅಡ್ಡಪರಿಣಾಮಗಳ ಬಗ್ಗೆ ಸಂಶೋಧನೆ (Research) ಕಾರ್ಯ ನಡೆಯುತ್ತಲೇ ಇದೆ.ಆದರೆ ಇತ್ತೀಚಿಗೆ ನಡೆದ ಒಂದು ಸಂಶೋಧನೆಯಿಂದ ಅಚ್ಚರಿಯ ಸಂಗತಿ ಬಹಿರಂಗವಾಗಿದೆ.
ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲಿ ಹೃದಯಾಘಾತ (Heart attack) ಸಮಸ್ಯೆ ಹೆಚ್ಚಾಗಿ ಕಾಡುತ್ತ ಇದೆ,ಸಣ್ಣ ಸಣ್ಣ ಮಕ್ಕಳು ಸಹ ಹೃದಯಾಘಾತಕ್ಕೆ ಬಲಿಯಾಗುತ್ತ ಇದ್ದಾರೆ.ಕೋವಿಡ್ ಎಂಆರ್ಎನ್ಎ (mRNA) ಲಸಿಕೆಯೂ ಮಕ್ಕಳ ಹೃದಯದ ಆರೋಗ್ಯದ (Heart health) ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.ಕೋವಿಡ್ ಎಂಆರ್ಎನ್ಎ ವ್ಯಾಕ್ಸಿನ್ (Covid mRNA vaccine) ಪಡೆದ ಮಕ್ಕಳಲ್ಲಿ ಹೃದಯಾಘಾತ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಬಾಂಬ್ ಶೆಲ್ (Bomb shell) ಅಧ್ಯಯನವು ದೃಢಪಡಿಸಿದೆ.

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ (Heart attack) ಪ್ರತಿಯೊಬ್ಬರಲ್ಲೂ ಕಾಡುವ ಸಾಮಾನ್ಯ ಸಮಸ್ಯೆಯಾಗಿ ಬಿಟ್ಟಿದೆ.ಪುರುಷರು,ಮಹಿಳೆಯರು ,ವಯೋ ವೃದ್ದರು ಎಂಬ ವ್ಯತ್ಯಾಸವೇ ಇಲ್ಲದೆ ಹಾರ್ಟ್ ಅಟ್ಯಾಕ್ ನಿಂದ ಸಾವಿಗೀಡಾಗುತ್ತಾ ಇದ್ದಾರೆ.ಅದರಲ್ಲಿಯೂ ಹತ್ತು ವರ್ಷದೊಳಗಿನ ಮಕ್ಕಳನ್ನು ಸಹ ಹಾರ್ಟ್ ಅಟ್ಯಾಕ್ ಕಾಡುತ್ತಿದೆ. ಇದೀಗ ಕೋವಿಡ್ (Covid) ಎಂಆರ್ಎನ್ಎ (mRNA) ಲಸಿಕೆ ಪಡೆದ ಮಕ್ಕಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಬಾಂಬ್ ಶೆಲ್ ಅಧ್ಯಯನವು ದೃಢವಾಗಿ ತಿಳಿಸಿದೆ.ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ (Oxford University) ಪ್ರೊಫೆಸರ್ ಕಾಲ್ನಡಿ ಆಂಡ್ಯೂಸ್ ನೇತೃತ್ವದ ಯುಕೆ ಪ್ರಮುಖ ವೈದ್ಯಕೀಯ ತಜ್ಞರು (Medical experts), ಸಾಂಕ್ರಾಮಿಕ ರೋಗಶಾಸ್ತ್ರಜ್ಞರು (Epidemiologists) , ಜೈವಿಕ ಸಂಖ್ಯಾಶಾಸ್ತ್ರಜ್ಞರು (Biostatisticians) ಮತ್ತು ಸಾರ್ವಜನಿಕ ಆರೋಗ್ಯ ತಜ್ಞರ (Public health experts) ತಂಡವು ಈ ಅಧ್ಯಯನವನ್ನು ನಡೆಸಿದೆ. ಈ ಅಧ್ಯಯನಕ್ಕೆ 5 ರಿಂದ 15 ವಯಸ್ಸಿನ 1.7 ಮಿಲಿಯನ್ (million) ಮಕ್ಕಳನ್ನು ಒಳಪಡಿಸಲಾಗಿದೆ.

ಸಂಶೋಧನಾ ತಂಡವು (Research team) ವ್ಯಾಕ್ಸಿನ್ ಪಡೆದ ಮಕ್ಕಳು ವ್ಯಾಕ್ಸಿನ್ ಪಡೆಯದ ಮಕ್ಕಳು ಎಂದು ಗುಂಪುಗಳಾಗಿ ಬೇರ್ಪಡಿಸಿ ಸಂಶೋಧನೆ (Research) ನಡೆಸಿದ್ದಾರೆ.ಈ ಸಂಶೋದನೆಯಲ್ಲಿ ಲಸಿಕೆ ಪಡೆದ ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು (Cardiovascular diseases) ಹೆಚ್ಚಾಗಿ ಕಾಡುತ್ತಿವೆ ಎಂದು ತಿಳಿದು ಬಂದಿದೆ,ಇನ್ನು ಲಸಿಕೆ ಪಡೆಯದ ಮಕ್ಕಳು ಯಾವುದೇ ರೀತಿಯ ಹೃದಯ ಸಂಬಂಧಿ ಕಾಯಿಲೆಯನ್ನು ಎದುರಿಸುತ್ತಿಲ್ಲ. ಕೋವಿಡ್ ಎಂಆರ್ಎನ್ಎ ಲಸಿಕೆಯೂ ಮಕ್ಕಳಿಗೆ ಕಡಿಮೆ ರಕ್ಷಣೆಯನ್ನು ನೀಡಿದೆ,ಈ ಲಸಿಕೆ ಪಡೆದ ನಂತರವೂ ಮತ್ತೆ ಸೋಂಕಿಗೆ ಒಳಗೊಳ್ಳುತ್ತಾರೆ ಎಂಬುದು ಸಹ ಅಧ್ಯಯನದಿಂದ ಬಯಲಾಗಿದೆ.