Jaipur : ರಾಜಸ್ಥಾನದ (Rajasthan) ಜೈಪುರದಲ್ಲಿ ಭಾನುವಾರ ಮಹಿಳೆಯೊಬ್ಬರು ಧರಿಸಿದ್ದ ಬೆಳ್ಳಿಯ ಕಾಲುಂಗುರವನ್ನು ಕದಿಯಲು ಸಂಚು ಹೂಡಿದ್ದ ದರೋಡೆಕೋರರು ಆಕೆಯ ಕಾಲನ್ನೇ ಕತ್ತರಿಸಿರುವ ವಿಲಕ್ಷಣ ಘಟನೆ ನಡೆದಿದೆ.
ಸುಮಾರು 100 ವರ್ಷ ವಯಸ್ಸಿನ ವೃದ್ಧೆಯ ಕಾಲಿನಲ್ಲಿದ್ದ ಕಾಲುಂಗುರವನ್ನು (Robbers cut women leg to steal) ಕದಿಯಲು ಆಕೆಯ ಕಾಲನ್ನು ಕತ್ತರಿಸಿ, ರಕ್ತದ ಮಡುವಿನಲ್ಲಿ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.
ಇದನ್ನೂ ಓದಿ : https://vijayatimes.com/floating-post-office-in-india/
ಪೊಲೀಸರ ಪ್ರಕಾರ, ಘಟನೆಯು ಸುಮಾರು 5 ಗಂಟೆಗೆ ಸಂಭವಿಸಿದೆ ಎನ್ನಲಾಗಿದೆ. ದರೋಡೆಕೋರರು, ಬೆಳ್ಳಿಯ ಕಾಲುಂಗುರಗಳನ್ನು ಕದಿಯುವ ಪ್ರಯತ್ನದಲ್ಲಿ, ಮಹಿಳೆಯ ಕಾಲನ್ನು ಕತ್ತರಿಸಿ, ಆಕೆಗೆ ತೀವ್ರ ರಕ್ತಸ್ರಾವ ಮತ್ತು ನೋವಿನಿಂದ ನರಳುತ್ತಿದ್ದರು.
ಮಹಿಳೆಯನ್ನು ಜಮುನಾ ದೇವಿ ಎಂದು ಗುರುತಿಸಲಾಗಿದ್ದು, ಸದ್ಯ ಅವರು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಿಳೆಯ ಕುಟುಂಬ ನೀಡಿರುವ ಮಾಹಿತಿ ಅನುಸಾರ, ಅವರು ತಮ್ಮ ಮಗಳು ಮತ್ತು ಮೊಮ್ಮಗಳೊಂದಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ. ಭಾನುವಾರ ಆಕೆಯನ್ನು ಮನೆಯಿಂದ ಹೊರಕ್ಕೆ ಎಳೆದೊಯ್ದ ದರೋಡೆಕೋರರು,
ಹರಿತವಾದ ಆಯುಧದಿಂದ ಆಕೆಯ ಪಾದಗಳನ್ನು ಕತ್ತರಿಸಿ, ಕಾಲುಂಗುರಗಳನ್ನು ಕಸಿದು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಮಹಿಳೆಯ ಪರಿಸ್ಥಿತಿ ಚಿಂತಾಜನಕವಾಗಿದೆ.

ಮುಂಜಾನೆ ಈ ದಾಳಿ ನಡೆದಿದ್ದು, ಕುಟುಂಬಸ್ಥರು ಗಾಢ ನಿದ್ರೆಗೆ ಜಾರಿದ (Robbers cut women leg to steal) ಸಮಯದಲ್ಲಿ ದಾಳಿ ನಡೆದ ಕಾರಣ ಯಾರ ಅರಿವಿಗೂ ಬಂದಿಲ್ಲ.
ಮಹಿಳೆಯ ಮನೆಯವರು ಗುರುತು ಹಿಡಿಯುವ ಮುನ್ನವೇ ಕಳ್ಳರು ಕಾಲುಂಗುರ ಕದ್ದು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಫೋರೆನ್ಸಿಕ್ ತಜ್ಞರ ಸಹಾಯದಿಂದ ಪೊಲೀಸರು ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು,
ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಶಂಕಿತರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ.
https://youtu.be/qW6GFcPSipQ ಸಾಹೇಬ್ರಿಗೆ ಕಾಫಿ ತೆಗೆದುಕೊಂದು ಹೋಗಲು ಬೇಕು ಸರ್ಕಾರಿ ವಾಹನ!